ರಾಜಸ್ಥಾನದ 25 ಸಚಿವರ ಪೈಕಿ ಗೆದ್ದವರು 9 ಮಂದಿ ಮಾತ್ರ, ಗೆಹ್ಲೋಟ್‌ಗೆ ಕೈಕೊಟ್ಟ ಮಿನಿಸ್ಟರ್ಸ್!

By Suvarna NewsFirst Published Dec 3, 2023, 9:16 PM IST
Highlights

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 115 ಸ್ಥಾನ ಗೆಲ್ಲುವ ಮೂಲಕ ಅದಿಕಾರಕ್ಕೇರಿದೆ. ಆದರೆ ಅಧಿಕಾರದಲ್ಲಿದ್ದ ಕಾಂಗ್ರೆಸ್ 69 ಸ್ಥಾನಕ್ಕೆ ಕುಸಿತವಾಗಿದೆ. ಈ ಪೈಕಿ ಗೆಹ್ಲೋಟ್ ಸರ್ಕಾರದ 25 ಸಚಿವರ ಪೈಕಿ ಕೇವಲ 9 ಮಂದಿ ಮಾತ್ರ ಗೆಲುವು ದಾಖಲಿಸಿದ್ದಾರೆ.
 

ಜೈಪುರ(ಡಿ.03) ರಾಜಸ್ಥಾನದಲ್ಲಿ ಮತ್ತೆ ಅಧಿಕಾರಕ್ಕೇರುವುದು ಖಚಿತ ಎಂದು ಒತ್ತಿ ಒತ್ತಿ ಹೇಳಿದ ಅಶೋಕ್ ಗೆಹ್ಲೋಟ್‌ಗೆ ಫಲಿತಾಂಶ ಶಾಕ್ ನೀಡಿದೆ. 2018ರ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಿದ ಕಾಂಗ್ರೆಸ್ ಈ ಬಾರಿ 69 ಸ್ಥಾನಕ್ಕೆ ಕುಸಿದಿದೆ. ಈ ಪೈಕಿ ಗೆಲ್ಲುವು ನೆಚ್ಚಿನ ನಾಯಕರು ಎಂದೇ ಗುರುತಿಸಿಕೊಂಡಿದ್ದ ಹಲವರು ಮಕಾಡೆ ಮಲಗಿದ್ದಾರೆ. ಅಶೋಕ್ ಗೆಹ್ಲೋಟ್ ಸರ್ಕಾರದ 25 ಸಚಿವರ ಪೈಕಿ ಕೇವಲ 9 ಮಂದಿ ಮಾತ್ರ ಗೆಲುವು ಸಾಧಿಸಿದ್ದಾರೆ. ಸಿಎಂ ಅಶೋಕ್ ಗೆಹ್ಲೋಟ್ ಜೋಧಪುರದ ಸರ್ದಾರಪುರ ಕ್ಷೇತ್ರದಿಂದ 6ನೇ ಬಾರಿಗೆ ಗೆದ್ದು ಬಂದಿದ್ದಾರೆ.

ಅಶೋಕ್ ಗೆಹ್ಲೋಟ್ ತಮ್ಮ ಶಾಸಕನ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ ಗೆಹ್ಲೋಟ್ ಸರ್ಕಾರದ 25 ಸಚಿವರ ಪೈಕಿ 16 ಸಚಿವರು ಸೋಲು ಅನುಭವಿಸಿದ್ದಾರೆ.  ರಾಜಸ್ಥಾನದಲ್ಲಿ ಕಾಂಗ್ರೆಸ್ ಆಡಳಿತ ವಿರೋಧಿ ಅಲೆ, ಅಶೋಕ್ ಗೆಹ್ಲೋಟ್ ಹಾಗೂ  ಸಚಿನ್ ಪೈಲೆಟ್ ನಡುವಿನ ಬಣ ರಾಜಕೀಯ, ರಾಹುಲ್ ಗಾಂಧಿ ಹಾಗೂ ಕೇಂದ್ರ ನಾಯಕರ ಜಾತಿ ರಾಜಕೀಯ ಕಾಂಗ್ರೆಸ್‌ಗೆ ಮುಳುವಾಗಿದೆ.

ಚುನಾವಣಾ ಸೋಲಿನ ಬೆನ್ನಲ್ಲೇ ಇಂಡಿ ಒಕ್ಕೂಟಕ್ಕೆ ಮಲ್ಲಿಕಾರ್ಜುನ ಖರ್ಗೆ ಮಹತ್ವದ ಸಂದೇಶ!

ರಾಜಸ್ಥಾನ ವಿಧಾನಸಭಾ ಚುನಾವಣಾ ಫಲಿತಾಂಶ
ಬಿಜೆಪಿ: 115
ಕಾಂಗ್ರೆಸ್ : 69
ಭಾರತ್ ಆದಿವಾಸಿ ಪಾರ್ಟಿ : 3
ಬಹಜನ್ ಸಮಾಜ್ ಪಾರ್ಟಿ : 2
ರಾಷ್ಟ್ರೀಯ ಲೋಕದಳ: 1
ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿ : 1
ಪಕ್ಷೇತರ: 8

ಬಿಜೆಪಿ ಭರ್ಜರಿ ಗೆಲುವಿಗೆ ಕೇಂದ್ರ ನಾಯಕರು ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕೇಂದ್ರ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ್ದಾರೆ. ಈ ವೇಳೆ ಇದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್‌ಗೆ ಸಿಕ್ಕಿದ ಗೆಲುವು ಎಂದಿದ್ದಾರೆ. ಇತ್ತ ಅಮಿತ್ ಶಾ ಟ್ವೀಟ್ ಮೂಲಕ ಒಲೈಕ ರಾಜಕಾರಣಕ್ಕೆ ಕೊನೆ ಹಾಡುವ ದಿನ ಎಂದು ಈ ಫಲಿತಾಂಶ ಸಾಬೀತು ಮಾಡಿದೆ ಎಂದಿದ್ದಾರೆ

ಕಾಂಗ್ರೆಸ್ ಚುನಾವಣಾ ಸೋಲಿಗೆ ಸ್ಫೋಟಕ ಕಾರಣ ಬಿಚ್ಚಿಟ್ಟ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್!

ಚುನಾವಣೆ ಫಲಿತಾಂಶವು ದೇಶದಲ್ಲಿ ಜಾತಿ ರಾಜಕಾರಣ ಹಾಗೂ ಒಲೈಕೆ ರಾಜಕಾರಣಕ್ಕೆ ಕೊನೆ ಹಾಡುವ ದಿನ ಎಂದು ಸ್ಪಷ್ಟವಾಗಿ ಸಾಬೀತು ಮಾಡಿದೆ. ನವ ಭಾರತವು ಕೆಲಸವನ್ನು ನೋಡಿಕೊಂಡು ಮತ ಹಾಕಿದೆ. ಇದಕ್ಕಾಗಿ ನಾನು ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ ನಿಮಗೆಲ್ಲರಿಗೂ ಕೃತಜ್ಞತೆಗಳು ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.  
 

click me!