
ನವದೆಹಲಿ(ಆ. 10) ದೆಹಲಿ ಮಹಿಳಾ ಆಯೋಗ ದೆಹಲಿ ಸೈಬರ್ ಸೆಲ್ ಪೊಲೀಸ್ ಕಮಿಷನರ್ ಬಳೀ ವಿವರಣೆ ಕೇಳಿದೆ. ಅಪರಿಚಿತ ವ್ಯಕ್ತಿಗಳು ಆನ್ ಲೈನ್ ಆಪ್ ಒಂದನ್ನು ಸಿದ್ಧಮಾಡಿಕೊಂಡು ಮುಸ್ಲಿಂ ಮಹಿಳೆಯರು ಮಾರಾಟಕ್ಕೆ ಇದ್ದಾರೆ ಎಂದು ಪ್ರಚಾರ ಮಾಡುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಮತ್ತು ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದರು.
ಆಗಸ್ಟ್ 18 ರಂದು ಮಹಿಳಾ ಆಯೋಗದ ಮುಂದೆ ದೆಹಲಿ ಪೊಲೀಸರು ವಿಚಾರಣೆಗೆ ಹಾಜರಾಗಿ ಪ್ರಕರಣದ ತನಿಖೆ ಯಾವ ಹಂತದಲ್ಲಿ ಇದೆ ಎಂಬುದರ ಬಗ್ಗೆ ವಿವರಣೆ ನೀಡಬೇಕಿದೆ.
ವಿಶೇಷ ಸೆಲ್ ನಲ್ಲಿ ಮಹಿಳಾ ಪೇದೆ ಮೇಲೆ ಅತ್ಯಾಚಾರ ಮಾಡಿದ ಇನ್ಸ್ ಪೆಕ್ಟರ್
ಆಗಸ್ಟ್ 2 ರಂದು ದೆಹಲಿ ಪೊಲೀಸ್ ಗೆ ನೋಟಿಸ್ ನೀಡಿದ್ದ ಮಹಿಳಾ ಆಯೋಗ ವಿವರಣೆ ಕೇಳಿತ್ತು. ಇದಕ್ಕೆ ಉತ್ತರ ನೀಡಿದ್ದ ದೆಹಲಿ ಪೊಲೀಸರು ಉತ್ತರ ಪ್ರದೇಶ ಪೊಲೀಸ್ ಇಲಾಖೆ ಯಾವುದೇ ಮಾಹಿತಿ ಕಲೆ ಹಾಕಿಲ್ಲ ಎಂದು ಹೇಳಿತ್ತು.
ಪೊಲೀಸ್ ಇಲಾಖೆ ನಿರ್ಲಜ್ಜತನ ಎದ್ದು ಕಾಣುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ 250 ಕ್ಕೂ ದೂರುಗಳು ಆಯೋಗಕ್ಕೆ ಬಂದಿವೆ. ಹಾಗಾಗಿ ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಮಹಿಳಾ ಆಯೋಗ ದ ಅಧ್ಯಕ್ಷೆ ಸ್ವಾತಿ ಮಲಿವಾಲ್ ತಿಳಿಸಿದ್ದಾರೆ.
ಸುಲ್ಲಿ ಡೀಲ್ಸ್ ಹೆಸರಿನ ಅಪ್ಲಿಕೇಶನ್ ನಲ್ಲಿ ನೂರಾರು ಮಹಿಳೆಯರ ಪೋಟೋ ಅಪ್ ಲೋಡ್ ಮಾಡಲಾಗಿದ್ದು ಸೇಲ್ ಗೆ ಇದ್ದಾರೆ ಎಂದು ಪ್ರಚಾರ ಮಾಡಲಾಗಿತ್ತು. ಗಿಟ್ ಹಬ್ ಎನ್ನುವ ಹಾಸ್ಟಿಂಗ್ ಸರ್ವೀಸ್ ಮೂಲಕ ಕೆಲಸ ಮಾಡುತ್ತಿತ್ತು. ಇದರ ಮೂಲ ಪತ್ತೆ ಮಾಡುವಲ್ಲಿ ದೆಹಲಿ ಪೊಳೀಸರು ನಿರ್ಲಕ್ಷ್ಯ ತಾಳಿದ್ದಾರೆ ಎನ್ನುವುದು ಮಹಿಳಾ ಆಯೋಗದ ಹೇಳಿಕೆ. ನ್ಯಾಶನಲ್ ಸೈಬರ್ ಕ್ರೈಂ ಮಾಹಿತಿ ಕಲೆ ಹಾಕಿ ನೀಡಿದ ನಂತರ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ