
ಪಾಟ್ನಾ(ಜ.08) ಲೋಕಸಭಾ ಚುನಾವಣೆಗೆ ಬಿರುಸಿನ ತಯಾರಿ ನಡೆಯುತ್ತಿದೆ. ಬಿಜೆಪಿ ಹಾಗೂ ಪ್ರಧಾನಿ ಮೋದಿ ಸೋಲಿಸಲು ಪಣತೊಟ್ಟಿರುವ ಇಂಡಿಯಾ ಮೈತ್ರಿ ಪಕ್ಷಗಳು ಹಲವು ಸಭೆ ನಡೆಸಿದೆ. ಇದೀಗ ಸೀಟು ಹಂಚಿಕೆ ವಿಚಾರದಲ್ಲಿ ಒಮ್ಮತ ಮೂಡುತ್ತಿಲ್ಲ. ಆಮ್ ಆದ್ಮಿ ಪಾರ್ಟಿ ಹಾಗೂ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಜೊತೆಗೆ ಕಾಂಗ್ರೆಸ್ ಹಾಗೂ ಜೆಡಿಯು ಜಟಾಪಟಿ ಮುಂದುವರಿದೆ. ಈಗಾಗಲೇ ಇಂಡಿಯಾ ಒಕ್ಕೂಟದಲ್ಲಿ ಕೆಲ ಬಿರುಕು ಮೂಡಿದೆ. ಆದರೆ ಇದೀಗ ಜೆಡಿಯು ಶಾಸಕ ಗೋಪಾಲ್ ಮಂಡಲ್ ನೀಡಿದ ಹೇಳಿಕೆ ಮೈತ್ರಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ಮಲ್ಲಿಕಾರ್ಜುನ ಖರ್ಗೆ ಯಾರು ಅನ್ನೋದೇ ಗೊತ್ತಿಲ್ಲ. ಅವರ ಹೆಸರನ್ನು ಯಾರೂ ಕೇಳೇ ಇಲ್ಲ. ಆದರೆ ನಿತೀಶ್ ಕುಮಾರ್ ಹಾಗಲ್ಲ, ನಿತೀಶ್ ದೇಶಾದ್ಯಂತ ಸಂಚರಿಸಿ ಇಂಡಿಯಾ ಒಕ್ಕೂಟ ಸಂಘಟಿಸಿದ್ದಾರೆ. ನಿತೀಶ್ ಕುಮಾರ್ ಮುಂದಿನ ಪ್ರಧಾನಿ ಎಂದು ಗೋಪಾಲ್ ಮಂಡಲ್ ಹೇಳಿದ್ದಾರೆ.
ಇಂಡಿಯಾ ಒಕ್ಕೂಟದಿಂದ ಮುಂದಿನ ಪ್ರಧಾನಿ ಎಂದಿದ್ದರೆ ಅದು ನಿತೀಶ್ ಕುಮಾರ್ ಮಾತ್ರ. ನಿತೀಶ್ ಹೊರತುಪಡಿಸಿ ಇನ್ಯಾರಿಗೂ ಈ ಅರ್ಹತೆ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಯಾರೆಂದೇ ಗೊತ್ತಿಲ್ಲ. ಖರ್ಗೆ ಹೆಸರನ್ನು ಬಹುತೇಕರು ಕೇಳಿಲ್ಲ. ಆದರೆ ನಿತೀಶ್ ಕುಮಾರ್ ಎಲ್ಲರಿಗೂ ಗೊತ್ತಿದೆ. ಯಾವುದೇ ರಾಜ್ಯಕ್ಕೆ ತೆರಳಿದರೂ ನಿತೀಶ್ ಕುಮಾರ್ ಅಭಿಮಾನಿಗಳಿದ್ದಾರೆ ಎಂದು ಗೋಪಾಲ್ ಮಂಡಲ್ ಹೇಳಿದ್ದಾರೆ.
ಕಾಂಗ್ರೆಸ್‌ಗೆ ಕೈಕೊಟ್ಟ ಜೆಡಿಯು: ಕೈ ಜತೆ ಸೀಟು ಹಂಚಿಕೆ ಇಲ್ಲ: ನಿತೀಶ್ ಸಡ್ಡು
ಸೀಟು ಹಂಚಿಕೆ ಸೂತ್ರ ಮುಂದಿಟ್ಟು ಕಾಂಗ್ರೆಸ್ ಏನು ಮಾಡಲು ಹೊರಟಿದೆ. ಕಾಂಗ್ರೆಸ್ ದೇಶಕ್ಕೆ ದೊಡ್ಡ ಪಕ್ಷವಾಗಿರಬಹುದು. ಆದರೆ ಬಿಹಾರಕ್ಕಲ್ಲ. ಬಿಹಾರದಲ್ಲಿ 40 ಸ್ಥಾನ ಕಾಂಗ್ರೆಸ್‌ಗೆ ನೀಡಿದರೆ ಎಷ್ಟು ಸ್ಥಾನ ಗೆಲ್ಲುತ್ತಾರೆ. ಭಗಲಾಪುರದಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆಲ್ಲುವುದಿಲ್ಲ ಎಂದು ಗೋಪಾಲ್ ಮಂಡಲ್ ಹೇಳಿದ್ದಾರೆ.
ಗೋಪಾಲ್ ಮಂಡಲ್ ಹೇಳಿಕೆಯಿಂದ ಇಂಡಿಯಾ ಮೈತ್ರಿ ಒಕ್ಕೂಟದಲ್ಲಿ ಬಿರುಗಾಳಿ ಎದ್ದಿದೆ. ಇಂಡಿಯಾ ಮೈತ್ರಿಯಿಂದ ನಿತೀಶ್ ಮುನಿಸ್ ಕೊಂಡಿದ್ದಾರೆ. ಸೀಟು ಹಂಚಿಕೆ, ಕಾಂಗ್ರೆಸ್ ನಡೆಯಿಂದ ನಿತೀಶ್ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಅನ್ನೋ ಮಾತುಗಳ ಬೆನ್ನಲ್ಲೇ ಗೋಪಾಲ್ ಮಂಡಲ್ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ.
ಇಂಡಿಯಾ ಮೈತ್ರಿಕೂಟಕ್ಕೆ ಸೀಟಿನ ಬಿಕ್ಕಟ್ಟು: ಸೀಟು ಹಂಚಿಕೆಗೂ ಮುನ್ನವೇ ಶಿವಸೇನೆ, ಟಿಎಂಸಿ ಅಪಸ್ವರ; ಜೆಡಿಯುನಲ್ಲಿ ಒಡಕು
ಮುಂದಿನ 10-15 ದಿನಗಳೊಳಗೆ ಇಂಡಿಯಾ ಮೈತ್ರಿಕೂಟದಲ್ಲಿ ಯಾರು ಯಾವ ಹುದ್ದೆಯನ್ನು ನಿಭಾಯಿಸಲಿದ್ದಾರೆ ಎಂಬುದನ್ನು ಸಭೆಯಲ್ಲಿ ನಿರ್ಣಯ ಮಾಡಿ ಅಂತಿಮಗೊಳಿಸಲಾಗುವುದು ಎಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಗೋಪಾಲ್ ಮಂಡಲ್ ನೀಡಿರುವ ಹೇಳಿಕೆ ಇಂಡಿಯಾ ಒಕ್ಕೂಟವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ