ಬಿಟ್ರೆ ಮೋದಿ ತಾಜ್ ಮಹಲ್‌ನ್ನೂ ಮಾರ್ತಾರೆ: ರಾಹುಲ್ ವಾಗ್ದಾಳಿ!

By Suvarna NewsFirst Published Feb 4, 2020, 5:21 PM IST
Highlights

ಪ್ರಧಾನಿ ಮೋದಿ ತಾಜ್ ಮಹಲ್’ನ್ನೂ ಮಾರುತ್ತಾರಂತೆ| ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ| ಏರ್ ಇಂಡಿಯಾ ಮಾರಾಟದ ನಿರ್ಧಾರ ಖಂಡಿಸಿದ ರಾಹುಲ್ ಗಾಂಧಿ| ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ರಾಹುಲ್ ಭಾಷಣ| ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದ ಕಾಂಗ್ರೆಸ್ ನಾಯಕ| ಬಿಟ್ಟರೆ ಮೋದಿ ತಾಜ್ ಮಹಲ್’ನ್ನೂ ಮಾರುತ್ತಾರೆ ಎಂದ ರಾಹುಲ್|  

ನವದೆಹಲಿ(ಫೆ.04): ಏರ್ ಇಂಡಿಯಾ ಮಾರಾಟ ಮಾಡಲು ಮುಂದಾಗಿರುವ ಮೋದಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಬೇಕಾದರೆ ತಾಜ್ ಮಹಲ್’ನ್ನೂ ಮಾರಿ ಬಿಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ರಾಹುಲ್, ಆರ್ಥಿಕವಾಗಿ ದಿವಾಳಿಯಾಗಿರುವ ಕೇಂದ್ರ ಸರ್ಕಾರ ಒಂದೊಂದಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮಾರಲು ಮುಂದಾಗಿದೆ ಎಂದು ಹರಿಹಾಯ್ದರು.

LIVE: Shri addresses public in Jangpura, Delhi. https://t.co/AbpHgkD52Y

— Congress (@INCIndia)

ಕೇವಲ ಏರ್ ಇಂಡಿಯಾ ಏನು ಪ್ರಧಾನಿ ಮೋದಿ ಬೇಕಾದರೆ ತಾಜ್ ಮಹಲ್’ನ್ನೂ ಮಾರಿ ಬಿಡುತ್ತಾರೆ. ಅರ್ಥ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ಇರದ ವ್ಯಕ್ತಿ ಪ್ರಧಾನಿ ಕುರ್ಚಿ ಮೇಲೆ ಕುಳಿತರೇ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ ಎಂಧು ರಾಹುಲ್ ಕಿಡಿಕಾರಿದರು.

ಮತ್ತೆ ಸೇಲ್‌ಗಿದೆ ಏರ್‌ ಇಂಡಿಯಾ: 100% ಷೇರು ಮಾರಲು ಕೇಂದ್ರ ಸಜ್ಜು!

ಏರ್ ಇಂಡಿಯಾ ಮಾರಾಟದ ನಿರ್ಧಾರ ಸರ್ಕಾರದ ಖಜಾನೆಯಾಗಿರುವುದನ್ನು ತಿಳಿಸುತ್ತದೆ ಎಂದ ರಾಹುಲ್, ಜ್ವಲಂತ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಸಿಎಎ ಹಾಗೂ NRC ಜಾರಿಗೆ ಮೋದಿ ಸರ್ಕಾರ ಹುನ್ನಾರ ನಡೆಸಿದೆ ಎಂದು ಗಂಭೀರ ಆರೋಪ ಮಾಡಿದರು.

click me!