14 ಕೋಟಿ ಜನ ಅನರ್ಹವಾದ್ರೆ 2024ರ ಚುನಾವಣೆ ನ್ಯಾಯವೇ?: ಚುನಾವಣಾ ಆಯೋಗ, ಬಿಜೆಪಿ ವಿರುದ್ಧ ರಾಹುಲ್ ಹೊಸ ಬಾಂಬ್!

Kannadaprabha News   | Kannada Prabha
Published : Nov 15, 2026, 05:29 AM IST
Rahul Gandhi slams BJP and ECI

ಸಾರಾಂಶ

2014ರಲ್ಲೇ ಭಾರತದಲ್ಲಿ ಪ್ರಜಾಪ್ರಭುತ್ವ ನಾಶವಾಗಿದೆ ಎಂದು ರಾಹುಲ್ ಗಾಂಧಿ ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 14 ಕೋಟಿ ಮತಗಳ ಅನರ್ಹತೆ ಬಗ್ಗೆ ಪ್ರಶ್ನಿಸಿರುವ ಅವರು, ಮುಂದಿನ ಚುನಾವಣೆಯಲ್ಲಿ ಮೋದಿಯನ್ನು ಕೆಳಗಿಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತೆಲಂಗಾಣ (ನ.15): ಬಿಜೆಪಿ(BJP) ಮತ್ತು ಚುನಾವಣಾ ಆಯೋಗದ(ECI) ವಿರುದ್ಧ ತಮ್ಮ ವಾಗ್ದಾಳಿ ತೀವ್ರಗೊಳಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Congress Leader Rahul Gandhi), ‘ದೇಶದಲ್ಲಿ ಇದೀಗ ಪ್ರಜಾಪ್ರಭುತ್ವವೇ ಇಲ್ಲ, 2014ರಲ್ಲೇ ಭಾರತದಲ್ಲಿ ಪ್ರಜಾಪ್ರಭುತ್ವ ನಾಶವಾಗಿದೆ. ಮತಪಟ್ಟಿ ಪರಿಷ್ಕರಣೆ ಬಳಿಕ 14 ಕೋಟಿ ಮತಗಳು ಅನರ್ಹವಾದರೆ 2024ರ ಚುನಾವಣೆ ಹೇಗೆ ನ್ಯಾಯಯುತವಾಗಿರುತ್ತದೆ?’ ಎಂದು ಪ್ರಶ್ನಿಸಿದ್ದಾರೆ.

14 ಕೋಟಿ ಮತಗಳು ಅನರ್ಹವಾದರೆ 2024ರ ಚುನಾವಣೆ ಹೇಗೆ ನ್ಯಾಯಯುತವಾಗಿರುತ್ತದೆ?

ಇಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ‘ಭಾರತ್‌ ಸಮ್ಮಿಟ್‌’ನಲ್ಲಿ ಮಾತನಾಡಿದ ರಾಹುಲ್‌, ‘2024ರಲ್ಲಿ ಮತ ಚಲಾಯಿಸಿದ 14 ಕೋಟಿ ಮತದಾರರನ್ನು ಚುನಾವಣಾ ಆಯೋಗ ಕೆಲ ತಿಂಗಳ ಹಿಂದೆ ಅಸ್ತಿತ್ವದಲ್ಲಿರದವರು ಮತ್ತು ಮತದಾರದಲ್ಲದವರು ಎಂದು ಘೋಷಿಸಿತ್ತು. ಮತ ಚಲಾಯಿಸಿದವರ ಪೈಕಿ ಶೇ.13 ಮತದಾರರು ಅಕ್ರಮ ಮತದಾರರು ಎಂದು ಘೋಷಿಸಿದ್ದಾರೆ. ಹೀಗಿದ್ದಾಗ ಚುನಾವಣೆ ಹೇಗೆ ಕಾನೂನುಬದ್ಧವಾಗಿರುತ್ತದೆ?’ ಎಂದಿದ್ದಾರೆ.

ಭಾರತವು ಪ್ರಜಾಪ್ರಭುತ್ವವಾಗಿ ಉಳಿಯುವುದು ನಮಗೆ ಮುಖ್ಯ

ಇದೇ ವೇಳೆ ಅವರು, ‘ಭಾರತವು ಪ್ರಜಾಪ್ರಭುತ್ವವಾಗಿ ಉಳಿಯುವುದು ನಮಗೆ ಮುಖ್ಯ. ಆದರೆ ಬಿಜೆಪಿ ಆಡಳಿತದಲ್ಲಿ ಭಾರತವು ವಾಸ್ತವವಾಗಿ ಪ್ರಜಾಪ್ರಭುತ್ವವಾಗಿ ಉಳಿದಿಲ್ಲ’ ಎಂದರು, ಜೊತೆಗೆ ಮುಂದಿನ ಚುನಾವಣೆಯಲ್ಲಿ ನಾವು ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲಿದ್ದೇವೆ. ಈ ವಿಷಯ ಇದೀಗ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾಗೂ ಅರ್ಥವಾಗಿದೆ. ಹೀಗಾಗಿಯೇ ಅವರ ಮುಖದಲ್ಲಿ ಭೀತಿ ಕಾಣಿಸುತ್ತಿದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಗಿಗ್‌ ಕಾರ್ಮಿಕರ ಕಲ್ಯಾಣದ ಕುರಿತಾಗಿ ಮಾತನಾಡಿದ ಅವರು, ‘ಕಾಂಗ್ರೆಸ್ ಗಿಗ್ ಕಾರ್ಮಿಕರೊಂದಿಗೆ ಸದಾ ನಿಲ್ಲುತ್ತದೆ. ಅವರನ್ನು ಪ್ರಗತಿಗೆ ಪಾಲುದಾರರೆಂದು ಪರಿಗಣಿಸಲಾಗುತ್ತದೆ’ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಧುರೈ ಜ್ಯುವೆಲ್ಲರಿ ದರೋಡೆ ಕೇಸ್‌ಗೆ ರೋಚಕ ತಿರುವು: 5 ಕೆಜಿ ಚಿನ್ನದೊಂದಿಗೆ ಸಿಕ್ಕಿಬಿದ್ದ ಖ್ಯಾತ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮೀನಾಕ್ಷಿ
ಸಾವಿನ ಅಂಚಿನಿಂದ ಮರಳಿ ಖಾಕಿ ತೊಟ್ಟ ಗಟ್ಟಿಗಿತ್ತಿಯ ರೋಚಕ ಕಥೆ!