ವಿಧ್ವಂಸಕ ಕೃತ್ಯವೋ? ಅಪಘಾತವೋ?: ಒಡಿಶಾ ರೈಲು ದುರಂತದ ಹಿಂದಿನ ಸತ್ಯವೇನು..

By BK Ashwin  |  First Published Jun 4, 2023, 3:44 PM IST

ಒಡಿಶಾ ರೈಲು ದುರಂತಕ್ಕೆ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್‌ನ ಮೇಲೆ ಪರಿಣಾಮ ಬೀರುವ ಪಾಯಿಂಟ್ ಯಂತ್ರದ ಸೆಟ್ಟಿಂಗ್‌ನಲ್ಲಿನ ಬದಲಾವಣೆಯೇ ಕಾರಣ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. 


ನವದೆಹಲಿ (ಜೂನ್ 4, 2023): ಶುಕ್ರವಾರ ಸಂಜೆ ಸಂಭವಿಸಿದ ಒಡಿಶಾ ರೈಲು ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ವಿದೇಶಿ ಗಣ್ಯರು ಸಹ ಈ ಅಪಘಾತಕ್ಕೆ ಸಂತಾಪ ಸೂಚಿಸಿದ್ದಾರೆ. ಈ ರೈಲು ಅವಘಡಕ್ಕೆ ಸಿಗ್ನಲ್‌ ಎಡವಟ್ಟು ಅಥವಾ ರೈಲ್ವೆ ಅಧಿಕಾರಿಯೊಬ್ಬರ ಎಡವಟ್ಟು ಕಾರಣ ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ. ಇನ್ನು, ಇದು ದುಷ್ಕರ್ಮಿಗಳ ಕೈವಾಡ ಎಂದೂ ಕೆಲವರು ಆರೋಪ ಮಾಡುತ್ತಿದ್ದಾರೆ. ಸಾಮಾಜಕ ಜಾಲತಾಣದಲ್ಲಿ ನೆಟ್ಟಿಗರು ಸಹ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ತ್ರಿವಳಿ ರೈಲುಗಳು ಡಿಕ್ಕಿ ಹೊಡೆದು ಕನಿಷ್ಠ 288 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇನ್ನು, ಒಡಿಶಾ ರೈಲು ದುರಂತಕ್ಕೆ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್‌ನ ಮೇಲೆ ಪರಿಣಾಮ ಬೀರುವ ಪಾಯಿಂಟ್ ಯಂತ್ರದ ಸೆಟ್ಟಿಂಗ್‌ನಲ್ಲಿನ ಬದಲಾವಣೆಯೇ ಕಾರಣ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. 

Tap to resize

Latest Videos

ಇದನ್ನು ಓದಿ: ರೈಲು ಹಳಿ ಮೇಲೆ ಟೈರ್‌ ಇಟ್ಟ ಕಿಡಿಗೇಡಿಗಳು: ತಮಿಳುನಾಡಲ್ಲಿ ತಪ್ಪಿದ ಮತ್ತೊಂದು ಭೀಕರ ರೈಲು ದುರಂತ!

ಮುಖ್ಯ ಮಾರ್ಗದಲ್ಲಿ ಪೂರ್ಣ ವೇಗದಲ್ಲಿ ಚಲಿಸುತ್ತಿದ್ದ ಪ್ಯಾಸೆಂಜರ್ ರೈಲು (12841 ಕೋರಮಂಡಲ್ ಎಕ್ಸ್‌ಪ್ರೆಸ್) ಲೂಪ್ ಲೈನ್‌ನಲ್ಲಿ ಪ್ರವೇಶಿಸಿದೆ. ಲೂಪ್ ಲೈನ್‌ನಲ್ಲಿ ಗೂಡ್ಸ್ ರೈಲು ನಿಂತಿದ್ದಾಗಲೇ ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲು ಸಹ ಪ್ರವೇಶಿಸಿದೆ. ಪ್ಯಾಸೆಂಜರ್ ರೈಲಿನ ಹಳಿ ಬದಲಾವಣೆಯೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ರೈಲು ಅಪಘಾತದ ಬಗ್ಗೆ ರೈಲ್ವೆ ಸಚಿವರು ಬಹಿರಂಗಪಡಿಸಿದ್ದಾರೆ.

ಮೂಲಗಳ ಪ್ರಕಾರ ರೈಲು 128 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು ಎಂದು ಅಂದಾಜಿಸಲಾಗಿದೆ. ಆದರೆ, ಮುಖ್ಯ ಮಾರ್ಗದಲ್ಲಿ ಓಡುತ್ತಿದ್ದ ರೈಲನ್ನು ಲೂಪ್ ಲೈನ್‌ಗೆ ಏಕೆ ತಿರುಗಿಸಲಾಯಿತು ಎಂಬುದು ಇಲ್ಲಿ ಪ್ರಮುಖ ಪ್ರಶ್ನೆಯಾಗಿದೆ. ಈ ಮಧ್ಯೆ, ಮೂರನೇ ರೈಲು, 12864 ಯಶವಂತಪುರ - ಹೌರಾ ಎಕ್ಸ್‌ಪ್ರೆಸ್, 126 ಕಿಮೀ ವೇಗದಲ್ಲಿ ಚಲಿಸುತ್ತಿತ್ತು. ಎರಡೂ ರೈಲುಗಳು ಅನುಮತಿಸಲಾದ ಮಿತಿಗಳಲ್ಲಿ ವೇಗದಲ್ಲಿ ಚಲಿಸುತ್ತಿದ್ದವು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಒಡಿಶಾ ರೈಲು ದುರಂತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ ವಿಶ್ವದ ದೊಡ್ಡಣ್ಣ ಜೋ ಬೈಡೆನ್‌, ಕ್ಸಿ ಜಿನ್‌ಪಿಂಗ್‌

ರೈಲು ಪಾಯಿಂಟ್ ಸೆಟ್ಟಿಂಗ್‌ಗಳನ್ನು ಹೇಗೆ ಬದಲಾಯಿಸಲಾಗುತ್ತದೆ?
ರೈಲಿನ ಪಾಯಿಂಟ್ ಸೆಟ್ಟಿಂಗ್‌ನಲ್ಲಿನ ಬದಲಾವಣೆಯೇ ಅಪಘಾತದ ಹಿಂದಿನ ಪ್ರಮುಖ ಕಾರಣ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬಹಿರಂಗಪಡಿಸಿದ್ದಾರೆ. ಈ ಹಿನ್ನೆಲೆ ಸಿಗ್ನಲ್ ಸೆಟ್ಟಿಂಗ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಅವುಗಳನ್ನು ಹೇಗೆ ಬದಲಾಯಿಸಬಹುದು ಎಂಬ ವಿಚಾರದ ಬಗ್ಗೆ ರೈಲಿನಲ್ಲಿ ಪ್ರಯಾಣಿಸುವ ಸಾಮಾನ್ಯ ಜನರಲ್ಲೂ ಕುತೂಹಲ ಮೂಡುತ್ತದೆ. ಇನ್ನು, ಈ ಅಪಘಾತ ಪ್ರಕರಣದಲ್ಲಿ ಪಾಯಿಂಟ್ ಮೆಷಿನ್‌ನ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಜವಾಬ್ದಾರಿಯು ಬಹನಾಗ ಬಜಾರ್ ರೈಲು ನಿಲ್ದಾಣದ ಮೇಲೆ ಇತ್ತು ಮತ್ತು ಬಾಲಸೋರ್ ನಿಲ್ದಾಣದ ಅಧಿಕಾರಿಯ ಮೇಲಲ್ಲ ಎಂದು ಗ್ರೌಂಡ್ ರಿಪೋರ್ಟ್ ಸೂಚಿಸಿದೆ.

ಇನ್ನು, ಇಂಟರ್‌ಲಾಕಿಂಗ್ ಪ್ರಕ್ರಿಯೆಯನ್ನು ವಿವರಿಸಿದ ಸ್ಟೇಷನ್ ಮಾಸ್ಟರ್, ರೈಲ್ವೆ ಹಳಿಗಳನ್ನು ನಿಯೋಜಿಸುವ ಜವಾಬ್ದಾರಿ ನಿಲ್ದಾಣದ ಮೇಲಿದೆ. ಅಪಘಾತಕ್ಕೀಡಾದ ರೈಲಿಗೆ ರೈಲ್ವೆ ಹಳಿಗಾಗಿ ಸಿಗ್ನಲ್ ಅನ್ನು ಘಟನೆ ಸಂಭವಿಸಿರುವ ಬಹಾನಗರ್ ರೈಲು ನಿಲ್ದಾಣದಲ್ಲಿ ನೀಡಲಾಯಿತು ಎಂದೂ ಹೇಳಿದ್ದಾರೆ.

ಇದನ್ನೂ ಓದಿ: Odisha Train Accident: ಸಾವಲ್ಲೂ ರಾಜಕೀಯ; ನಾರ್ಸಿಸಿಸ್ಟಿಕ್ ಪ್ರಚಾರ ಮಂತ್ರಿ ಎಂದು ಮೋದಿ ವಿರುದ್ಧ ಆರ್‌ಜೆಡಿ ವಾಗ್ದಾಳಿ

ಗಮನಾರ್ಹವಾಗಿ ಆಗ್ನೇಯ ರೈಲ್ವೆಯ ಖರಗ್‌ಪುರ ರೈಲ್ವೆ ವಿಭಾಗದ ಭಾಗವಾಗಿರುವ ಒಡಿಶಾದ ಬಾಲಸೋರ್ ಜಿಲ್ಲೆಯ ಬಹಾನಗರ್ ಬಜಾರ್ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ. ಮೂರು ರೈಲುಗಳು - ಎರಡು ಪ್ಯಾಸೆಂಜರ್ ರೈಲುಗಳು ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದ್ದವು ಮತ್ತು ಒಂದು ನಿಂತಿರುವ ಗೂಡ್ಸ್ ರೈಲು ಅಪಘಾತದಲ್ಲಿ ಭಾಗಿಯಾಗಿದೆ.

ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಸೆಟ್ಟಿಂಗ್‌ಗಳಲ್ಲಿ ಬದಲಾವಣೆ ಆರೋಪಿಸಿದ ರೈಲ್ವೆ ಸಚಿವಾಲಯ
ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಸೆಟ್ಟಿಂಗ್‌ಗಳಲ್ಲಿ ಬದಲಾವಣೆಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಭಾನುವಾರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಆರೋಪಿಸಿದ್ದು, ಇದು ‘ಅಪರಾಧ ಚಟುವಟಿಕೆ’ ಎಂದಿದ್ದಾರೆ. "ಘಟನೆಗೆ ಕಾರಣ ಮತ್ತು ಅದಕ್ಕೆ ಕಾರಣರಾದವರನ್ನು ನಾವು ಗುರುತಿಸಿದ್ದೇವೆ. ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್‌ನಲ್ಲಿನ ಬದಲಾವಣೆಯಿಂದಾಗಿ ಇದು ಸಂಭವಿಸಿದೆ" ಎಂದು ಕೇಂದ್ರ ಸಚಿವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು. 

ಇದನ್ನೂ ಓದಿ: ಕೈಕಾಲುಗಳಿಲ್ಲದ ದೇಹಗಳು, ರಕ್ತದ ಹೊಳೆ: ಪ್ರತ್ಯಕ್ಷದರ್ಶಿಗಳು ಹಂಚಿಕೊಂಡ ರೈಲು ಅಪಘಾತ ಸ್ಥಳದ ಭಯಾನಕ ಕಥೆ ಹೀಗಿದೆ..

ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ (EI) ವ್ಯವಸ್ಥೆಯು ಮೈಕ್ರೋಪ್ರೊಸೆಸರ್ - ಆಧಾರಿತ ಇಂಟರ್‌ಲಾಕಿಂಗ್ ಸಾಧನವಾಗಿದ್ದು, ಯಾರ್ಡ್‌ ಮತ್ತು ಪ್ಯಾನೆಲ್‌ನ ಒಳಹರಿವುಗಳನ್ನು ಹೇಳಲು ಸಹಾಯ ಮಾಡುತ್ತದೆ. ಇದು ರೈಲು ಕಾರ್ಯಾಚರಣೆಗಳಲ್ಲಿ ಸುರಕ್ಷತೆ ಮತ್ತು ನಮ್ಯತೆಯನ್ನು ಖಾತ್ರಿಗೊಳಿಸುತ್ತದೆ. ಸರಳವಾಗಿ ಹೇಳುವುದಾದರೆ, ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ (EI) ವ್ಯವಸ್ಥೆಯನ್ನು ಸಂಘರ್ಷದ ರೈಲು ಚಲನೆಗಳನ್ನು ತಡೆಗಟ್ಟಲು ಮತ್ತು ಸಾಧ್ಯವಾದಷ್ಟು ಮಾನವ ದೋಷಗಳನ್ನು ತೊಡೆದುಹಾಕಲು ಒಂದು ವ್ಯವಸ್ಥೆ ಎಂದು ವ್ಯಾಖ್ಯಾನಿಸಬಹುದು.

ಇದನ್ನೂ ಓದಿ: ಒಡಿಶಾ ರೈಲು ಅಪಘಾತ ಎಫೆಕ್ಟ್‌: 48 ರೈಲುಗಳು ರದ್ದು, 39 ರೈಲುಗಳ ಮಾರ್ಗ ಬದಲಾವಣೆ; ವಿವರ ಇಲ್ಲಿದೆ..

click me!