ಬೆಂಗಳೂರು-ದಿಲ್ಲಿ ವಿಮಾನದಲ್ಲಿ ಬೆತ್ತಲಾದ ಪಾನಮತ್ತ ಪ್ರಯಾಣಿಕ!| ಕುಡಿದ ಮತ್ತಿನಲ್ಲೇ ಹುಸಿ ಬಾಂಬ್ ಬೆದರಿಕೆ
ನವದೆಹಲಿ(ಏ.10): ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಏರ್ ಏಷ್ಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಕುಡಿದ ಅಮಲಿನಲ್ಲಿ ಸಿಬ್ಬಂದಿಯೊಂದಿಗೆ ದುರ್ವರ್ತನೆ ತೋರಿ ಬೆತ್ತಲಾದ ಘಟನೆ ನಡೆದಿದೆ. ಅಲ್ಲದೆ, ಧರಿಸಿದ್ದ ಲೈಫ್ ಜಾಕೆಟ್ನೊಳಗೆ ಬಾಂಬ್ ಇಟ್ಟುಕೊಂಡಿದ್ದೇನೆ ಎಂದು ವಿಮಾನದ ಸಿಬ್ಬಂದಿ ಬೆದರಿಸಿದ್ದಾನೆ.
ಈ ರೀತಿ ಬ್ಲ್ಯಾಕ್ಮೇಲ್ ಮಾಡಿದ್ದ ಆತ, ಕೊನೆಗೆ ತನ್ನ ಮೈಮೇಲಿನ ಬಟ್ಟೆಗಳನ್ನು ತಾನೇ ಬಿಚ್ಚಿಕೊಳ್ಳಲು ಯತ್ನಿಸಿದ್ದ. ಆದರೆ ಪ್ರಯಾಣಿಕನ ಈ ದುರ್ವರ್ತನೆಗೆ ಸಿಬ್ಬಂದಿ ಬ್ರೇಕ್ ಹಾಕಿದರು ಎಂದು ವರದಿಯಾಗಿದೆ.
‘ಪ್ರಯಾಣಿಕ ಈ ದುರ್ವತನೆಯನ್ನು ದಿಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಏರ್ ಏಷ್ಯಾ ವಿಮಾನ ಸಂಸ್ಥೆ ತಿಳಿಸಿದೆ