ಕಾರ್ಯಕರ್ತ ಅಸ್ವಸ್ಥಗೊಳ್ಳುತ್ತಿದ್ದಂತೆ ಭಾಷಣ ನಿಲ್ಲಿಸಿ ವೈದ್ಯಕೀಯ ನೆರವಿಗೆ ಸೂಚಿಸಿದ ಮೋದಿ

Chethan Kumar   | ANI
Published : Feb 08, 2025, 09:07 PM IST
ಕಾರ್ಯಕರ್ತ ಅಸ್ವಸ್ಥಗೊಳ್ಳುತ್ತಿದ್ದಂತೆ ಭಾಷಣ ನಿಲ್ಲಿಸಿ ವೈದ್ಯಕೀಯ ನೆರವಿಗೆ ಸೂಚಿಸಿದ ಮೋದಿ

ಸಾರಾಂಶ

ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಲಾಗಿತ್ತು. ಈ ವೇಳೆ ಮೋದಿ ಭಾಷಣದ ನಡುವೆ ಕಾರ್ಯಕರ್ತ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಭಾಷಣ ನಿಲ್ಲಿಸಿ ಕಾರ್ಯಕರ್ತನಿಗೆ ವೈದ್ಯಕೀಯ ನೆರವು ನೀಡುವಂತೆ ಸೂಚಿಸದ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

ನವದೆಹಲಿ(ಫೆ.08) ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. 48 ಸ್ಥಾನ ಗೆದ್ದುಕೊಂಡು ಅಧಿಕಾರಕ್ಕೇರಿದೆ. ಬರೋಬ್ಬರಿ 27 ವರ್ಷಗಳ ಬಳಿಕ ದೆಹಲಿಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ದೇಶಾದ್ಯಂತ ಬಿಜೆಪಿ ಕಾರ್ಯಕರ್ತರ ಸಂಭ್ರಮ ಜೋರಾಗಿದೆ. ದೆಹಲಿ ಗೆಲುವು ಅಧಿಕೃತಗೊಳ್ಳುತ್ತಿದ್ದಂತೆ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಸೇರಿದತೆ ಬಿಜೆಪಿ ಪ್ರಮುಖ ನಾಯಕರು, ದೆಹಲಿ ನಾಯಕರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕರ್ತನ್ನುದ್ದೇಶಿ ಪ್ರಧಾನಿ ಮೋದಿ ಮಾತನಾಡುತ್ತಿದ್ದ ವೇಳೆ ಕಾರ್ಯಕರ್ತನೊಬ್ಬ ಅಸ್ವಸ್ಥಗೊಂಡಿದ್ದ. ತಕ್ಷಣವೇ ಮೋದಿ ಭಾಷಣ ನಿಲ್ಲಿಸಿದ್ದಾರೆ. ಬಳಿಕ ಕಾರ್ಯಕರ್ತನಿಗೆ ವೈದ್ಯಕೀಯ ನೆರವು ಸೂಚಿಸಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.

ದೆಹಲಿ ಬಿಜೆಪಿ ಪ್ರಧಾನ ಕಚೇರಿ ಬಳಿಕ ಅಪಾರ ಕಾರ್ಯಕರ್ತರು, ನಾಯಕರು ಸೇರಿದ್ದರು. ಕಾರ್ಯಕರ್ತರನ್ನುದ್ದೇಶಿ ಮೋದಿ ಭಾಷಣ ಮಾಡಿದ್ದಾರೆ. ಇದೇ ವೇಳೆ ಮೋದಿ ಮೋದಿ ಜಯಘೋಷಗಳು ಮೊಳಗಿದೆ.ಇತ್ತ ಕಾರ್ಯಕರ್ತನೊಬ್ಬ ಅಸ್ವಸ್ಥಗೊಂಡು ಕುಸಿದಿದ್ದಾನೆ. ಕಾರ್ಯಕರ್ತ ಅಸ್ವಸ್ಥಗೊಳ್ಳುತ್ತಿರುವುದು ಗಮನಿಸಿದ ಪ್ರಧಾನಿ ಮೋದಿ ತಕ್ಷಣ ಭಾಷಣ ನಿಲ್ಲಿಸಿದ್ದಾರೆ. ಕಿಕ್ಕಿರಿದು ಕಾರ್ಯಕರ್ತರು, ಜಯಘೋಷಗಳಿಂದ ಕಾರ್ಯಕರ್ತನಿಗೆ ಅಸ್ವಸ್ಥೆತೆ ಉಂಟಾಗಿದೆ. ವಿಶ್ರಾಂತಿಗೆ ಅನುವು ಮಾಡಿಕೊಡಿ ಎಂದು ಮೋದಿ ಸೂಚಿಸಿದ್ದಾರೆ. ಕಾರ್ಯಕರ್ತನಿಗೆ ನೀರು ಕೊಡಿ ಎಂದು ಮೋದಿ ಹೇಳಿದ್ದಾರೆ. 

ಭಾರತಕ್ಕೆ ಹೊಸ ಚಿಂತನೆಯ ಅವಶ್ಯಕತೆ ಇದೆ - PM Modi speech | BJP Wins Delhi । Suvarna News

ಭಾಷಣ ನಿಲ್ಲಿಸಿದ ಮೋದಿ ಕಾರ್ಯಕರ್ತನಿಗೆ ಅಗತ್ಯ ವೈದ್ಯಕೀಯ ನೆರವು ನೀಡಲು ಸೂಚಿಸಿದ್ದಾರೆ. ನೀರು ಕುಡಿಯುತ್ತಿದ್ದಂತೆ ಕಾರ್ಯಕರ್ತ ಸ್ವಲ್ಪ ಚೇತರಿಸಿಕೊಂಡಿದ್ದಾರೆ. ಬಳಿಕ ಮೋದಿ ಭಾಷಣ ಮುಂದವರಿಸಿದ್ದಾರೆ. ಮೋದಿಯ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕಾರ್ಯಕರ್ತನ ಬಗ್ಗೆ ಈ ರೀತಿಯ ಕಾಳಜಿ ಇರುವ ಕಾರಣ ಬಿಜೆಪಿ ಈ ಮಟ್ಟಕ್ಕೆ ಬೆಳೆದಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಪ್ರಧಾನಿ ಮೋದಿ ತಮ್ಮ ಭಾಷಣವನ್ನೇ ಕಾರ್ಯಕರ್ತನಿಗಾಗಿ ನಿಲ್ಲಿದ್ದಾರೆ. ಇದು ಕಾರ್ಯಕರ್ತರ ಪಕ್ಷ. ಹೀಗಾಗಿ ಇಲ್ಲಿ ಕಾರ್ಯಕರ್ತರ ಅಭಿಪ್ರಾಯ, ಭಾವನೆಗಳಿಗೆ ಬೆಲೆ ಇದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ಮತ್ತೆ ಕೆಲವರು ಇದು ಪಿಆರ್ ಸ್ಟಂಟ್ ಎಂದೂ ಕಮೆಂಟ್ ಮಾಡಿದ್ದಾರೆ. 

"ನಾನು ದೆಹಲಿ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ. ದೆಹಲಿ ನಮಗೆ ಮನಃಪೂರ್ವಕವಾಗಿ ಪ್ರೀತಿ ನೀಡಿದೆ ಮತ್ತು ನಾವು ನಿಮ್ಮ ಪ್ರೀತಿಯನ್ನು ಅಭಿವೃದ್ಧಿಯ ರೂಪದಲ್ಲಿ ದುಪ್ಪಟ್ಟು ಹಿಂದಿರುಗಿಸುತ್ತೇವೆ ಎಂದು ನಾನು ಮತ್ತೊಮ್ಮೆ ಭರವಸೆ ನೀಡುತ್ತೇನೆ ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. "ಇಂದು, ದೆಹಲಿ ಜನರ ಮನಸ್ಸಿನಲ್ಲಿ ಉತ್ಸಾಹ ಮತ್ತು ನಿರಾಳತೆ ಇದೆ. ಗೆಲುವಿನ ಉತ್ಸಾಹ ಮತ್ತು ದೆಹಲಿಯನ್ನು ಆಪ್-ದಾ ಮುಕ್ತಗೊಳಿಸಿದ್ದಕ್ಕೆ ನಿರಾಳತೆ... ಮೋದಿಯವರ ಗ್ಯಾರಂಟಿಯನ್ನು ನಂಬಿದ್ದಕ್ಕಾಗಿ ನಾನು ದೆಹಲಿ ಜನರಿಗೆ ತಲೆಬಾಗಿ ನಮಸ್ಕರಿಸುತ್ತೇನೆ" ಎಂದು ಅವರು ಹೇಳಿದರು.ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 47 ಸ್ಥಾನಗಳನ್ನು ಗೆದ್ದಿದೆ ಮತ್ತು ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಆಪ್ 22 ಸ್ಥಾನಗಳನ್ನು ಗೆದ್ದಿದೆ. ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಆಪ್‌ನ ಹಲವಾರು ಪ್ರಮುಖ ನಾಯಕರು ಚುನಾವಣೆಯಲ್ಲಿ ಸೋತಿದ್ದಾರೆ.

ಇದು ಸಾಮಾನ್ಯ ಗೆಲುವಲ್ಲ. ದೆಹಲಿ ಜನರು 'ಆಪ್-ದಾ'ವನ್ನು ಓಡಿಸಿದ್ದಾರೆ. ದೆಹಲಿಯನ್ನು 'ಆಪ್-ದಾ'ದಿಂದ ಮುಕ್ತಗೊಳಿಸಲಾಗಿದೆ. ದೆಹಲಿಯ ಆದೇಶ ಸ್ಪಷ್ಟವಾಗಿದೆ. ಇಂದು, ದೆಹಲಿಯಲ್ಲಿ ಅಭಿವೃದ್ಧಿ, ದೂರದೃಷ್ಟಿ ಮತ್ತು ನಂಬಿಕೆ ಗೆದ್ದಿದೆ. ಇಂದು, ಆಡಂಬರ, ಅರಾಜಕತೆ, ದುರಹಂಕಾರ ಮತ್ತು ದೆಹಲಿಯನ್ನು ಆವರಿಸಿದ್ದ 'ಆಪ್-ದಾ' ಸೋಲನ್ನುಂಡಿದೆ. ಈ ಗೆಲುವಿಗಾಗಿ ನಾನು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರನ್ನು ಮತ್ತು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ" ಎಂದು ಅವರು ಹೇಳಿದರು.

BJP ಕಾರ್ಯಕರ್ತರನ್ನುದ್ದೇಶಿಸಿ ಮೋದಿ ಮಾತು | BJP Wins Delhi । PM Modi speech | Suvarna News
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್