
ಶಬರಿಮಲೆ(ನ.16): ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಭಾನುವಾರ ಸಂಜೆ ತೆರೆದಿದೆ. ಭಕ್ತರಿಗೆ ಸೋಮವಾರದಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
"
ಭಾನುವಾರ ಸಂಜೆ 5 ಗಂಟೆಗೆ ಈವರೆಗೆ ಮುಖ್ಯ ಅರ್ಚಕರಾಗಿದ್ದ ಎ.ಕೆ. ಸುಧೀಂದ್ರ ನಂಬೂದರಿ ಅವರು ತಂತ್ರಿ ಕಂಡರಾರು ರಾಜೀವರು ಅವರ ಸಮ್ಮುಖದಲ್ಲಿ ಗರ್ಭಗುಡಿಯ ಬಾಗಿಲು ತೆರೆದರು. ಹೊಸ ಮುಖ್ಯ ಅರ್ಚಕ ವಿ.ಕೆ. ಜಯರಾಜ ಪೊಟ್ಟಿಹಾಗೂ ಅರ್ಚಕ ಎಂ.ಎನ್. ರಾಜಕುಮಾರ್ ಮೊದಲು 18 ಮೆಟ್ಟಿಲು ಏರಿ ಆಶೀರ್ವಾದ ಪಡೆದರು ಹಾಗೂ ಅರ್ಚಕತ್ವದ ಪದಗ್ರಹಣ ಮಾಡಿದರು. 62 ದಿನಗಳ ಅವಧಿಯ ವಾರ್ಷಿಕ ಮಂಡಲ-ಮಕರವಿಳಕ್ಕು ಯಾತ್ರೆಗೆ ಇದರೊಂದಿಗೆ ಶ್ರೀಕಾರ ದೊರಕಿದೆ.
ಕೊರೋನಾ ಕಾರಣ ನಿತ್ಯ 1000 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದ್ದು, ಪಂಪಾ-ನೀಲಕ್ಕಲ್ ಪ್ರವೇಶಕ್ಕೆ 48 ತಾಸು ಮುನ್ನ ಎಲ್ಲರಿಗೂ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ