
ನವರಾತ್ರಿಯ ಸಂಭ್ರಮದ ಸಮಯದಲ್ಲಿ ತೆಲಂಗಾಣ ಸೇರಿದಂತೆ ಆಂಧ್ರ ಪ್ರದೇಶ ಕೆಲವು ಭಾಗಗಳಲ್ಲಿ ಬತುಕಮ್ಮ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಇದು ಒಂದು ಸಾಂಪ್ರದಾಯಿಕ ಹೂವುಗಳ ಹಬ್ಬವಾಗಿದ್ದು, ಪಾರ್ವತಿ ದೇವಿಯನ್ನು 'ಬದುಕು ನೀಡುವ ತಾಯಿ' ಎಂನ ಭಾವನೆಯೊಂದಿಗೆ ಆಚರಣೆ ಮಾಡುತ್ತಾರೆ. ಸದ್ಯ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಕೂಡ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಇದೇ ವೇಳೆ ಕಳೆದ ವರ್ಷ ಹಬ್ಬ ಆಚರಣೆ ಮಾಡಿದ ಫೋಟೋಗಳನ್ನು ಇನ್ ಸ್ಟಾದಲ್ಲಿ ಶೇರ್ ಮಾಡಿದ್ದರು. ಆದರೆ ಬೆಳ್ಳಿಯ 'ಬತುಕಮ್ಮ' ಜೊತೆಗೆ ಹಬ್ಬದಲ್ಲಿ ಭಾಗಿಯಾದ ಸಿಂಧು ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೋಲ್ ಆಗಿತ್ತು.
'ಬತುಕಮ್ಮ' ಎಂದರೆ, ಹೂಗಳಿಂದ ಅಲಂಕರಿಸಿರುವ ದೇವರನ್ನು ನೋಡುತ್ತೇವೆ. ಆದರೆ ನಿಮ್ಮ ಶ್ರೀಮಂತಿಕೆಯನ್ನು ಇಲ್ಲಿ ತೋರಿಸಬೇಡಿ ಎಂದು ಹಲವರು ಟೀಕೆ ಮಾಡಿದ್ದರು. ಆದರೆ ಇಂತಹ ಕಾಮೆಂಟ್ ಗಳಿಗೆ ಸ್ಟಾರ್ ಆಟಗಾರ್ತಿ ತಿರುಗೇಟು ನೀಡಿದ್ದಾರೆ.
ನನ್ನ ತವರು ಮನೆಯಲ್ಲಿ 'ಬತುಕಮ್ಮ' ಹಬ್ಬವನ್ನು ಆವರಣೆ ಮಾಡೋದಿಲ್ಲ. ಈ ಹಬ್ಬ ಆಚರಣೆ ಮಾಡುವ ಸಂಸ್ಕೃತಿ ನಮ್ಮ ಮನೆಯಲ್ಲಿ ಇಲ್ಲ. ನನ್ನ ಜೀವನದಲ್ಲಿ ಮೊದಲ ಬಾರಿಗೆ ಈ ಹಬ್ಬದಲ್ಲಿ ಭಾಗಿಯಾಗಿದ್ದೇನೆ. ಏಕೆಂದರೆ ನಾನು ತೆಲಂಗಾಣದ ಕರೀಂನಗರದಲ್ಲಿರುವ ಕುಟುಂಬದ ಸೊಸೆಯಾಗಿ ಬಂದಿದ್ದೇನೆ ಎಂದು ಸಿಂಧು ಹೇಳಿದ್ದಾರೆ.
'ಯಾವುದೇ ವ್ಯಕ್ತಿಯ ಬಗ್ಗೆ ಒಂದು ಅಭಿಪ್ರಾಯಕ್ಕೆ ಬರುವ ಮುನ್ನ ಈ ಸಂಪ್ರದಾಯವನ್ನು ಅರ್ಥ ಮಾಡಿಕೊಳ್ಳಿ. ನಾನು ಶೇರ್ ಮಾಡಿರುವ ಫೋಟೋದಲ್ಲಿ ನನ್ನ ಹಿಂದೆ ಒಮ್ಮೆ ಗಮನಿಸಿ. ಅಲ್ಲಿ ಭಾರೀ ಪ್ರಮಾಣದ ಹೂಗಳಿಂದ ಮಾಡಿರುವ ಬತುಕಮ್ಮನನ್ನು ಗಮಿನಿಸಿದ್ದೀರಾ? ಇಡೀ ದಿನ ಅದನ್ನು ಸುಂದರವಾಗಿ ತಯಾರಿಸಿದ್ದೇವು, ಇದಕ್ಕಾಗಿ ಬಹಳ ಇಷ್ಟಪಟ್ಟು ಕಲಿತುಕೊಂಡು ಮಾಡಿದ್ದೇನೆ. ಇದರ ಜೊತೆಯೇ ನಾವು ಹಬ್ಬ ಆಚರಣೆ ಮಾಡಿದ್ದೇವೆ' ಎಂದು ಆಟಗಾರ್ತಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಬೆಳ್ಳಿ ಬತುಕಮ್ಮ ಬಗ್ಗೆಯೂ ಸ್ಪಷ್ಟನೆ ನೀಡಿರುವ ಸಿಂಧು, ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿರುವ ಈ ಸಂಪ್ರದಾಯದಲ್ಲಿ ನನ್ನನ್ನು ಆತ್ಮೀಯವಾಗಿ ಆಹ್ವಾನಿಸಿ, ನನಗೆ ನಮ್ಮ ಅತ್ತೆಯವರು ತೋರಿಸಿದ ಪ್ರೀತಿಗೆ ಪ್ರತೀಕವಾಗಿದೆ. ಇಲ್ಲಿ ಸಂಪ್ರದಾಯದೊಂದಿಗೆ ತಾಯಿಯ ಪ್ರೀತಿಗೂ ಅವಕಾಶ ಇರುತ್ತದೆ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು, ಪ್ರಕೃತಿಯೊಂದಿಗೆ ಆಳವಾದ ನಂಟನ್ನು ಹೊಂದಿರುವ 'ಬತುಕಮ್ಮ' ಹಬ್ಬವನ್ನು ತಾನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬುದರ ಕುರಿತು ಸಿಂಧು ಬರೆದುಕೊಂಡಿದ್ದರು. ಆ ಹಬ್ಬದ ವೈವಿಧ್ಯಮಯ ಬಣ್ಣಗಳು, ಸುಂದರವಾದ ಹೂವುಗಳು ಮತ್ತು ಅಲ್ಲಿನ ಹಬ್ಬದ ವಾತಾವರಣವನ್ನು ಅವರು ನೆನಪಿಸಿಕೊಂಡರು. ತಾವು ಈ ಸಂಭ್ರಮಾಚರಣೆಯಿಂದ ದೂರವಿದ್ದರೂ, ತಮ್ಮ ಮನಸ್ಸು ಸಂಪೂರ್ಣವಾಗಿ ತೆಲಂಗಾಣದ ಈ ಹೂವುಗಳ ಹಬ್ಬದ ಮೇಲೆಯೇ ನೆಲೆಸಿದೆ ಎಂಬುದನ್ನು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದರು.
Before passing judgment, please understand the tradition ❤️
We don’t traditionally celebrate Bathukamma in my family, so this was my very first! And I’ve married into a family from the very heart of Telangana - Karimnagar.
See that rather large floral Bathukamma in the background ? I spent pretty much the whole day decorating it 😂, and that’s what we celebrated with!
The silver Bathukamma was my mother-in-law’s way of welcoming me into a tradition that’s so close to her heart ❤️
Surely, there’s room for a mother’s love alongside tradition ❤️
— PV Sindhu (@Pvsindhu1) October 18, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ