
ಪಟ್ಟಣಂತಿಟ್ಟ: ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ, ನ.17ರಿಂದ ಆರಂಭವಾಗಲಿರುವ ಶಬರಿಮಲೆಯಾತ್ರೆ ಯಾತ್ರಿಕರಿಗೆ ಕೇರಳ ಸರ್ಕಾರವು ಆರೋಗ್ಯ ಮಾರ್ಗದರ್ಶಿ ಬಿಡುಗಡೆ ಮಾಡಿದೆ.
ಅದರಲ್ಲಿ, ಯಾತ್ರಿಕರು ನದಿಯಲ್ಲಿ ಸ್ನಾನ ಮಾಡುವಾಗ ಮೂಗಿಗೆ ನೀರು ತಾಕದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ. ಇದೇ ವೇಳೆ ಯಾತ್ರೆಗೆ ಬರುವಾಗ ನಿಮ್ಮೊಂದಿಗೆ ಅಗತ್ಯ ಔಷಧ ತರಬೇಕು, ಯಾತ್ರೆ ಆರಂಭಕ್ಕೂ ಕೆಲ ದಿನಗಳ ಮೊದಲೇ ವಾಕಿಂಗ್ ಅಭ್ಯಾಸ ಮಾಡಿಕೊಳ್ಳಿ. ಬೆಟ್ಟ ಹತ್ತುವಾಗ ಯಾವುದೇ ಧಾವಂತ ಮಾಡದೆ ನಿಧಾನವಾಗಿ ಹತ್ತಿ.
ಆರೋಗ್ಯ ಸಹಾಯ ಬೇಕಿದ್ದಲ್ಲಿ ಅಲ್ಲಿನ ಸಿಬ್ಬಂದಿಯನ್ನು ಕೂಡಲೇ ಸಂಪರ್ಕಿಸಿ, ಒಂದು ವೇಳೆ ಹಾವು ಕಡಿದಲ್ಲಿ ತಕ್ಷಣವೇ ಸಿಬ್ಬಂದಿ ಗಮನಕ್ಕೆ ತಂದು ಚಿಕಿತ್ಸೆ ಪಡೆದುಕೊಳ್ಳಿ ಎಂದು ಸೂಚಿಸಿದೆ. ಯಾತ್ರಿಕರು ಬಯಲು ಬಹಿರ್ದೆಸೆಯನ್ನು ನಿಷೇಧಿಸಲಾಗಿದೆ. ಜೊತೆಗೆ ನಿಗದಿತ ಸ್ಥಳಗಳಲ್ಲಿಯೇ ಶೌಚಕರ್ಮ ಮುಗಿಸಿ, ಅಗತ್ಯ ಸಾಬೂನಿನಿಂದ ಕೈತೊಳೆದುಕೊಳ್ಳಬೇಕೆಂದಿದೆ. ಇದೇ ವೇಳೆ ಯಾತ್ರಿಕರು ಕೇವಲ ಬಿಸಿ ನೀರನ್ನು ಕುಡಿಯಬೇಕಾಗಿ ಹೇಳಿದೆ. ತುರ್ತು ಪರಿಸ್ಥಿತಿಗೆ 04735 203232 ಸಂಖ್ಯೆಗೆ ಕರೆ ಮಾಡಬಹುದೆಂದು ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ