ಭಾರತಕ್ಕೆ ಪಾಕ್ ಪ್ರಧಾನಿ ಇಮ್ರಾನ್‌ ಆಫರ್‌

By Web DeskFirst Published Mar 1, 2019, 9:30 AM IST
Highlights

ಪ್ರಧಾನಿ ಮೋದಿ ಹಾಗೂ ಇಮ್ರಾನ್‌ ಖಾನ್‌ ನಡುವೆ ದೂರವಾಣಿ ಕರೆ ವ್ಯವಸ್ಥೆ ಮಾಡುವ ಕುರಿತು ಪಾಕಿಸ್ತಾನ ಪ್ರಧಾನಿ ಕಚೇರಿ ಭಾರತದ ಪ್ರಧಾನಿ ಕಚೇರಿಯನ್ನು ಸಂಪರ್ಕಿಸಿದೆ.

ನವದೆಹಲಿ: ಪುಲ್ವಾಮಾ ದಾಳಿಯನ್ನು ಜಂಟಿಯಾಗಿ ತನಿಖೆ ನಡೆಸುವ ಕುರಿತು ಪಾಕಿಸ್ತಾನ ಗುರುವಾರ ಭಾರತಕ್ಕೆ ಆಫರ್‌ ನೀಡಿದೆ.ಪ್ರಧಾನಿ ಮೋದಿ ಹಾಗೂ ಇಮ್ರಾನ್‌ ಖಾನ್‌ ನಡುವೆ ದೂರವಾಣಿ ಕರೆ ವ್ಯವಸ್ಥೆ ಮಾಡುವ ಕುರಿತು ಪಾಕಿಸ್ತಾನ ಪ್ರಧಾನಿ ಕಚೇರಿ, ಭಾರತದ ಪ್ರಧಾನಿ ಕಚೇರಿಯನ್ನು ಸಂಪರ್ಕಿಸಿದೆ.

ಆದರೆ, ಭಾರತ ಈ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಮೋದಿ ಜೊತೆ ಸಂಪರ್ಕ ಏರ್ಪಟ್ಟರೆ, ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಭಯೋತ್ಪಾದನೆಯ ವಿಷಯಕ್ಕೆ ಒತ್ತು ನೀಡಲು ಮುಂದಾಗಿದ್ದಾರೆ. ಅಲ್ಲದೇ ಈ ವಿಷಯವನ್ನು ಪರಿಸ್ಪರ ಸಹಕಾರದ ಮೂಲಕ ಬಗೆಹರಿಸಬಹುದು ಮತ್ತು ಸಮಸ್ಯೆಗೆ ಯುದ್ಧ ಪರಿಹಾರವಲ್ಲ ಎಂಬ ಸಂಗತಿಯನ್ನು ವಿಷದ ಪಡಿಸಲಿದ್ದಾರೆ. 

ಅಲ್ಲದೇ, ಪುಲ್ವಾಮಾ ದಾಳಿಯ ಬಗ್ಗೆ ಭಾರತ ಒದಗಿಸಿದ ಸಾಕ್ಷ್ಯ ಆಧರಿಸಿ ಯಾವುದೇ ಸಂಸ್ಥೆಯಿಂದ ತನಿಖೆ ನಡೆಸುವ ಮತ್ತು ಜಂಟಿ ತನಿಖೆ ನಡೆಸುವ ಬಗ್ಗೆಗೂ ಪ್ರಸ್ತಾಪ ಮುಂದಿಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

click me!