
ನವದೆಹಲಿ (ಫೆ.21): ಚುನಾವಣೆಯಲ್ಲಿ (Elecction) ಮನಸೋ ಇಚ್ಛೆ ಭರವಸೆ ನೀಡಿ ಮಾತು ತಪ್ಪುವ ಪಕ್ಷಗಳು ಅಧಿಕವಾಗಿರುವ ಹಿನ್ನೆಲೆಯಲ್ಲಿ, ಇಂಥ ಪ್ರಣಾಳಿಕೆಗಳನ್ನು ನಿಯಂತ್ರಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ (Spreme Court) ಅರ್ಜಿ ಸಲ್ಲಿಸಲಾಗಿದೆ. ಈ ಕುರಿತು ಚುನಾವಣಾ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರಕ್ಕೆ (Central Government) ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಬಿಜೆಪಿ (BJP) ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ (Aswini Kumar Upadhyay) ಈ ಅರ್ಜಿ ಸಲ್ಲಿಸಿದ್ದು, ಮಾತು ತಪ್ಪುವ ಪಕ್ಷಗಳ ಚಿಹ್ನೆ ರದ್ದು ಮಾಡಬೇಕು ಹಾಗೂ ಇಂಥ ಪಕ್ಷಗಳ ನೋಂದಣಿ ರದ್ದು ಮಾಡಬೇಕು ಎಂದೂ ಕೋರಿದ್ದಾರೆ. ಬೇಕಾಬಿಟ್ಟಿ ಭರವಸೆ ನೀಡುವುದನ್ನು ಪಕ್ಷಗಳು ನಿಲ್ಲಿಸಬೇಕು. ಇಂಥ ಭರವಸೆಗಳಿಂದ, ಸಂಷ್ಟದ ಸಂದರ್ಭದಲ್ಲಿ ಸರ್ಕಾರದ ಬೊಕ್ಕಸಕ್ಕೆ ಹಾನಿಯೇ ಹೆಚ್ಚು.
ಹೀಗಾಗಿ ಇಂಥ ಭರವಸೆಗಳ ನಿಯಂತ್ರಣಕ್ಕೆ ಚುನಾವಣಾ ಆಯೋಗ ನಿಯಮ ರೂಪಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. 2013, 2015 ಹಾಗೂ 2020ರಲ್ಲಿ ಆಮ್ ಆದ್ಮಿ ಪಕ್ಷ (AAP) ಜನಲೋಕಪಾಲ್-ಸ್ವರಾಜ್ ಮಸೂದೆ ಜಾರಿಗೆ ತರುವ ಭರಸೆ ನೀಡಿತ್ತು. ಬಿಜೆಪಿ ಪದೇ ಪದೇ ಏಕರೂಪ ನಾಗರಿಕ ಸಂಹಿತೆ ಜಾರಿಯ ಭರವಸೆ ನೀಡುತ್ತದೆ. ಇವು ಯಾವುವೂ ಈಡೇರಿಲ್ಲ ಎಂದು ಉಪಾಧ್ಯಾಯ ಪ್ರಶ್ನಿಸಿದ್ದಾರೆ.
ಹಿಜಾಬ್ ವಿವಾದ, ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ, ಜತೆಗೊಂದು ಕಿವಿಮಾತು
BBMP ಚುನಾವಣೆ ಅರ್ಜಿ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಸಮ್ಮತಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಚುನಾವಣೆಗೆ ಸಂಬಂಧಿಸಿದ ಅರ್ಜಿಗಳ ತುರ್ತು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್(Supreme Court) ಗುರುವಾರ ತಿಳಿಸಿದೆ. ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಅವರು ಪಾಲಿಕೆ ಚುನಾವಣೆಗೆ(Election) ಕೆಲವು ಸಂಭಾವ್ಯ ಅಭ್ಯರ್ಥಿಗಳ ಪರ ವಾದ ಮಂಡಿಸಿ, ಬಿಬಿಎಂಪಿಯ 5 ವರ್ಷದ ಅಧಿಕಾರಾಧಿಯು ಸೆ.10, 2020ಕ್ಕೆ ಮುಕ್ತಾಯಗೊಂಡಿದೆ.
ಆದಾಗ್ಯೂ ಬಿಬಿಎಂಪಿ ಚುನಾವಣೆ ನಡೆಸಿಲ್ಲ. ಸುಪ್ರೀಂಕೋರ್ಟ್ ಆದೇಶದಿಂದಾಗಿ ಚುನಾವಣಾ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎಂದು ಮುಖ್ಯ ನ್ಯಾ. ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ಮನವರಿಕೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಈ ವಿಷಯ ನಮಗೆ ಬಿಟ್ಟು ಬಿಡಿ. ನಾವು ನೋಡಿಕೊಳ್ಳುತ್ತೇವೆ’ ಎಂದು ಹೇಳಿತು ಹಾಗೂ ತುರ್ತು ವಿಚಾರಣೆಯ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿತು.
ಪ್ರಕರಣ ಏನು?: 2020ರಲ್ಲಿ ಬಿಬಿಎಂಪಿಯ ವಾರ್ಡ್ ಸಂಖ್ಯೆಯನ್ನು 243ಕ್ಕೆ ವಿಸ್ತರಿಸುವ ಬದಲಾಗಿ ಹಾಲಿ ಇರುವ 198 ವಾರ್ಡುಗಳ ಮೂಲಕವೇ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್(High Court of Karnataka) ರಾಜ್ಯ ಚುನಾವಣಾ ಆಯೋಗಕ್ಕೆ(Election Commission) ಸೂಚಿಸಿತ್ತು. ಅಲ್ಲದೆ 6 ವಾರಗಳ ಒಳಗಾಗಿ ಚುನಾವಣೆ ನಡೆಸುವಂತೆ ತಿಳಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ(Government of Karnataka) ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
CD Case: ಸುಪ್ರೀಂನಲ್ಲಿ ರಮೇಶ್ ಜಾರಕಿಹೊಳಿಗೆ ಹಿನ್ನಡೆ: ಮತ್ತೆ ಸಂಕಷ್ಟದಲ್ಲಿ ಸಾಹುಕಾರ್..!
2009ರಿಂದ ಈಚೆಗೆ ಬಿಬಿಎಂಪಿ ಸಾಕಷ್ಟು ಬದಲಾಗಿದೆ. ಹೆಚ್ಚಿದ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳ ಮರುವಿಂಗಡಣೆ ತೀರಾ ಅಗತ್ಯ ಎಂದು ವಾದಿಸಿತ್ತು. ಆಗ ಅಂದಿನ ಮುಖ್ಯ ನ್ಯಾಯಾಧೀಶ ನ್ಯಾ. ಎಸ್.ಎ.ಬೋಬ್ಡೆ ಅವರ ಪೀಠ, ಚುನಾವಣೆಗೆ ತಡೆ ನೀಡಿತ್ತು. ಸೆಪ್ಟೆಂಬರ್ 2020ರಲ್ಲಿಯೇ ಹಾಲಿ ಬಿಬಿಎಂಪಿ ಕೌನ್ಸಿಲ್‌ನ ಐದು ವರ್ಷಗಳ ಅಧಿಕಾರಾವಧಿ ಮುಗಿದಿದೆ. ರಾಜ್ಯ ಸರ್ಕಾರವು ಹಿರಿಯ ಐಎಎಸ್ ಅಧಿಕಾರಿಯನ್ನು ಬಿಬಿಎಂಪಿಯ ಆಡಳಿತಾಧಿಕಾರಿಯನ್ನಾಗಿ ನೇಮಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ