ಅಧಿವೇಶನ, ಪ್ರಚಾರದ ವೇಳೆ ಪ್ರವಾಸ, ರಾಹುಲ್ ಗಾಂಧಿ ಮಲೇಷಿಯಾ ಟ್ರಿಪ್ ಗೇಲಿ ಮಾಡಿದ ಬಿಜೆಪಿ

Published : Sep 07, 2025, 06:11 PM IST
Rahul gandhi

ಸಾರಾಂಶ

ರಾಹುಲ್ ಗಾಂಧಿ ಸದ್ದಿಲ್ಲದ ಮೆಲೇಷಿಯಾ ಪ್ರವಾಸ ಮಾಡಿದ್ದಾರೆ. ಬಿಹಾರದ ಧೂಳು, ಸೆಕೆಯಿಂದ ಬ್ರೇಕ್ ಪಡೆದಿರುವ ರಾಹುಲ್ ಗಾಂಧಿಗೆ ಈ ಪಲಾಯಾನ ಹೊಸದಲ್ಲ ಎಂದು ಬಿಜೆಪಿ ಗೇಲಿ ಮಾಡಿದೆ.

ನವದೆಹಲಿ (ಸೆ.07) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶ ಟ್ರಿಪ್ ಮತ್ತೆ ಸದ್ದು ಮಾಡುತ್ತಿದೆ. ಈ ಬಾರಿ ರಾಹುಲ್ ಗಾಂಧಿ ಸದ್ದಿಲ್ಲದೆ ಮಲೇಷಿಯಾ ಟ್ರಿಪ್ ಕೈಗೊಂಡಿದ್ದಾರೆ. ಈ ಫೋಟೋ ರಿಲೀಸ್ ಮಾಡಿದ ಬಿಜೆಪಿ, ಅಧಿವೇಶನದ ವೇಳೆ, ಚುನಾವಣಾ ಪ್ರಚಾರದ ವೇಳೆ ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ರಾಹುಲ್ ಗಾಂಧಿಗೆ ವಿದೇಶ ಪ್ರವಾಸ ಹೊಸದಲ್ಲ. ಈ ಬಾರಿ ಮಲೇಷಿಯಾದ ಲ್ಯಾಂಗ್‌ಕಾವಿಗೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಬಿಜೆಪಿ ಗೇಲಿ ಮಾಡಿದೆ. ಇತ್ತ ರಾಹುಲ್ ಗಾಂಧಿ ಮಲೆಷಿಯಾದಲ್ಲಿನ ಫೋಟೋ ಒಂದು ಭಾರಿ ವೈರಲ್ ಆಗಿದೆ.

ಮೆಲಿಷಿಯಾದ ಪ್ರವಾಸಿ ತಾಣವಾಗಿರುವ ಲ್ಯಾಂಗ್‌ಕಾವಿಯಲ್ಲಿ ರಾಹುಲ್ ಗಾಂಧಿ ಎಂಜಾಯ್ ಮಾಡುತ್ತಿರುವ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಕುರಿತು ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಟ್ವೀಟ್ ಮಾಡಿ ರಾಹುಲ್ ಗಾಂಧಿ ನಡೆಯನ್ನು ಪ್ರಶ್ನಿಸಿದ್ದು ಮಾತ್ರವಲ್ಲ ವ್ಯಂಗ್ಯವಾಡಿದ್ದಾರೆ.

ರಾಹುಲ್ ಗಾಂಧಿ ಮತ್ತೆ ತಮ್ಮ ಜವಾಬ್ದಾರಿಗಳಿಂದ ಜಾರಿಕೊಂಡಿದ್ದಾರೆ. ಈ ಬಾರಿ ರಾಹುಲ್ ಗಾಂಧಿಯ ಪ್ರವಾಸ ಮೇಲೇಷಿಯಾದ ಪ್ರವಾಸಿ ತಾಣವಾಗಿರುವ ಲ್ಯಾಂಗ್‌ಕಾವಿಗೆ. ಕಾಂಗ್ರೆಸ್ ಯುವರಾಜನಿಗೆ ಬಿಹಾರ ರಾಜಕೀಯದ ಧೂಳು ಹಾಗೂ ಸೆಕೆ ವಿಪರೀತವಾಗಿದೆ. ಹೀಗಾಗಿ ಇದರಿಂದ ಬ್ರೇಕ್ ಪಡೆದಿದ್ದಾರೆ. ಅಥವಾ ಇದು ಕೂಡ ಮತ್ತೊಂದು ರಹಸ್ಯ ಭೇಟಿಯ ಪ್ರವಾಸವಾಗಿರಬಹುದೇ? ಇದು ಯಾರಿಗೂ ತಿಳಿಯದು. ಜನರು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ರಾಹುಲ್ ಗಾಂಧಿ ಮತ್ತೆ ಪ್ರವಾಸದಲ್ಲಿ ಬ್ಯೂಸಿಯಾಗಿದ್ದಾರೆ ಎಂದು ಅಮಿತ್ ಮಾಳವಿಯಾ ಎಕ್ಸ್ ಮಾಡಿದ್ದಾರೆ.

 

 

ವೋಟ್ ಅಧಿಕಾರ ಯಾತ್ರೆ ಮುಗಿದ ಬೆನ್ನಲ್ಲೇ ರಾಹುಲ್ ಟ್ರಿಪ್

ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಹಾಗೂ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಮತ ಕಳವು ಗಂಭೀರ ಆರೋಪ ಮಾಡಿದ ರಾಹುಲ್ ಗಾಂಧಿಗೆ ನಿರೀಕ್ಷಿಯ ಯಶಸ್ಸು ಸಿಗಲಿಲ್ಲ. ರಾಹುಲ್ ಗಾಂಧಿ ಉದ್ದೇಶಿತ ರೀತಿಯಲ್ಲಿ ಮತ ಕಳವು ಅಭಿಯಾನಕ್ಕೆ ಸ್ಪಂದನೆ ಸಿಗಲಿಲ್ಲ. ಆದರೂ ಬಿಹಾರದಲ್ಲಿ ರಾಹುಲ್ ಗಾಂಧಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಜೊತೆ ವೋಟ್ ಅಧಿಕಾರ ಯಾತ್ರೆ ನಡೆಸಿದ್ದರು. ಸೆಪ್ಟೆಂಬರ್ 1 ರಂದು ಈ ಯಾತ್ರೆ ಅಂತ್ಯಗೊಂಡಿತ್ತು. 2 ವಾರದಲ್ಲಿ 25 ಜಿಲ್ಲೆ, 1,300 ಕಿಲೋಮೀಟರ್, 110 ವಿಧಾನಸಭಾ ಕ್ಷೇತ್ರಗಳನ್ನು ಸಂಚರಿಸಿದ ಈ ಯಾತ್ರೆ ಸೆಪ್ಟೆಂಬರ್ 1ಕ್ಕೆ ಅಂತ್ಯಗೊಂಡಿತ್ತು. ಬಳಿಕ ರಾಹುಲ್ ಗಾಂಧಿ ಸದ್ದಿಲ್ಲದ ಮಲೇಷಿಯಾ ಟ್ರಿಪ್ ಮಾಡಿದ್ದಾರೆ ಎಂದು ಬಿಜೆಪಿ ಹೇಳಿದೆ.

ರಾಗಾ ಬ್ರಿಟನ್‌ ಪ್ರಜೆ ಎಂದ ಕನ್ನಡಿಗನಿಗೆ ಇ.ಡಿ. ಸಮನ್ಸ್‌

ರಾಹುಲ್ ಗಾಂಧಿ ಸುಳ್ಳು ಆರೋಪ, ಹುಸಿ ಬಾಂಬ್ ಸಿಡಿಸುತ್ತಾ ತಿರುಗಾಡುತ್ತಾರೆ. ಎಲ್ಲಿ ಮಾತನಾಡಬೇಕು, ಎಲ್ಲಿ ದೂರು ಕೊಡಬೇಕು ಎಲ್ಲಿ ಮೌನವಾಗುತ್ತಾರೆ, ಇಲ್ಲಾ ವಿದೇಶಕ್ಕೆ ಹಾರುತ್ತಾರೆ ಎಂದು ಬಿಜೆಪಿ ಗೇಲಿ ಮಾಡಿದೆ. ಕಳೆದ ಬಜೆಟ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ವಿಯೇಟ್ನಾಂ ಪ್ರವಾಸ ಮಾಡಿದ್ದರು ಎಂದು ಬಿಜೆಪಿ ಹೇಳಿದೆ. ವಿರೋಧ ಪಕ್ಷದ ನಾಯಕ ಈ ರೀತಿ ರಹಸ್ಯವಾಗಿ ವಿದೇಶ ಪ್ರವಾಸ ಮಾಡುತ್ತಿರುವುದು ರಾಷ್ಟ್ರೀಯ ಭದ್ರತಗೆ ಸವಾಲಾಗಬಹುದು ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ