ಪೈಲಟ್ ಅಭಿ ವಿಡಿಯೋ ನಿಮ್ಮ ಮೊಬೈಲ್ ನಲ್ಲಿದ್ದರೆ ಅಪರಾಧ, ಕೂಡಲೇ ಡಿಲೀಟ್ ಮಾಡಿ

By Web DeskFirst Published Mar 1, 2019, 9:04 AM IST
Highlights

ಅಭಿನಂದನ್‌ ವಿಡಿಯೋ ತೆಗೆಯಲು ಯಟ್ಯೂಬ್‌ಗೆ ಸೂಚನೆ| ನಿಮ್ಮ ಬಳಿ ಅಭಿ ವಿಡಿಯೋ ಇದ್ದರೆ ಡಿಲೀಟ್‌ ಮಾಡಿ ಇದು ನಮ್ಮ ಕಳಕಳಿ

ನವದೆಹಲಿ[ಮಾ.01]: ಶತ್ರುಪಡೆಯನ್ನು ಹಿಮ್ಮೆಟ್ಟಿಸುವ ವೇಳೆ ಪತನಗೊಂಡ ಮಿಗ್‌ ವಿಮಾನದ ಪೈಲಟ್‌ ಅಭಿನಂದನ್‌ ಅವರನ್ನು ಸೆರೆ ಹಿಡಿದು ಪಾಕಿಸ್ತಾನ ಚಿತ್ರಹಿಂಸೆ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗಲೂ ಹರಿದಾಡುತ್ತಿದೆ. ಅಭಿನಂದನ್‌ ಮೇಲೆ ನಡೆದ ಅಮಾನವೀಯ ಕೃತ್ಯ ಜಿನೆವಾ ಒಪ್ಪಂದದ ಉಲ್ಲಂಘನೆ ಆಗಿದ್ದು, ಅದನ್ನು ಪ್ರಸಾರ ಮಾಡುವುದು ಸಹ ಕಾನೂನು ಬಾಹಿರ.

ಹೀಗಾಗಿ ಈ ವಿಡಿಯೋ ನಿಮ್ಮ ಮೊಬೈಲ್‌ ಸೇರಿದಂತೆ ನೀವು ಬಳಸುವ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಇದ್ದರೆ ಅದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಜೊತೆಗೆ ಆ ವಿಡಿಯೋವನ್ನು ಅಳಿಸಿಹಾಕಿ. ಇದು ನಮ್ಮ ಕಳಕಳಿ.

ಅಭಿ ವಿಡಿಯೋ ತೆಗೆಯಲು ಯಟ್ಯೂಬ್‌ಗೆ ಸೂಚನೆ

ಸೇನಾ ಕಾರ್ಯಾಚರಣೆ ವೇಳೆ ವಿಮಾನ ಪತನಗೊಂಡು ಪಾಕಿಸ್ತಾನದಲ್ಲಿ ಸೆರೆಯಾದ ವಾಯುಪಡೆಯ ಯೋಧ ಅಭಿನಂದನ್‌ ಕುರಿತು ಇತ್ತೀಚೆಗೆ ಅಪ್‌ಲೋಡ ಮಾಡಲಾದ 11 ವಿಡಿಯೋ ಮತ್ತು ಅವುಗಳ ಲಿಂಕ್‌ಗಳನ್ನು ಅಳಿಸಿ ಹಾಕುವಂತೆ ಯುಟ್ಯೂಬ್‌ಗೆ ಭಾರತ ಸರ್ಕಾರ ಸೂಚಿಸಿದೆ. ಈ ಕುರಿತು ಯಟ್ಯೂಬ್‌ನ ಮಾತೃಸಂಸ್ಥೆ ಗೂಗಲ್‌ನ ವಕ್ತಾರರು ಪ್ರತಿಕ್ರಿಯಿಸಿ ಸರ್ಕಾರ ಕೋರಿಕೆ ಮೇರೆಗೆ ಈಗಾಗಲೇ ಅಂಥಹ ವಿಡಿಯೋ ತೆಗೆದುಹಾಕಲಾಗಿದೆ.

ಆದಾಗ್ಯೂ ದಿನನಿತ್ಯ ವಿವಿಧ ಹೆಸರುಗಳಿಂದ ಈ ಕ್ಲಿಪ್ಪಿಂಗ್‌ ಅಪ್‌ಲೋಡ್‌ ಆಗುತ್ತಿದ್ದು, ಅದನ್ನು ಪಾರದರ್ಶಕ ಕಾಯ್ದೆ ಅಡಿ ಅಳಿಸಿಹಾಕಲು ಸಂಸ್ಥೆ ಮುಂದಾಗಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ ಎಂದು ಭರವಸೆ ನೀಡಿದ್ದಾರೆ. ಅಭಿನಂದನ್‌ ಮೇಲೆ ಪಾಕ್‌ ನಾಗರಿಕರು ಹಲ್ಲೆ ನಡೆಸಿದ ದೃಶ್ಯಗಳು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

click me!