ಇನ್ಮುಂದೆ ಜನವರಿ 23 ರಿಂದ Republic Day Celebrations!

By Suvarna News  |  First Published Jan 15, 2022, 11:48 AM IST

* ಇನ್ಮುಂದೆ ಗಣರಾಜ್ಯೋತ್ಸವ ಆಚರಣೆಗಳು ಪ್ರತಿ ವರ್ಷ ಜನವರಿ 23 ರಿಂದ ಪ್ರಾರಂಭ

* ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಗಣರಾಜ್ಯೋತ್ಸವದಲ್ಲಿ ಸೇರಿಸಲು ಈ ನಿರ್ಧಾರ

* ಈ ಹಿಂದೆ ಜನವರಿ 24 ರಿಂದ ಪ್ರಾರಂಭವಾಗುತ್ತಿದ್ದ ಗಣರಾಜ್ಯೋತ್ಸವ ಸಂಭ್ರಮ


ನವದೆಹಲಿ(ಜ.15): ಗಣರಾಜ್ಯೋತ್ಸವದ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ದೇಶದಲ್ಲಿ ಗಣರಾಜ್ಯೋತ್ಸವದ ಆಚರಣೆ ಈಗ ಜನವರಿ 23 ರಿಂದ ಪ್ರಾರಂಭವಾಗಲಿದೆ ಎಂದಿದೆ. ಈ ಹಿಂದೆ ಇದು ಜನವರಿ 24 ರಿಂದ ಪ್ರಾರಂಭವಾಗುತ್ತಿತ್ತು. ಗಣರಾಜ್ಯೋತ್ಸವದ ಆಚರಣೆಯಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನೂ ಸೇರಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಮೋದಿ ಸರ್ಕಾರವು ಈ ಹಿಂದೆ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಪರಾಕ್ರಮ್ ದಿವಸ್ ಎಂದು ಆಚರಿಸಲು ಪ್ರಾರಂಭಿಸಿತ್ತು ಎಂಬುವುದು ಉಲ್ಲೇಖನೀಯ. 
ಅಧಿಕಾರಕ್ಕೆ ಬಂದ ನಂತರ ಮೋದಿ ಸರ್ಕಾರ ಇದೀಗ ಮಹತ್ವದ ದಿನವನ್ನು ಘೋಷಿಸಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಟ್ವೀಟ್ ಮಾಡುವ ಮೂಲಕ ಡಿಸೆಂಬರ್ 26ನ್ನು ವೀರ್ ಬಲ್ ದಿವಸ್ ಎಂದು ಆಚರಿಸುವುದಾಗಿ ತಿಳಿಸಿದ್ದರು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಾವ್ಯಾವ ದಿನಗಳ ಆಚರಣೆ ಆರಂಭಿಸಿತ್ತೆಂಬ ಮಾಹಿತಿ ಇಲ್ಲಿದೆ ನೊಡಿ.

* 14 ಆಗಸ್ಟ್ - ವಿಭಜನೆಯ ಭಯಾನಕ ಸ್ಮಾರಕ ದಿನ

Tap to resize

Latest Videos

undefined

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 14 ರಂದು 'ಭಜನ ವಿಭಿಷಿಕ ಸ್ಮಾರಕ ದಿನ' ಎಂದು ಆಚರಿಸಲು ಘೋಷಿಸಿದ್ದರು. ದೇಶ ವಿಭಜನೆಯ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದ್ದರು. ದ್ವೇಷ ಮತ್ತು ಹಿಂಸಾಚಾರದ ಕಾರಣ, ಲಕ್ಷಾಂತರ ಸಹೋದರಿಯರು ಮತ್ತು ಸಹೋದರರು ಸ್ಥಳಾಂತರಗೊಂಡಿದ್ದರು ಮತ್ತು ತಮ್ಮ ಪ್ರಾಣವನ್ನು ಕಳೆದುಕೊಂಡರು. ಆ ಜನರ ಹೋರಾಟ ಮತ್ತು ತ್ಯಾಗದ ಸ್ಮರಣಾರ್ಥ ಆಗಸ್ಟ್ 14ರಂದು ‘ವಿಭಜನಾ ವಿಭಿಷಿಕ ಸಂಸ್ಮರಣಾ ದಿನ’ವನ್ನಾಗಿ ಆಚರಿಸಲು ನಿರ್ಧರಿಸಲಾಯಿತು.

* 31 ಅಕ್ಟೋಬರ್ - ಏಕತಾ ದಿವಸ್ - ರಾಷ್ಟ್ರೀಯ ಏಕತಾ ದಿನ (ಸರ್ದಾರ್ ಪಟೇಲ್ ಅವರ ಜನ್ಮ ವಾರ್ಷಿಕೋತ್ಸವ)

ರಾಷ್ಟ್ರೀಯ ಏಕತಾ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ. ಭಾರತದ ರಾಜಕೀಯ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ಆಚರಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಭಾರತ ಸರ್ಕಾರವು 2014 ರಲ್ಲಿ ಪ್ರಾರಂಭಿಸಿತು.

* ನವೆಂಬರ್ 15 - ಬುಡಕಟ್ಟು ಹೆಮ್ಮೆಯ ದಿನ (ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನ)

ನವೆಂಬರ್ 15 ರಂದು ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ದೇಶದಲ್ಲಿ 'ಬುಡಕಟ್ಟು ಹೆಮ್ಮೆಯ ದಿನ' ಎಂದು ಆಚರಿಸಲು ಮೋದಿ ಸರ್ಕಾರ ನಿರ್ಧರಿಸಿದೆ. ಬುಡಕಟ್ಟು ಜನರ ಸಂಸ್ಕೃತಿ ಮತ್ತು ಸಾಧನೆಗಳ ವೈಭವದ ಇತಿಹಾಸವನ್ನು ಆಚರಿಸಲು ನವೆಂಬರ್ 15 ರಿಂದ 22 ರವರೆಗೆ ವಾರದ ಆಚರಣೆಗಳನ್ನು ಯೋಜಿಸಲಾಗಿದೆ.

* ನವೆಂಬರ್ 26 - ಸಂವಿಧಾನ ದಿನ

2015 ರಿಂದ, ಭಾರತವು ತನ್ನ ಸಂವಿಧಾನ ದಿನವನ್ನು ಪ್ರತಿ ವರ್ಷ ನವೆಂಬರ್ 26 ರಂದು ಆಚರಿಸಲು ನಿರ್ಧರಿಸಿದೆ. ಇದಕ್ಕಾಗಿ ಸಾಮಾಜಿಕ ನ್ಯಾಯ ಸಚಿವಾಲಯವು 19 ನವೆಂಬರ್ 2015 ರಂದು ನಿರ್ಧಾರವನ್ನು ತೆಗೆದುಕೊಂಡಿತು. ನವೆಂಬರ್ 26 ಅನ್ನು ರಾಷ್ಟ್ರೀಯ ಕಾನೂನು ದಿನ ಎಂದೂ ಕರೆಯಲಾಗುತ್ತದೆ.

* 26 ಡಿಸೆಂಬರ್ - ವೀರ್ ಬಾಲ್ ದಿವಸ್ (4 ಸಾಹಿಬ್ಜಾದಾಸ್‌ಗೆ ಗೌರವ)

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಡಿಸೆಂಬರ್ 26 ರಂದು 'ವೀರ್ ಬಾಲ್ ದಿವಸ್' ಎಂದು ಆಚರಿಸುವ ಘೋಷಣೆ. ಹತ್ತನೇ ಸಿಖ್ ಗುರು ಗೋಬಿಂದ್ ಸಿಂಗ್ ಅವರ ಪುತ್ರರಿಗೆ ಗೌರವ ಸಲ್ಲಿಸುವುದು ಇದರ ಉದ್ದೇಶವಾಗಿದೆ.

click me!