ಜನಪ್ರತಿನಿಧಿಗಳು ಬೇಕಾಬಿಟ್ಟಿ ಮಾತನಾಡುವುದಕ್ಕೆ ನಿರ್ಬಂಧ : ಇಂದು ಸುಪ್ರೀಂ ತೀರ್ಪು

Published : Jan 03, 2023, 08:57 AM ISTUpdated : Jan 03, 2023, 09:02 AM IST
ಜನಪ್ರತಿನಿಧಿಗಳು ಬೇಕಾಬಿಟ್ಟಿ ಮಾತನಾಡುವುದಕ್ಕೆ ನಿರ್ಬಂಧ : ಇಂದು ಸುಪ್ರೀಂ ತೀರ್ಪು

ಸಾರಾಂಶ

ಜನಪ್ರತಿನಿಧಿಗಳು ಸರ್ಕಾರದ ನೀತಿ ನಿಯಮಗಳಿಗೆ ಅನುಗುಣವಾಗಿ ಮಾತ್ರ ಮಾತನಾಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ತೀರ್ಪನ್ನು ಸುಪ್ರೀಂಕೋರ್ಟ್‌ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಇಂದು ಪ್ರಕಟಿಸಲಿದೆ.

ನವದೆಹಲಿ: ಸರ್ಕಾರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಮನಬಂದಂತೆ ಮಾತನಾಡುವುದಕ್ಕೆ ನಿರ್ಬಂಧ ವಿಧಿಸಬೇಕು. ಸರ್ಕಾರದ ನೀತಿ ನಿಯಮಗಳಿಗೆ ಅನುಗುಣವಾಗಿ ಮಾತ್ರ ಮಾತನಾಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಮಂಗಳವಾರ ಪ್ರಕಟಿಸಲಿದೆ.

ಈ ಪೀಠದ ನೇತೃತ್ವ ವಹಿಸಿರುವ ನ್ಯಾ ಎಸ್‌.ಎ.ನಜೀರ್‌ (S.A.Nazir) ಅವರು ಜ.4ರಂದು ನಿವೃತ್ತರಾಗುತ್ತಿರುವುದರಿಂದ ಇಂದು ತೀರ್ಪು ಪ್ರಕಟವಾಗುವುದು ಬಹುತೇಕ ಖಚಿತವಾಗಿದೆ. ಅಲ್ಲದೇ ಈ ಪೀಠದಲ್ಲಿ ನ್ಯಾ ಬಿ.ಆರ್‌.ಗವಾಯಿ(BR Gavai), ನ್ಯಾ. ಎ.ಎಸ್‌.ಬೋಪಣ್ಣ(A.S. Bopanna), ನ್ಯಾ. ರಾಮಸುಬ್ರಮಣಿಯನ್‌ (Ramasubramanian)ಮತ್ತು ನ್ಯಾ. ಬಿ.ವಿ.ನಾಗರತ್ನ (B.V. Nagarathna) ಅವರಿದ್ದಾರೆ. ಅರ್ಜಿಯ ಕುರಿತಾಗಿ ವಾದ ಪ್ರತಿವಾದಗಳನ್ನು ಆಲಿಸಿದ್ದ ಸುಪ್ರಿಂಕೋರ್ಟ್‌(Supreme Court)  ನವಂಬರ್ 15ರಂದು ತೀರ್ಪನ್ನು ಕಾಯ್ದಿರಿಸಿತ್ತು. ಈ ಸಂಬಂಧ 2 ಪ್ರತ್ಯೇಕ ತೀರ್ಪು ಪ್ರಕಟವಾಗಲಿ ಎಂದು ಕೋರ್ಟ್‌ನ ಲಿಸ್ಟಿಂಗ್‌ ಹೇಳಿದೆ.

ಅರ್ಜಿ ವಿಚಾರಣೆಯ ವೇಳೆ ವಾಕ್‌ ಸ್ವಾತಂತ್ರ್ಯವಿದ್ದರೂ ಅದಕ್ಕೆ ದೇಶದಲ್ಲಿ ಸಾಂವಿಧಾನಿಕ ಮಿತಿ ಇದೆ. ಅದರಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ಏನು ಹೇಳಬೇಕು ಎಂಬುದರ ಮೇಲೆ ಅಂತರ್ಗತ ಮಿತಿ ಅಥವಾ ನಿರ್ಬಂಧವಿದೆ ಎಂಬುದನ್ನು ಕೋರ್ಟ್‌ ಗಮನಿಸಿದೆ ಎಂದು ಹೇಳಿತ್ತು. ಬುಲಂದ್‌ಶಹರ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಆಜಂ ಖಾನ್‌ (Minister Azam Khan) ನೀಡಿದ್ದ ಹೇಳಿಕೆ ವಿವಾದಾತ್ಮಕವಾಗಿತ್ತು. ಹೀಗಾಗಿ, ‘ಸಾರ್ವಜನಿಕವಾಗಿ ಹೀಗೆ ಮಾತನಾಡುವುದಕ್ಕೆ ನಿರ್ಬಂಧ ವಿಧಿಸಬೇಕು’ ಎಂದು ಸಂತ್ರಸ್ತೆಯ ಪತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ನೋಟ್‌ ಬ್ಯಾನ್‌ ಉದ್ದೇಶ ಒಳ್ಳೇದು, ಆದ್ರೆ ಕಾನೂನು ಬಾಹಿರ ಎಂದ ಕರ್ನಾಟಕ ಮೂಲದ ಸುಪ್ರೀಂಕೋರ್ಟ್‌ ಜಡ್ಜ್..!

ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯ: ಸುಪ್ರೀಂಕೋರ್ಟ್ ನ್ಯಾ.ಅಬ್ದಲ್ ನಜೀರ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಪರೇಷನ್ ಸಿಂದೂರ್ ವೇಳೆ ಯೋಧರಿಗೆ ನೆರವಾದ ಬಾಲಕನಿಗೆ ಪ್ರಧಾನ ಮಂತ್ರಿ ಬಾಲ ಪುರಸ್ಕಾರ 2026
ಭಾರತದಲ್ಲಿ ಮೊಳಗಿದ ಬಾಯ್ಕಾಟ್ ಥಾಯ್ಲೆಂಡ್ ಕೂಗು, ವಿಷ್ಣಮೂರ್ತಿ ಧ್ವಂಸಕ್ಕೆ ಆಕ್ರೋಶ