ಒಂದೇ ರೀತಿಯ ಆಹಾರಕ್ಕೆ ರೆಸ್ಟೋರೆಂಟ್ ಹಾಗು ಜೊಮೋಟೋದಲ್ಲಿ ಇರುವ ಬೆಲೆ ವ್ಯತ್ಯಾಸದ ಬಗ್ಗೆ ಲಿಂಕ್ಡಿನ್ ಯೂಸರ್ ಪ್ರತ್ಯಯ್ ಚಟರ್ಜಿ ಗಮನಸೆಳೆದಿದ್ದಾರೆ. ಹೆಚ್ಚಿನವರು ಜೊಮೋಟೋದಲ್ಲಿ ಬೆಲೆ ಹೆಚ್ಚಿರುವುದನ್ನು ಸಮರ್ಥಿಸಿಕೊಂಡಿದ್ದರೆ, ಇನ್ನೂ ಕೆಲವರು ಟೀಕೆ ಮಾಡಿದ್ದಾರೆ.
ಬೆಂಗಳೂರು (ಅ.17): ಫುಡ್ ಅಗ್ರಿಗೇಟರ್ ಅಪ್ಲಿಕೇಶ್‌ನ ಜೊಮೋಟೋ, ಸ್ವಿಗ್ವಿ ಮೇಲೆ ಇಂಥ ಆರೋಪಗಳು ಹೊಸದೇನಲ್ಲ. ಎರಡೂ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ರೆಸ್ಟೋರೆಂಟ್‌ನಲ್ಲಿ ಆರ್ಡರ್ ಬುಕ್ ಮಾಡಿದರೆ, ಅತಿಯಾದ ಮೊತ್ತವನ್ನು ತೋರಿಸುತ್ತದೆ. ಆದರೆ, ರೆಸ್ಟೋರೆಂಟ್‌ನಲ್ಲಿ ಇದು ತೀರಾ ಕಡಿಮೆ ಬೆಲೆಗೆ ಇರುತ್ತದೆ ಎಂದು ಗ್ರಾಹಕರು ವಾದ ಮಾಡೋದುಂಟು. ಅದು ನಿಜ ಕೂಡ ಹೌದು. ಆದರೆ, ಎಷ್ಟು ಪ್ರಮಾಣದಲ್ಲಿ ಹಣ ಏರಿಕೆ ಮಾಡುತ್ತದೆ ಅನ್ನೋದಕ್ಕೆ ಸ್ಪಷ್ಟ ಉತ್ತರವಿಲ್ಲ. ಕೆಲವೊಮ್ಮೆ ರೆಸ್ಟೋರೆಂಟ್‌ನಲ್ಲಿ ಇರುವ ಬೆಲೆಗಿಂತ ದುಪ್ಪಟ್ಟು ಬೆಲೆಯನ್ನು ಅದೇ ಆಹಾರಕ್ಕೆ ಜೊಮೋಟೋ ತೋರಿಸುತ್ತಿರುತ್ತದೆ. ಇದೇ ವಿಚಾರವಾಗಿ ವ್ಯಕ್ತಿಯೊಬ್ಬ ಜೊಮೋಟೋ ಮಾಲೀಕ ಹಾಗೂ ಸಿಇಒ ದೀಪೆಂದರ್ ಗೋಯೆಲ್‌ಗೆ ಪ್ರಶ್ನೆ ಮಾಡಿದ್ದಾರೆ. ಇನ್ನು ಇ ವ್ಯಕ್ತಿ ಮಾಡಿರುವ ಪೋಸ್ಟ್‌ಗೆ ಪರ ಹಾಗೂ ವಿರೋಧದ ಮಾತುಗಳು ಕೇಳಿ ಬಂದಿವೆ. ಕೆಲವರು ಜೊಮೋಟೋದಲ್ಲಿ ದುಪ್ಪಟ್ಟು ಬೆಲೆ ತೋರಿಸುವುದು ಸರಿಯಾಗಿದೆ. ಅದರಲ್ಲೇ ಬುಕ್ ಮಾಡಬೇಕು ಎಂದಾದಲ್ಲಿ ಹಣ ತೆರಲೇಬೇಕು ಎಂದು ಹೇಳಿದ್ದಾರೆ. ಇನ್ನೂ ಕೆಲವರು ಜೊಮೋಟೋದಲ್ಲಿ ಬೆಲೆ ಏರಿಕೆ ಮಾಡೋದು ಗೊತ್ತಿದೆ. ಆದರೆ, ಕೆಲವೊಮ್ಮೆ ಈ ಬೆಲೆಗಳು ತೀರಾ ಅತಿಯಾಗಿರುತ್ತವೆ ಎಂದು ದೂರಿದ್ದಾರೆ.
ಜೊಮೋಟೋ ಬಗ್ಗೆ ಲಿಂಕ್ಡಿನ್ ಪೋಸ್ಟ್‌ನಲ್ಲಿ ವ್ಯಕ್ತಿ ಬರೆದಿದ್ದೇನು: ಪ್ರತ್ಯಯ್ ಬ್ಯಾನರ್ಜಿ ಎಂಬ ವ್ಯಕ್ತಿ ಮಿಕ್ಸ್‌ಡ್ ಕ್ಯಾಂಟೋನೀಸ್ ಗ್ರೇವಿ ನೂಡಲ್ಸ್ ಮತ್ತು ಡ್ರೈ ಚಿಲ್ಲಿ ಚಿಕನ್ ಅನ್ನು ಜೊಮೋಟೋದಲ್ಲಿ ಆರ್ಡರ್ ಮಾಡಿದರು. ಈ ಎರಡೂ ಫುಡ್‌ಗಳು ನೇರವಾಗಿ ರೆಸ್ಟೋರೆಂಟ್‌ನಿಂದ ಆರ್ಡರ್ ಮಾಡಿದರೆ, ಜೊಮೋಟೋದಿಂದ ಆರ್ಡರ್ ಮಾಡಿದರೆ ಬೇರೆ ಬೇರೆ ಬೆಲೆ ತೋರಿಸುತ್ತಿತ್ತು. ರೆಸ್ಟೋರೆಂಟ್‌ನಿಂದ ಮಾಡಿದ ಆರ್ಡರ್‌ನಲ್ಲಿ ಬಿಲ್ 370 ರೂಪಾಯಿ ಎಂದು ತೋರಿಸಿದರೆ, ಜೊಮೋಟೋದಲ್ಲಿ ಇದೇ ಎರಡು ಫುಡ್‌ಗಳಿಗೆ 563 ರೂಪಾಯಿ ಬೆಲೆ ತೋರಿಸುತ್ತಿತ್ತು. ಒಂದೇ ರೆಸ್ಟೋರೆಂಟ್‌ನಿಂದ ಒಂದೇ ರೀತಿಯಾದ ಫುಡ್‌ಗೆ ಜೊಮೋಟೋದಲ್ಲಿ 193 ರೂಪಾಯಿ ಹೆಚ್ಚಿನ ಹಣ ತೋರಿಸುತ್ತಿತ್ತು ಎಂದಿದ್ದಾರೆ.
ಒಟ್ಟಾರೆ ಬಿಲ್ ದುಬಾರಿ ಮಾತ್ರವಲ್ಲ, ಜೊಮೋಟೋ ಅಪ್ಲಿಕೇಶನ್‌ನಲ್ಲಿ ಇರುವ ಕೆಲವೊಂದು ಫುಡ್‌ಗಳು ತೀರಾ ದುಬಾರಿಯಾಗಿವೆ ಎಂದು ವ್ಯಕ್ತಿ ಬರೆದುಕೊಂಡಿದ್ದಾರೆ. ರೆಸ್ಟೋರೆಂಟ್‌ನಲ್ಲಿ ನ್ಯೂಡಲ್ಸ್‌ಗೆ 190 ರೂಪಾಯಿ ಇದ್ದರೆ, ಜೊಮೋಟೋದಲ್ಲಿ ಇದರ ಬೆಲೆ 300 ರೂಪಾಯಿ ಆಗಿತ್ತು. ಇನ್ನು ಚಿಲ್ಲಿ ಚಿಕನ್‌ಗೆ ರೆಸ್ಟೋರೆಂಟ್‌ನಲ್ಲಿ 180 ರೂಪಾಯಿ ಇದ್ದರೆ, ಜೊಮೋಟೋದಲ್ಲಿ 270 ರೂಪಾಯಿ ತೋರಿಸುತ್ತಿತ್ತು ಎಂದಿದ್ದಾರೆ.
ಎರಡೂ ಬಿಲ್‌ನ ಚಿತ್ರದೊಂದಿಗೆ ಪೋಸ್ಟ್ ಮಾಡಿರುವ ವ್ಯಕ್ತಿ, 'ರೆಸ್ಟೋರೆಂಟ್‌ನಿಂದ ನೇರ ಆರ್ಡರ್ ಹಾಗೂ ಜೊಮೋಟೋ ಆರ್ಡರ್‌ನಲ್ಲಿನ ಬಿಲ್ ವ್ಯತ್ಯಾಸ. ದೀಪೇಂದರ್ ಗೋಯೆಲ್ ನಿಮ್ಮ ಉತ್ತಮ ಕೆಲಸವನ್ನ ಮುಂದುವರಿಸಿ. ನನ್ನ ಪ್ರಕಾರ ನೀವು ಶೀಘ್ರದಲ್ಲೇ ಏರೋಪ್ಲೇನ್ ಅಥವಾ ಯಾಚ್ ಕೂಡ ಖರೀದಿ ಮಾಡ್ತೀರಿ' ಎಂದು ಜೊಮೋಟೋ ಹ್ಯಾಶ್‌ಟ್ಯಾಗ್ ಬಳಸಿ ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ.
ಫುಡ್ ಆರ್ಡರ್ ಮಾಡಿದ ಗ್ರಾಹಕರಿಗೆ ಅಚ್ಚರಿ, ಡೆಲಿವರಿಗೆ ಬಂದ ಜೊಮ್ಯಾಟೋ ಸಿಇಒ & ಪತ್ನಿ!
ಜನ ಪ್ರತಿಕ್ರಿಯೆ ನೀಡಿದ್ದು ಹೇಗೆ: ಹೆಚ್ಚಿನ ಜನರು ಇದಕ್ಕೆ ಪರ ವಿರೋಧ ವ್ಯಕ್ತಪಡಿಸಿದ್ದಾರೆ. ಜೊಮೋಟೋದಲ್ಲಿ ಆರ್ಡರ್ ಮಾಡಿದಾಗ ಅವರುಮನೆ ಬಾಗಿಲಿಗೆ ತಂದು ಫುಡ್ ನೀಡುತ್ತಾರೆ. ಫುಡ್ ಡೆಲಿವರಿ ಬಾಯ್‌ಗಳು ಇದರಿಂದ ಲಾಭ ಮಾಡಿಕೊಳ್ಳುತ್ತಾರೆ. ಅದರೊಂದಿಗೆ ಬ್ರ್ಯಾಂಡ್ ಪ್ಯಾಕೇಜಿಂಗ್ ಕೂಡ ಮಾಡುತ್ತಾರೆ. ಇದೆಲ್ಲ ಕಾರಣಕ್ಕೆ ಬೆಲೆ ಏರಿಕೆ ಆಗುತ್ತದೆ ಎಂದಿದ್ದಾರೆ.
Blinkit ನಲ್ಲಿ ಆರ್ಡರ್ ಮಾಡಿ 10 ನಿಮಿಷಗಳಲ್ಲಿ iPhone 16 ನಿಮ್ಮ ಮನೆ ಬಾಗಿಲಿಗೆ!