Atmanirbhar Bharat: ಸಾಕಷ್ಟುಸಮಯ ಹಾಳಾಗಿದೆ, ಬೇಗ ಭಾರತವನ್ನು ಆತ್ಮನಿರ್ಭರ ಮಾಡಿ: ಮೋದಿ

By Kannadaprabha NewsFirst Published Dec 29, 2021, 4:30 AM IST
Highlights
  • ಐಐಟಿ ಪದವೀಧದರರಿಗೆ ಕರೆ
  • ಹಿಂದಿನ ಕಾಂಗ್ರೆಸ್‌ ಸರ್ಕಾರಕ್ಕೆ ಪರೋಕ್ಷ ಟಾಟಿ
  • ಸಾಕಷ್ಟುಸಮಯ ಹಾಳಾಗಿದೆ, ಬೇಗ ಭಾರತವನ್ನು ಆತ್ಮನಿರ್ಭರ ಮಾಡಿ: ಮೋದಿ

ಕಾನ್ಪುರ(ಡಿ.29): ‘ಈಗಾಗಲೇ ಸಾಕಷ್ಟುಸಮಯ ವ್ಯಯವಾಗಿದೆ. ಐಐಟಿ ಪದವೀಧರರು ಭಾರತ ದೇಶ ಇನ್ನು 25 ವರ್ಷದಲ್ಲಿ ಹೇಗೆ ರೂಪುಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಕೆಲಸ ಆರಂಭಿಸಬೇಕು’ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಮಂಗಳವಾರ ಐಐಟಿ-ಕಾನ್ಪುರದ 54ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ಭಾರತವು ಸ್ವಾತಂತ್ರ್ಯ ಸಿಕ್ಕ ನಂತರ ಹೊಸ ಪಯಣ ಆರಂಭಿಸಿತು. ಆದರೆ ನಂತರದ ಅವಧಿಯಲ್ಲಿ ದೇಶವು ತನ್ನ ಕಾಲಿನ ಮೇಲೆ ತಾನು ನಿಂತುಕೊಳ್ಳಲಿಲ್ಲ. ಅರ್ಥಾತ್‌ ದೇಶವನ್ನು ಸ್ವಾವಲಂಬಿ ಮಾಡಲು ಯತ್ನ ನಡೆಯಲಿಲ್ಲ. ಅಪಾರ ಅಮೂಲ್ಯ ಸಮಯವನ್ನು ಈ ಸಂದರ್ಭದಲ್ಲಿ ಹಾಳು ಮಾಡಲಾಯಿತು. ಆದರೆ ಇನ್ನು ಮುಂದೆ ಹೀಗಾಕೂಡದು. ಭಾರತವನ್ನು ಆತ್ಮನಿರ್ಭರ ಮಾಡುವತ್ತ ಐಐಟಿ ಪದವೀಧರರು ಇನ್ನು ವಿಳಂಬ ಮಾಡಬಾರದು’ ಎಂದು ಕಿವಿಮಾತು ಹೇಳಿದರು. ಈ ಮೂಲಕ ಕೇಂದ್ರದಲ್ಲಿನ ಹಿಂದಿನ ಕಾಂಗ್ರೆಸ್‌ ಹಾಗೂ ಜನತಾ ಸರ್ಕಾರಗಳನ್ನು ಪರೋಕ್ಷವಾಗಿ ಟೀಕಿಸಿದರು.

ಭ್ರಷ್ಟಾಚಾರದ ಸುಗಂಧದ್ರವ್ಯ ಸಿಂಪಡಿಸಿದ್ದ ಎಸ್‌ಪಿ: ಮೋದಿ ಚಾಟಿ

ಸಮಾಜವಾದಿ ಪಕ್ಷದ ಬೆಂಬಲಿಗ ಎನ್ನಲಾದ ಇಲ್ಲಿನ ಸುಗಂಧದ್ರವ್ಯ ಉದ್ಯಮಿ ಪೀಯೂಷ್‌ ಜೈನ್‌ ಮನೆಯಲ್ಲಿ ಸುಮಾರು 200 ಕೋಟಿ ರು. ನಗದು ಪತ್ತೆಯಾಗಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಇಲ್ಲಿ ನಡೆದ ಸಮಾವೇಶದಲ್ಲಿ ಪ್ರಸ್ತಾಪಿಸಿದರು. ‘ಡಬ್ಬಗಟ್ಟಲೇ ನೋಟು ಹೊರಬರುತ್ತಿವೆ. ಈ ಕೆಲಸ ಮಾಡಿದ್ದು ನಾವೇ ಎಂದು ಸಮಾಜವಾದಿ ಪಕ್ಷ ಹೇಳಿಕೊಳ್ಳುತ್ತಾ? 2017ಕ್ಕಿಂತ ಮೊದಲು ಇವರು ಭ್ರಷ್ಟಾಚಾರದ ಸುಗಂಧದ್ರವ್ಯವನ್ನು ರಾಜ್ಯಾದ್ಯಂತ ಸಿಂಪಡಿಸಿದ್ದರು’ ಎಂದು ಮೋದಿ ಕುಟುಕಿದರು.

ಕಾನ್ಪುರದಲ್ಲಿ ಮೆಟ್ರೋ ಉದ್ಘಾಟನೆ ಬಳಿಕ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸಮಾಜವಾದಿ ಪಕ್ಷವನ್ನು ಗುರಿಯಾಗಿಸಿಕೊಮಡು ವಾಗ್ದಾಳಿ ನಡೆಸಿದ್ದಾರೆ, ಈ ಹಿಂದೆ ನೋಟು ತುಂಬಿದ ಪೆಟ್ಟಿಗೆಗಳು ಬಂದ ನಂತರವೂ ನಾವೇ ಇದನ್ನು ಮಾಡಿಸಿದ್ದೇವೆ ಎಂದು ಇವರು ಆರೋಪಿಸಲಿದ್ದಾರೆ ಎಂದಿದ್ದಾರೆ. 2017ಕ್ಕಿಂತ ಮೊದಲು ಉತ್ತರ ಪ್ರದೇಶದಾದ್ಯಂತ ಎರಚಿದ್ದ ಭ್ರಷ್ಟಾಚಾರದ ಕ್ರೆಡಿಟ್ ತೆಗೆದುಕೊಳ್ಳಲು ಅವರು ಬರುವುದಿಲ್ಲ, ಆದರೆ ಜನರು ಯಾವ ನೋಟುಗಳ ಗುಡ್ಡ ಕಂಡರೋ ಅದೇ ಅವರ ಬಗೆಗಿನ ಸತ್ಯ ಎಂದಿದ್ದಾರೆ.

ಮೆಟ್ರೋದಲ್ಲಿ ವಿಚಾರವಾಗಿ ಇಡೀ ಕಾನ್ಪುರ ಅಭಿನಂದಿಸಿದ ಮೋದಿ

ಕಾನ್ಪುರದ ಜನರನ್ನು ಶ್ಲಾಘಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ತುಗ್ಗು ಲಡ್ಡುಗಳ ಬಗ್ಗೆಯೂ ಚರ್ಚೆ ನಡೆಸಿದರು. ಇಂದು, ಪಂಕಿ ವಾಲೆ ಹನುಮಾನ್ ಜಿ ಅವರ ಆಶೀರ್ವಾದದಿಂದ, ಕಾನ್ಪುರಕ್ಕೆ ಮೆಟ್ರೋ ಸಂಪರ್ಕ ಸಿಕ್ಕಿದೆ ಮತ್ತು ಕಾನ್ಪುರವನ್ನು ಸಂಸ್ಕರಣಾಗಾರಕ್ಕೆ ಸಂಪರ್ಕಿಸಲಾಗಿದೆ ಎಂದು ಮೋದಿ ಹೇಳಿದರು. ಇದರೊಂದಿಗೆ ಯುಪಿಯ ಹಲವು ಜಿಲ್ಲೆಗಳಿಗೆ ಪೆಟ್ರೋಲಿಯಂ ಉತ್ಪನ್ನಗಳ ಲಾಭ ಸುಲಭವಾಗಿ ಸಿಗಲಿದೆ. ಇಡೀ ಯುಪಿಗೆ ಅಭಿನಂದನೆಗಳು. ಕಾನ್ಪುರ ಮೆಟ್ರೋದಲ್ಲಿ ಪ್ರಯಾಣ ಮಾಡುವುದು ನನಗೆ ಮರೆಯಲಾಗದ ಅನುಭವ ಎಂದಿದ್ದಾರೆ.

click me!