'ಸುಳ್ಳು ಹೇಳಲು ನಾನು ಮೋದಿಯಲ್ಲ, ಸಿಎಎ ಜಾರಿಗೆ ಬ್ರೇಕ್ ಹಾಕ್ತೇನೆ'

By Suvarna NewsFirst Published Mar 19, 2021, 11:05 PM IST
Highlights

ಅಧಿಕಾರಕ್ಕೆ ಬಂದರೆ ಸಿಎಎ ಜಾರಿಗೆ ಬಿಡಲ್ಲ/ ಅಸ್ಸಾಂನಲ್ಲಿ ರಾಹುಲ್ ಗಾಂಧಿ ಘೋಷಣೆ/ ಜನರು ಉದ್ಯೋಗವಿಲ್ಲದೆ ಪರಿತಪಿಸುತ್ತಿದ್ದಾರೆ/ ಟೀ ಪ್ಲಾಂಟೇಶನ್ ಕೆಲಗಾರರ ಕಲ್ಯಾಣಕ್ಕೆ ಹೊಸ ಯೋಜನೆ

ದಿಬ್ರುಘಡ(ಮಾ. 19)   ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ತರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ ಘೋಷಣೆ ಮಾಡಿದ್ದಾರೆ.

ದಿಬ್ರುಗಢ ಜಿಲ್ಲೆಯ ಲಾಹೋವಾಲ್ ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸಿಎಎ ವಿರುದ್ಧ ಅಸ್ಸಾಂನ ವಿಧಾನಸಭೆಯಲ್ಲಿ ಮಸೂದೆ ಮಂಡಿಸಲಾಗುವುದು. ರಾಷ್ಟರ ಮಟ್ಟದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲ ರಾಜ್ಯಗಳ್ಲಿಯೂ ಈ ಕಾಯಿದೆ ಜಾರಿ ಬಂದ್ ಮಾಡುತ್ತೇವೆ ಎಂದು ಹೇಳಿದರು.

ಬಿಜೆಪಿ ಮೊದಲಿನಿಂದಲೂ ಜಾತಿವಿಷ ಇಟ್ಟುಕೊಂಡು ರಾಜಕಾರಣ ಮಾಡುತ್ತಿದೆ. ಇದೆಲ್ಲವನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು. ಅಸ್ಸಾಂ ಟೀ ಕೆಲಸಗಾರರಿಗೆ  365 ರೂ. ನೀಡುತ್ತೇನೆ ಎಂದು ಹೇಳಿದ್ದ  ಮೋದಿ ಕೊಟ್ಟಿದ್ದು  167  ರೂ. , ನಾನು ಸುಳ್ಳು ಹೇಳುವುದಿಲ್ಲ..ಯಾಕೆಂದರೆ ನಾನು ನರೇಂದ್ರ ಮೋದಿ ಅಲ್ಲ ಎಂದು ವ್ಯಂಗ್ಯವಾಡಿದರು.

ಪಂಚರಾಜ್ಯ ಫಲಿತಾಂಶ; ಕಾಂಗ್ರೆಸ್ ಮುಂದಿದೆ ಸವಾಲುಗಳ ಮೂಟೆ

ಸಿಎಎ ವಿರೋಧಿ ರೀತಿಯ ಶರ್ಟ್ ಅನ್ನೇ ಧರಿಸಿ ಗಾಂಧಿ ಭಾಷಣ ಮಾಡಿದರು. ಪ್ರವಾಹದ ಸಂದರ್ಭ ಅಸ್ಸಾಂಗೆ ಏನನ್ನು ಕೊಡದ ನೀವು ಈಗ ಮತ ಕೇಳಲು ಬಂದಿದ್ದೀರಾ ಎಂದು ಪ್ರಶ್ನೆ ಮಾಡಿದರು.

ಪ್ರಜಾಪ್ರಭುತ್ವ ನಾಶವಾಗುತ್ತಿದೆ. ಯುವಜನತೆಗೆ ಉದ್ಯೋಗ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಯುವಕರು ರಾಜಕಾರಣಕ್ಕೆ ಧುಮುಕಬೇಕು. ಉತ್ತಮ ಅಸ್ಸಾಂಗಾಗಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ಟೀ ವರ್ಕ್ರ್ ಗಳ ಕಲ್ಯಾಣಕ್ಕೆ ಕಾಂಗ್ರೆಸ್ ಹೊಸ ಯೋಜನೆಗಳನ್ನು ರೂಪಿಸಲಿದೆ. ನಮ್ಮ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ ಬಂಡವಾಳ ಹರಿದು ಬಂದಿತ್ತು. ಈಗ ಎಲ್ಲವೂ ನಿಂತ ನೀರಾಗಿದೆ ಎಂದು ಬಿಜೆಪಿಯನ್ನು ಟೀಕಿಸಿದರು.

ಅಸ್ಸಾಂನಲ್ಲಿ ಕಾಂಗ್ರೆಸ್ ಸ್ಥಳೀಯ ಆಲ್ ಇಂಡಿಯಾ ಡೆಮಾಕ್ರಟಿಕ್ ಫ್ರಂಟ್ ಜತೆ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡುತ್ತಿದೆ. 126  ಬಲದ ಅಸ್ಸಾಂಗೆ ಮೂರು ಹಂತದಲ್ಲಿ ಮತದಾನ ನಡೆಯಲಿದ್ದು ಮೇ 2  ರಂದು ಫಲಿತಾಂಶ ಬರಲಿದೆ. 

click me!