ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 19 ರ ಸಂಜೆ ವ್ಯಾಟ್ಸ್ಆ್ಯಪ್ ಚಾನೆಲ್ ಆರಂಭಿಸಿದ್ದರು. ಈ ಮೂಲಕ ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಿದ್ದರು. ಇದೀಗ ಒಂದೇ ದಿನಕ್ಕೆ ಮೋದಿ 1 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಪಡೆದು ಹೊಸ ದಾಖಲೆ ಬರೆದಿದ್ದಾರೆ.
ನವದೆಹಲಿ(ಸೆ.20) ಪ್ರಧಾನಿ ನರೇಂದ್ರ ಮೋದಿ ಗಣೇಶ ಹಬ್ಬದ ದಿನ ಹಲವು ಐತಿಹಾಸಿಕ ನಿರ್ಧಾರ ಪ್ರಕಟಿಸಿದ್ದರು. ಹೊಸ ಸಂಸತ್ ಭವನದಲ್ಲಿ ಕಲಾಪ, ಮಹಿಳಾ ಮೀಸಲಾತಿ ಬಿಲ್ ಮಂಡನೆ ಮಾಡಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಜನಸಾಮಾನ್ಯರ ಜೊತೆ ಸುಲಭವಾಗಿ ಸಂವಹನ ನಡೆಸಲು ವ್ಯಾಟ್ಸ್ಆ್ಯಪ್ ಚಾನೆಲ್ ಆರಂಭಿಸಿದ್ದರು. ಇದೀಗ ಒಂದೇ ದಿನಕ್ಕೆ ಪ್ರದಾನಿ ಮೋದಿ 1 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಪಡೆದಿದ್ದಾರೆ. ಅತ್ಯಲ್ಪ ಸಮಯದಲ್ಲಿ ವ್ಯಾಟ್ಸ್ಆ್ಯಪ್ ಚಾನೆಲ್ ಪಡೆದ ಗರಿಷ್ಠ ಫಾಲೋವರ್ಸ್ ಸಂಖ್ಯೆ ಅನ್ನೋ ಹೆಗ್ಗಳಿಕೆಗೆ ನರೇಂದ್ರ ಮೋದಿ ಚಾನೆಲ್ ಪಾತ್ರವಾಗಿದೆ.
ಬುಧವಾರ(ಸೆ.20) ಸಂಜೆ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ವ್ಯಾಟ್ಸ್ಆ್ಯಪ್ ಚಾನೆಲ್ 10,00,386ಕ್ಕೂ ಹೆಚ್ಚು ಫಾಲೋವರ್ಸ್ ಪಡೆದಿದ್ದಾರೆ. ಸಾಮಾಜಿಕ ಜಾಲಾತಣದಲ್ಲಿ ಸಕ್ರಿಯವಾಗಿರುವ ಪ್ರಧಾನಿ ಮೋದಿ ಟ್ವಿಟರ್ ಮೂಲಕ ಜನರನ್ನು ತಲುಪುತ್ತಿದ್ದಾರೆ. ಆದರೆ ಟ್ವಿಟರ್ ಬಳಕೆದಾರರಲ್ಲಿ ಜನಸಾಮಾನ್ಯರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಮೋದಿ ವ್ಯಾಟ್ಸ್ಆ್ಯಪ್ ಚಾನೆಲ್ ಮೂಲಕ ಜನಸಾಮಾನ್ಯರನ್ನು ತಲುಪಲು ಸಾಧ್ಯವಾಗಿದೆ.
ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾದ ಮೋದಿ, ವ್ಯಾಟ್ಸ್ಆ್ಯಪ್ ಚಾನೆಲ್ ಸೇರಿದ ಪ್ರಧಾನಿ!
ಇತ್ತೀಚೆಗೆ ವ್ಯಾಟ್ಸ್ಆ್ಯಪ್ ಹೊಸ ಫೀಚರ್ ಆರಂಭಿಸಿತ್ತು. ವ್ಯಾಟ್ಸ್ಆ್ಯಪ್ ಚಾನೆಲ್ ಮೂಲಕ ಅತೀ ದೊಡ್ಡ ಸಂಖ್ಯೆಯಲ್ಲಿ ಜನರನ್ನು ತಲುಪಲು ಸಾಧ್ಯವಿದೆ. ಪ್ರಧಾನಿ ಮೋದಿಯಿಂದ ನೇರವಾಗಿ ಮಾಹಿತಿಗಳು, ಯೋಜನೆಗಳು ಜನರಿಗೆ ತಲುಪಲಿದೆ. ಜನಸಾಮಾನ್ಯರು ಈ ಚಾನಲ್‌ಗೆ ಸೇರ್ಪಡೆಯಾಗುವ ಮೂಲಕ ಪ್ರಧಾನಿ ಮೋದಿ ಅವರು ನೀಡುವ ಮಾಹಿತಿಗಳನ್ನು ಪ್ರತಿಕ್ಷಣವೂ ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಟ್ವೀಟರ್‌ನಲ್ಲಿ ಮೋದಿ ಸಾಕಷ್ಟು ಸಕ್ರಿಯರಾಗಿದ್ದು, ಇದೀಗ ವಾಟ್ಸಾಪ್ ಚಾನಲ್‌ಗೂ ಕಾಲಿಟ್ಟಿದ್ದಾರೆ.
ಈ ಮೂಲಕ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ವಾಟ್ಸಾಪ್ ಚಾನಲ್ ಎಂಬುದು ಮೆಟಾ ಸಂಸ್ಥೆ ಹೊಸದಾಗಿ ನೀಡುತ್ತಿರುವ ಸೇವೆಯಾಗಿದ್ದು, ಅತಿ ಹೆಚ್ಚು ಜನರನ್ನು ಒಂದೇ ಬಾರಿ ತಲುಪಲು ಈ ವೇದಿಕೆ ಸಹಾಯ ಒದಗಿಸಲಿದೆ.
ಭಾರತದಲ್ಲಿ ವ್ಯಾಟ್ಸ್ಆ್ಯಪ್ ಚಾನೆಲ್ ಆರಂಭ, ಇದು ಹೇಗೆ ಕಾರ್ಯನಿವಹಿಸುತ್ತದೆ?
ಮೋದಿ ವ್ಯಾಟ್ಸ್ಆ್ಯಪ್ ಕಮ್ಯೂನಿಟಿ ಚಾನೆಲ್ ಗ್ರೂಪ್ ಸೇರಲು ನೀಡಿರುವ ಲಿಂಕ್ ಇಲ್ಲಿದೆ
https://whatsapp.com/channel/0029Va8IaebCMY0C8oOkQT1F
ಪ್ರಧಾನಿ ಮೋದಿ ವ್ಯಾಟ್ಸ್ಆ್ಯಪ್ ಚಾನೆಲ್ ಲಿಂಕ್ ಕ್ಲಿಕ್ ಮಾಡಿ ಸುಲಭವಾಗಿ ನರೇಂದ್ರ ಮೋದಿ ಚಾನೆಲ್ ಹಿಂಬಾಲಕರಾಗಲು ಸಾಧ್ಯವಿದೆ.