Onam Festival:ಎಸ್‌ಬಿಐ ಬ್ಯಾಂಕ್‌ನಲ್ಲಿ ರಾಜ ಮಹಾಬಲಿ; ವೀಡಿಯೋ ವೈರಲ್

By Suvarna NewsFirst Published Sep 6, 2022, 11:09 AM IST
Highlights

ದೇವರ ಸ್ವಂತ ನಾಡು ಕೇರಳದಲ್ಲಿ ಆಚರಿಸುವ ಪ್ರಸಿದ್ಧವಾದ ಹಬ್ಬ ಓಣಂ. ಪುರಾಣಗಳ ಪ್ರಕಾರ, ಓಣಂ ಅನ್ನು ರಾಜ ಮಹಾಬಲಿಯ ಮರಳಿ ಬರುವ ನೆನಪಿಗಾಗಿ ಆಚರಿಸಲಾಗುತ್ತದೆ. ಹೀಗಿರುವಾಗ ಕೇರಳದಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರು ಮಹಾಬಲಿಯಂತೆ ವೇಷ ಧರಿಸಿ ಬಂದಿದ್ದು, ಕರ್ತವ್ಯ ಸಲ್ಲಿಸಿದ್ದಾರೆ. ಈ ವೀಡಿಯೋ ಸದ್ಯ ಎಲ್ಲೆಡೆ ವೈರಲ್ ಆಗ್ತಿದೆ. 

ಕೇರಳ ರಾಜ್ಯದ ವಿಶೇಷ ಹಬ್ಬ ಓಣಂ. ಆಗಸ್ಟ್​ ಮತ್ತು ಸೆಪ್ಟೆಂಬರ್​ನಲ್ಲಿ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಓಣಂ ಹಬ್ಬ ಹತ್ತು ದಿನ ಸಂಭ್ರಮದಿಂದ ಕೂಡಿರುತ್ತದೆ. ಪುರಾಣಗಳ ಪ್ರಕಾರ, ಓಣಂ ಅನ್ನು ರಾಜ ಮಹಾಬಲಿಯ ಮರಳಿ ಬರುವ ನೆನಪಿಗಾಗಿ ಆಚರಿಸಲಾಗುತ್ತದೆ.
ತನ್ನ ಪ್ರಜೆಗಳನ್ನು ನೋಡಲು ಬರುವ ಮಹಾಬಲಿಯನ್ನು ಸ್ವಾಗತಿಸಲು ಜನರು ಓಣಂ ಹಬ್ಬವನ್ನು ಮಾಡಿ ಸಂಭ್ರಮಿಸುತ್ತಾರೆ.  ಆಚರಣೆಗಳು ಆಥಂ ದಿನದಂದು ಆರಂಭವಾಗಿ ಹತ್ತು ದಿನಗಳ ಕಾಲ ತಿರುವೋಣಂ ದಿನದವರೆಗೆ ನಡೆಯುತ್ತದೆ, ಇದನ್ನು ಹಬ್ಬದ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಓಣಂ ಹಬ್ಬದ ಈ ಸಂಭ್ರಮದ ಮಧ್ಯೆಯೇ ಕೇರಳದಲ್ಲಿ ವ್ಯಕ್ತಿಯೊಬ್ಬರು ಮಹಾಬಲಿಯಂತೆ ವೇಷ ಧರಿಸಿರೋದು ಎಲ್ಲೆಡೆ ವೈರಲ್ ಆಗಿದೆ. 

ರಾಜ ಮಹಾಬಲಿಯಂತೆ ವೇಷಧರಿಸಿಕೊಂಡು ಬಂದ ಬ್ಯಾಂಕ್ ಉದ್ಯೋಗಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತಲಶ್ಶೇರಿಯ ಉದ್ಯೋಗಿ (Employee)ಯೊಬ್ಬರು ರಾಜ ಮಹಾಬಲಿಯಂತೆ ವೇಷಧರಿಸಿಕೊಂಡು ಬಂದು ಬ್ಯಾಂಕ್‌ನಲ್ಲಿ ಕೆಲಸ (Work) ಮಾಡಿದ್ದಾರೆ. ಟ್ವಿಟರ್‌ನಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾ ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿದೆ. ಕ್ಲಿಪ್ ಅನ್ನು ನಿಕ್ಸನ್ ಜೋಸೆಫ್ ಅವರು ಭಾನುವಾರ ಹಂಚಿಕೊಂಡಿದ್ದಾರೆ. ಕೇರಳದ ತಲಶ್ಶೇರಿಯಲ್ಲಿರುವ ಎಸ್‌ಬಿಐ ಶಾಖೆಗೆ ವ್ಯಕ್ತಿ ಮಹಾಬಲಿಯಂತೆ ವೇಷ ಧರಿಸಿ ಬಂದಿದ್ದಾರೆ ಎಂದು ಪೋಸ್ಟ್‌ನ ಶೀರ್ಷಿಕೆ ತಿಳಿಸಿದೆ. ಓಣಂ ಆರಂಭವನ್ನು ಗುರುತಿಸಲು ಸಿಬ್ಬಂದಿ ಪೌರಾಣಿಕ ರಾಜ ಮಹಾಬಲಿಯಂತೆ ಧರಿಸಲು ನಿರ್ಧರಿಸಿದರು ಎಂದು ತಿಳಿದುಬಂದಿದೆ.

Onam Festival: ದೇವರನಾಡಿನಲ್ಲಿ ಆಚರಿಸುವ ಓಣಂ ಹಬ್ಬದ ವಿಶೇಷತೆಯೇನು?

ಶೀರ್ಷಿಕೆಯಲ್ಲಿ, ಜೋಸೆಫ್, 'ಎಸ್‌ಬಿಐ ಸಿಬ್ಬಂದಿಯೊಬ್ಬರು ಪೌರಾಣಿಕ ರಾಜ ಮಹಾಬಲಿಯಂತೆ ವೇಷಧರಿಸಿ ಕೌಂಟರ್‌ನಲ್ಲಿ ಸೇವೆಗ ಸಲ್ಲಿಸುತ್ತಿದ್ದಾರೆ. ಅವರ ಉತ್ಸಾಹಕ್ಕೆ ಅಭಿನಂದನೆಗಳು' ಎಂದು ತಿಳಿಸಿದ್ದಾರೆ. ಈ ವೀಡಿಯೋ ಇಂಟರ್‌ನೆಟ್‌ನಲ್ಲಿ 31,000 ವೀಕ್ಷಣೆಗಳು(Views) ಮತ್ತು ನೂರಾರು ಲೈಕ್ಸ್‌ ಗಳಿಸಿದೆ. ಹಲವಾರು ಇಂಟರ್ನೆಟ್ ಬಳಕೆದಾರರು ಉದ್ಯೋಗಿಯ ನಡೆಯನ್ನು ಮೆಚ್ಚಿದ್ದಾರೆ. ಒಬ್ಬ ಬಳಕೆದಾರರು 'ವ್ಯಕ್ತಿಯ ಹಬ್ಬದ (Festival) ಕುರಿತಾದ ಬದ್ಧತೆಯನ್ನು ನೋಡಲು ಅದ್ಭುತವಾಗಿದೆ' ಎಂದು ಹೇಳಿದರು. ಇನ್ನೊಬ್ಬರು 'ಸಿಬ್ಬಂದಿಯಿಂದ ಉತ್ತಮ ನಡವಳಿಕೆ, ಬ್ಯಾಂಕ್‌ಗಳು ಸಹ ಪ್ರತಿ ಹಬ್ಬವನ್ನು ಗರಿಷ್ಠ ಉತ್ಸಾಹದಿಂದ ಆಚರಿಸಬೇಕು' ಎಂದು ತಿಳಿಸಿದರು.


ಸಿಬ್ಬಂದಿಯ ಹಬ್ಬದ ಕುರಿತಾದ ಬದ್ಧತೆಗೆ ನೆಟ್ಟಿಗರ ಮೆಚ್ಚುಗೆ

ವೀಡಿಯೊ, ಸಿಬ್ಬಂದಿ ತನ್ನ ರಾಜ ಮಹಾಬಲಿ ವೇಷದಲ್ಲಿ ಆತ್ಮವಿಶ್ವಾಸದಿಂದ ಕರ್ತವ್ಯ (Duty)ಗಳನ್ನು ಪೂರೈಸುವುದನ್ನು ತೋರಿಸಿದೆ. ಆತನ ಸುತ್ತ ಎಂದಿನಂತೆ ವ್ಯಾಪಾರ ನಡೆಸುತ್ತಿರುವ ಜನರು ಗುರುತಿಸಿಕೊಂಡಿದ್ದಾರೆ. ನೆಟಿಜನ್‌ಗಳು ಅವರ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದರು ಮತ್ತು ಅವರ ವಿಶಿಷ್ಟ ಸಂಸ್ಕೃತಿಯೊಂದಿಗೆ ಕೆಲಸವನ್ನು ಸಂಯೋಜಿಸಲು ಪ್ರಯತ್ನಿಸುತ್ತಿರುವ ಅವನ ವರ್ತನೆಗೆ ಮೆಚ್ಚುಗೆ (Compliment) ಸೂಚಿಸಿದರು. ಕ್ಲಿಪ್‌ಗೆ ಪ್ರತಿಕ್ರಿಯಿಸಿದ ಬಳಕೆದಾರರು, 'ಸಂಸ್ಕೃತಿ, ಸೇವೆ ಮತ್ತು ಮಾರ್ಕೆಟಿಂಗ್ ಅನ್ನು ಸಂಯೋಜಿಸುವ ನವೀನ ಮಾರ್ಗ' ಎಂದು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ಬರೆದರು, 'ಶ್ರೇಷ್ಠ ಮತ್ತು ಪ್ರಶಂಸನೀಯ. ಚೆಕ್ ಅಥವಾ ಡೆಬಿಟ್ ಖಾತೆಯಿಲ್ಲದೆ ಆಶೀರ್ವಾದವಾಗಿ ಪಾವತಿಗಳನ್ನು ನೀಡಿದರೆ, ಮಹಾಬಲಿಯ ಪ್ರಜೆಗಳಿಗೆ ಸಂತೋಷವಾಗುತ್ತದೆ' ಎಂದು ತಿಳಿಸಿದ್ದಾರೆ. 

Onam Pookalam: ಓಣಂ ಹಬ್ಬಕ್ಕೆ ಹೂವಿನ ರಂಗೋಲಿ ಹಾಕುವುದು ಯಾಕೆ ?

ಹೀಗಿದ್ದೂ, ಕೆಲ ಟ್ವಿಟ್ಟರ್ ಬಳಕೆದಾರರು ಸಹ ಉದ್ಯೋಗಿ ಹಬ್ಬಕ್ಕೆ ಉಡುಗೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಮತ್ತು ಔಪಚಾರಿಕ ಬಟ್ಟೆಗಳನ್ನು ಧರಿಸದಿದ್ದಕ್ಕಾಗಿ ಟೀಕಿಸಿದರು, ಸಾಮಾನ್ಯವಾಗಿ ಎಸ್‌ಬಿಐ ಉದ್ಯೋಗಿಗಳು ಡ್ರೆಸ್ ಕೋಡ್ ಪಾಲಿಸುವುದು ನಿಯಮವಾಗಿದೆ. ಹೀಗಾಗಿ ಗ್ರಾಹಕ ಸ್ನೇಹಿ ಆದರೆ ಡ್ರೆಸ್ ಕೋಡ್‌ನ ನಿಯಮವಿದೆ, ಅದನ್ನು ಅನುಸರಿಸಬೇಕು ಎಂದಿದ್ದಾರೆ.

ಮಲಯಾಳಿಗರ ಓಣಂ ಹಬ್ಬದ ಇತಿಹಾಸ
ಓಣಂ ಹಬ್ಬವು ಸಾಮಾನ್ಯವಾಗಿ ಮಲಯಾಳಿ ತಿಂಗಳ ಚಂಗಮ್‌ನಲ್ಲಿ ಬರುತ್ತದೆ ಮತ್ತು ಇದು ರಾಜ ಮಹಾಬಲಿಯ ಮನೆಗೆ ಮರಳುವುದನ್ನು ಸಹ ಸೂಚಿಸುತ್ತದೆ. ಕೇರಳದಲ್ಲಿ, ಇದು ಒಂದು ವಾರದ ಹಬ್ಬವಾಗಿದ್ದು, ಇದನ್ನು ಬಹಳ ವಿಜೃಂಭಣೆಯಿಂದ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಅಲಂಕರಿಸುತ್ತಾರೆ, ಅಕ್ಕಿ ಪುಡಿ ಅಥವಾ ತಾಜಾ ಹೂವುಗಳಿಂದ ರಂಗೋಲಿಗಳನ್ನು ವಿನ್ಯಾಸಗೊಳಿಸುತ್ತಾರೆ, ಹೊಸ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಸ್ನೇಹಿತರು ಮತ್ತು ಕುಟುಂಬವನ್ನು ಭೇಟಿ ಮಾಡುತ್ತಾರೆ. ಈ ವರ್ಷ, ಓಣಂ ಹಬ್ಬವು ಆಗಸ್ಟ್ 30 ರಂದು ಪ್ರಾರಂಭವಾಯಿತು ಮತ್ತು ಸೆಪ್ಟೆಂಬರ್ 8 ರವರೆಗೆ ಮುಂದುವರಿಯುತ್ತದೆ.

click me!