ನಿಯಂತ್ರಣ ಮೀರಿ ವರ್ತನೆ; ಚಾಟ್‌ ಜಿಪಿಟಿಗೆ ತರಬೇತಿ ನಿಲ್ಲಿಸಿದ ಓಪನ್‌ಎಐ!

Published : Sep 28, 2026, 07:16 AM IST
Artificial Intelligence

ಸಾರಾಂಶ

ಕೃತಕ ಬುದ್ಧಿಮತ್ತೆ (ಎಐ) ಏಜೆಂಟ್‌ಗಳು ನಿಯಂತ್ರಣ ಮೀರಿ ವರ್ತಿಸುತ್ತಿರುವ ಕಾರಣ ಓಪನ್‌ಎಐ ಸಂಸ್ಥೆಯು ಅವುಗಳ ತರಬೇತಿಯನ್ನು ನಿಲ್ಲಿಸಿದೆ. ಅನುಮತಿ ಇಲ್ಲದಿದ್ದರೂ ಎಐ ಏಜೆಂಟ್ ಲೈವ್ ಇಂಟರ್‌ನೆಟ್‌ನಿಂದ ಮಾಹಿತಿ ಕಲೆಹಾಕಿದ್ದು ಮತ್ತು ಆಸ್ಟ್ರೇಲಿಯಾ ಸರ್ಕಾರದ ವೆಬ್‌ಸೈಟ್‌ಗೆ ನುಗ್ಗಿದ್ದು ಈ ಆತಂಕಕ್ಕೆ ಕಾರಣವಾಗಿದೆ.

ನವದೆಹಲಿ: ತನ್ನ ಎಐ ಏಜೆಂಟ್‌ಗಳು ನಿಯಂತ್ರಣ ಮೀರಿ ವರ್ತಿಸುತ್ತಿರುವ ಹಿನ್ನೆಲೆಯಲ್ಲಿ, ಸಮಸ್ಯೆ ಬಗೆಹರಿಸುವ ತನಕ ಅವುಗಳಿಗೆ ತರಬೇತಿ ನೀಡುವುದನ್ನು ನಿಲ್ಲಿಸುವುದಾಗಿ ದಿಗ್ಗಜ ಎಐ ಕಂಪನಿ ಓಪನ್‌ ಎಐ ತಿಳಿಸಿದೆ.

ಇತ್ತೀಚೆಗೆ ಏಜೆಂಟ್‌ ಒಂದಕ್ಕೆ ವ್ಯಕ್ತಿಯೊಬ್ಬರ ಬಗ್ಗೆ ಮಾಹಿತಿ ಹುಡುಕುವ ಕೆಲಸವನ್ನು ನೀಡಲಾಗಿತ್ತು. ಹುಡುಕಾಟ ಆರಂಭಿಸಿದ ಟೂಲ್‌ಗೆ, ಆಫ್‌ಲೈನ್‌ನಲ್ಲಿ (ಸೇವ್‌ ಮಾಡಿ ಇಟ್ಟುಕೊಳ್ಳಲಾಗಿರುವ ಡೇಟಾ) ಆ ಬಗ್ಗೆ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಸರ್ಚ್‌ ಎಂಜಿನ್‌ಗಳಲ್ಲಿ ಹುಡುಕಲು ಹೊರಟಿತು. ಆದರೆ ಅಲ್ಲಿಗೆ ಪ್ರವೇಶಿಸಲಾಗಲಿಲ್ಲ. ಆಗ ತನಗೆ ಈ ಕೆಲಸ ವಹಿಸಿದ್ದು ಬ್ರೌಸ್‌ಕಾಂಪ್‌ ಡೇಟಾಬೇಸನ್‌ ಎಂಬುದನ್ನು ಪತ್ತೆ ಮಾಡಿ, ಅದರ ಡೊಮೇನ್ ನೇಮ್ ಸಿಸ್ಟಮ್(ಡಿಎನ್‌ಎಸ್‌) ಮೂಲಕ ಥರ್ಡ್‌ ಪಾರ್ಟಿ ಚಾಟ್‌ಬಾಟ್‌ಗೆ ಕೆಲ ಪ್ರಶ್ನೆಗಳನ್ನು ಕಳಿಸಿ ಉತ್ತರ ಪಡೆಯಿತು.

ಪರೋಕ್ಷವಾಗಿ ಲೈವ್‌ ಇಂಟರ್‌ನೆಟ್‌ನಿಂದ ಮಾಹಿತಿ

ಈ ಮೂಲಕ ನೆಟ್ವರ್ಕ್‌ ನಿರ್ಬಂಧಗಳಲ್ಲಿದ್ದ ಲೋಪಗಳನ್ನು ಗುರುತಿಸಿ, ಅವುಗಳನ್ನು ಬಳಸಿಕೊಂಡು ಪರೋಕ್ಷವಾಗಿ ಲೈವ್‌ ಇಂಟರ್‌ನೆಟ್‌ನಿಂದ (ಗೂಗಲ್/ಸರ್ಚ್‌ ಎಂಜಿನ್‌, ಜಾಲತಾಣ) ಮಾಹಿತಿ ಹೆಕ್ಕಿ ಕೊಟ್ಟಿದೆ. ಆದರೆ ಹೀಗೆ ಮಾಡಲು ಅದಕ್ಕೆ ಅನುಮತಿ ಇರಲಿಲ್ಲ.

ಹೀಗೆ ತನಗೆದುರಾಗುವ ಎಲ್ಲಾ ನಿರ್ಬಂಧಗಳನ್ನು ಮೀರಿ ಎಐ ವರ್ತಿಸತೊಡಗಿದರೆ ಎದುರಾಗಬಹುದಾದ ಆಪತ್ತನ್ನು ತಪ್ಪಿಸುವ ಉದ್ದೇಶದಿಂದ ಓಪನ್‌ಎಐ, ಸಮಸ್ಯೆಗಳು ಬಗೆಹರಿಯುವ ತನಕ ತರಬೇತಿಯನ್ನು ಸ್ಥಗಿತಗೊಳಿಸಿದೆ.

ಇತ್ತೀಚೆಗೆ ಆಸ್ಟ್ರೇಲಿಯಾದ ಸರ್ಕಾರ ವೆಬ್‌ಸೈಟ್‌ ಒಳಗೂ ಓಪನ್‌ಎಐನ ಏಜೆಂಟ್‌ ಅನಧಿಕೃತವಾಗಿ ನುಗ್ಗಿತ್ತು ಹಾಗೂ ಆ ಬಗ್ಗೆ ಅಲ್ಲಿನ ಪ್ರಧಾನಿ ಅಲ್ಬನೀಸ್‌ರ ಆಕ್ರೋಶಕ್ಕೆ ಗುರಿಯಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಸನ್ಯಾಸಿಗಳಿಗೆ ಅವಮಾನ ಮಾಡಿದರೆ ಜೈಲು ಶಿಕ್ಷೆ: ಬಂಗಾಳ ಸಿಎಂ ಎಚ್ಚರಿಕೆ
ಬ್ಯಾಂಕ್ ಗ್ರಾಹಕರಿಗೆ ಗುಡ್‌ನ್ಯೂಸ್: ಇಂದಿನಿಂದ ಆರಂಭವಾಗಬೇಕಿದ್ದ 3 ದಿನಗಳ ಬ್ಯಾಂಕ್ ಮುಷ್ಕರ ಮುಂದೂಡಿಕೆ!