ಸಂಸತ್‌ ಭದ್ರತಾ ಲೋಪ: ಸ್ಮೋಕ್‌ ಕ್ಯಾನ್‌ ಎಂದರೇನು? ಸಂಸತ್ತಿನ ವೀಕ್ಷಕರ ಪಾಸ್‌ ಪಡೆವ ಪ್ರಕ್ರಿಯೆ ಹೇಗಿದೆ ನೋಡಿ..

By Kannadaprabha News  |  First Published Dec 14, 2023, 8:12 AM IST

ಸಂಸತ್ತಿನಲ್ಲಿ ಅಧಿವೇಶನಗಳನ್ನು ವೀಕ್ಷಿಸಲು ಇಚ್ಚಿಸುವವರು ತಮ್ಮ ಕ್ಷೇತ್ರದ ಸಂಸದರ ಹೆಸರಿನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಆಗ ಸಂಸದರು ವೀಕ್ಷಕರ ಪೂರ್ವಾಪರಗಳನ್ನು ಪರಿಶೀಲಿಸಿ ಅವರಿಗೆ ಶಿಫಾರಸ್ಸು ಪತ್ರವನ್ನು ನೀಡುತ್ತಾರೆ.


ನವದೆಹಲಿ (ಡಿಸೆಂಬರ್ 14, 2023): ಇದೊಂದು ಚಿಕ್ಕ ಕ್ಯಾನ್‌ ರೀತಿಯ ವಸ್ತು. ಇದರೊಳಗೆ ನಾನಾ ರೀತಿಯ ಬಣ್ಣವನ್ನು ಗ್ಯಾಸ್‌ ಜೊತೆ ಸೇರಿಸಿ ತುಂಬಿಸಿ ಇಡಲಾಗುತ್ತದೆ. ಇದನ್ನು ಸ್ಮೋಕ್‌ ಕ್ಯಾನ್‌ ಎಂದು ಕರೆಯಲಾಗುತ್ತದೆ. ಇದು ಬಹುತೇಕ ದೇಶಗಳಲ್ಲಿ ಕಾನೂನು ಬದ್ಧ. ಇದರ ಬಳಕೆ ಅಪರಾಧವೇನೂ ಅಲ್ಲ. ಅಂಗಡಿಗಳಲ್ಲೂ ಇವು ಸುಲಭವಾಗಿ ಲಭ್ಯ.

ಸ್ಮೋಕ್‌ ಕ್ಯಾನ್‌ಗಳನ್ನು ಪ್ರಮುಖವಾಗಿ ಸೇನಾ ಕಾರ್ಯಾಚರಣೆಗಳಲ್ಲಿ ಬಳಸುತ್ತಾರೆ. ಅದರ ಮೂಲಕ ಹೊಗೆ ಚಿಮ್ಮಿಸಿ ವೈರಿಗಳ ಕಣ್ಣಿಗೆ ಮುಂದಿನ ದೃಶ್ಯ ಕಾಣಿಸದಂತೆ ಮಾಡಲು ಬಳಸಲಾಗುತ್ತದೆ. ಫೋಟೋಗ್ರಫಿಯಲ್ಲೂ ಸಹ ವಿಶೇಷ ರೀತಿಯಲ್ಲಿ ಕಾಲ್ಪನಿಕ ಲೋಕವನ್ನು ಸೃಷ್ಟಿ ಮಾಡಲು ಬಳಸುತ್ತಾರೆ. ಹಾಗೆಯೇ ಕ್ರೀಡಾಂಗಣಗಳಲ್ಲೂ ಸಹ ಪ್ರೇಕ್ಷಕರನ್ನು ಹುರಿದುಂಬಿಸಲು ತರಹೇವಾರಿ ಬಣ್ಣದ ಹೊಗೆಯನ್ನು ಸಿಲಿಂಡರ್‌ಗಳಲ್ಲಿ ತುಂಬಿಟ್ಟು ವಿಶೇಷ ಸಾಧನೆ ಮಾಡಿದಾಗ ಹೊರಸೂಸಲಾಗುತ್ತದೆ.

Tap to resize

Latest Videos

NEWS HOUR: ಸಂಸದೀಯ ಇತಿಹಾಸದಲ್ಲೇ ಅತಿದೊಡ್ಡ ಭದ್ರತಾ ಲೋಪ, ದಾಳಿಕೋರರಿಗೆ ಮೈಸೂರು ಲಿಂಕ್‌!

ಸಂಸತ್ತಿನ ವೀಕ್ಷಕರ ಪಾಸ್‌ ಪಡೆವ ಪ್ರಕ್ರಿಯೆ ಹೇಗೆ?
ಸಂಸತ್ತಿನಲ್ಲಿ ಅಧಿವೇಶನಗಳನ್ನು ವೀಕ್ಷಿಸಲು ಇಚ್ಚಿಸುವವರು ತಮ್ಮ ಕ್ಷೇತ್ರದ ಸಂಸದರ ಹೆಸರಿನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಆಗ ಸಂಸದರು ವೀಕ್ಷಕರ ಪೂರ್ವಾಪರಗಳನ್ನು ಪರಿಶೀಲಿಸಿ ಅವರಿಗೆ ಶಿಫಾರಸ್ಸು ಪತ್ರವನ್ನು ನೀಡುತ್ತಾರೆ.

ನಂತರ ವೀಕ್ಷಕರು ಅದನ್ನು ಸಂಸತ್ತಿನ ಪ್ರವೇಶ ದ್ವಾರದಲ್ಲಿ ನೀಡಿ ತಮ್ಮ ಪಾಸ್‌ ಪಡೆದುಕೊಳ್ಳಬೆಕು. ಮುಂದೆ ಅವರನ್ನು ಮೆಟಲ್‌ ಡಿಟೆಕ್ಟರ್‌ ಮತ್ತು ಇತರ ಸಾಧನಗಳ ಮೂಲಕ ಕಟ್ಟುನಿಟ್ಟಿನ ಭದ್ರತಾ ತಪಾಸಣೆ ಮಾಡಿ ವೀಕ್ಷಕರ ಗ್ಯಾಲರಿಗೆ ಪ್ರವೇಶ ಕಲ್ಪಿಸುತ್ತಾರೆ.

ಇದನ್ನು ಓದಿ: ಸಂಸತ್ ದಾಳಿಯಿಂದ ಪ್ರೇಕ್ಷಕರ ಪಾಸ್ ರದ್ದು, ಬೆಳಗಾವಿ ಸುವರ್ಣಸೌಧದಲ್ಲಿ ಹೈ ಅಲರ್ಟ್!

click me!