ರಾಜಸ್ಥಾನ ವಿಧಾನಸಭೆಗೆ ಇದೀಗ ಭೂತದ ಭಯ ಆವರಿಸಿದೆ. ಬಿಜೆಪಿ ಶಾಸಕ ಅಮೃತ್‌ಲಾಲ್ ಮೀನಾ ಸಾವಿನ ಬಳಿಕ ಈ ಆತಂಕ ಹೆಚ್ಚಾಗಿದೆ. ಹೊಸ ವಿಧಾನಸಭೆಯಲ್ಲಿ ಪ್ರತಿ ಬಾರಿ 200 ಸಂಖ್ಯಾಬಲ ಗಡಿ ಮುಟ್ಟಲು ಸಾಧ್ಯವಾಗುತ್ತಿಲ್ಲ. ಒಂದಲ್ಲಾ ಒಂದು ಕಾರಣದಿಂದ ಈ ಸಂಖ್ಯಾಬಲಕ್ಕೆ ಸಾವಿನ ಶಾಕ್ ಎದುರಾಗುತ್ತಿದೆ.
ಜೈಪುರ(ಆ.10) ರಾಜಸ್ಥಾನ ವಿಧಾನಸಭೆಗೆ ಭೂತದ ಕಾಟವಿದೆಯಾ? ನಡೆಯುತ್ತಿರುವ ಘಟನೆಗಳು, ಅಂಕಿ ಸಂಖ್ಯೆಗಳು ಈ ಆತಂಕಕ್ಕೆ ಪುಷ್ಠಿ ನೀಡುತ್ತಿದೆ. ಸ್ಮಶಾನ ಪಕ್ಕದಲ್ಲಿರುವ ರಾಜಸ್ಥಾನ ವಿಧಾನಸಭೆಯಲ್ಲಿ ಪ್ರತಿ ಬಾರಿ 200 ಸಂಖ್ಯಾಬಲದ ರಾಜಸ್ಥಾನ ವಿಧಾನಸಭೆ ಭರ್ತಿಯಾಗಲು ಭೂತ ಬಿಡುತ್ತಿಲ್ಲ ಅನ್ನೋ ಆರೋಪ, ಅನುಮಾನ ಕಾಡತೊಡಗಿದೆ. ಇತ್ತೀಚಗೆ ಹೃದಯಾಘಾತದಿಂದ ಮೃತಪಟ್ಟ ಬಿಜೆಪಿ ಶಾಕ ಅಮೃತ್‌ಲಾಲ್ ಮೀನಾ ಸಾವಿನ ಬಳಿಕ ಆತಂಕ ಹೆಚ್ಚಾಗಿದೆ. 2000ದಿಂದ ಇದುವರೆಗೆ ಒಂದಲ್ಲಾ ಒಂದು ಕಾರಣದಿಂದ 200 ಸಂಖ್ಯಾಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಸಂಪೂರ್ಣ ಶಾಸಕರ ಒಟ್ಟಾಗಿ ಕುಳಿತುಕೊಳ್ಳಲು ಸಾಧ್ಯವಾಗಿಲ್ಲ. ಆಯ್ಕೆಯಾದವರ ಸಂಖ್ಯೆ 200 ಆದರೆ ಒಂದಲ್ಲಾ ಒಂದು ಕಾರಣದಿಂದ ಒಂದೆರಡು ಶಾಸಕರು ಅಕಾಲಿಕ ನಿಧನಕ್ಕೆ ತುತ್ತಾಗುತ್ತಿರುವ ಕಾರಣ ಭೂತದ ಭಯ ಹೆಚ್ಟಾಗಿದೆ.
ಜೈಪುರದಲ್ಲಿರುವ ಹೊಸ ವಿಧಾನಸಭೆ 2000ನೇ ಇಸವಿಯಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ಈ ವಿಧಾನಸಭೆ ಪಕ್ಕದಲ್ಲಿ ಸ್ಮಶಾನವಿದೆ. ಕಳೆದ 24 ವರ್ಷದಲ್ಲಿ ರಾಜಸ್ಥಾನ ವಿಧಾನಸಭೆಗೆ 200 ಶಾಸಕರು ಆಯ್ಕೆಯಾದರೂ ಸಂಪೂರ್ಣ ಸಂಖ್ಯೆ ಶಾಸಕರು ಒಟ್ಟಿಗೆ ಸೇರಿಲ್ಲ. ಚುನಾವಣೆ ಗೆದ್ದ ಬಳಿಕ ಶಾಸಕರು ಅಥವಾ ಸ್ಪರ್ಧೆ ವೇಳೆ ಅಭ್ಯರ್ಥಿಗಳ ಸಾವಿನಿಂದ ಒಂದೆರಡು ಸ್ಥಾನ ಪ್ರತಿ ಬಾರಿ ಖಾಲಿಯಾಗಿದೆ.
ಅಪಘಾತದಲ್ಲಿ ಮೃತಪಟ್ಟ ಬಾಯ್‌ಫ್ರೆಂಡ್ ಭೂತದ ಜೊತೆ ಮದುವೆ: ಗೆಳತಿ ನಿರ್ಧಾರಕ್ಕೆ ಭಾರಿ ಮೆಚ್ಚುಗೆ!
ಇದೀಗ 200 ಸಂಖ್ಯಾಬಲದ ಸಂಪೂರ್ಣ ಶಾಸಕರ ವಿಧಾನಸಭೆ ತುಂಬಿ ಭೂತ ಪ್ರೇತದ ಕಾಟ ಸುಳ್ಳು ಅನ್ನೋದು ಸಾಬೀತುಪಡಿಸಲಿದೆ ಅನ್ನೋವಾಗ ಬಿಜೆಪಿ ಶಾಸಕ ಅಮೃತ್‌ಲಾಲ್ ಮೀನಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಸಾವು ಮತ್ತೊಮ್ಮೆ ರಾಜಸ್ಥಾನ ವಿಧಾನಸಭೆಯ ಭೂತದ ಕಾಟವನ್ನು ಚರ್ಚೆ ಮಾಡುವಂತೆ ಮಾಡಿದೆ. ಇದೀಗ ಮತ್ತೆ ಒಟ್ಟು ಶಾಸಕರ ಸಂಖ್ಯೆ 200 ಗಡಿ ಮುಟ್ಟಲು ಸಾಧ್ಯವಾಗಿಲ್ಲ.
ಹೊಸ ವಿಧಾನಸಭೆ ನಿರ್ಮಾಣವಾದ ಬಳಿಕ ಅಂದರೆ 2001ರಿಂದ ಇಲ್ಲೀವರೆಗೆ 17 ಶಾಸಕರು ಅಕಾಲಿಕವಾಗಿ ಮೃತಪಟ್ಟಿದ್ದಾರೆ. 200 ಸಂಖ್ಯಾಬಲ, ಶಾಸಕರ ಅಕಾಲಿಕ ಮರಣ ಎಲ್ಲವೂ ಆಯ್ಕೆಯಾಗಿರುವ ಶಾಸಕರ ಆತಂಕಕ್ಕೆ ಕಾರಣವಾಗಿದೆ. ಇದೀಗ ಇದಕ್ಕೆ ಪರಿಹಾರ ಹುಡುಕಲು ಕೆಲ ಶಾಸಕರು ಆಸಕ್ತಿ ತೋರಿದ್ದಾರೆ. ಆದರೆ ಇದೆಲ್ಲಾ ಮೂಢನಂಬಿಕೆ, ಶಾಸಕರ ಮರಣಕ್ಕೂ ಭೂತಕ್ಕೂ ಯಾವುದೇ ಸಂಬಂಧವಿಲ್ಲ. ಈ ರೀತಿ ಕಪೋಕಲ್ಪಿತ ಕತೆಗಳಿಗೆ ಮಹತ್ವ ನೀಡಬೇಕಿಲ್ಲ ಎಂದು ಹಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಇದೀಗ ಪರ ವಿರೋಧ ಚರ್ಚೆಗಳು ಆರಂಭಗೊಂಡಿದೆ.
ಮಹಿಳೆ ಮೈಮೇಲೆ ಆವರಿಸಿಕೊಂಡು ವಿಮಲ್ ಗುಟ್ಕಾ ಕೇಳಿದ ದೆವ್ವ!