
ನವದೆಹಲಿ[ಜ.15]: ನಿರ್ಭಯಾ ಅತ್ಯಾಚಾರ ಅಪರಾಧಿಗಳು ಸಲ್ಲಿಸಿದ್ದ ಕ್ಯುರೇಟಿವ್ ಆರ್ಜಿ ವಿಚಾರಣೆ ರದ್ದುಗೊಳಿಸಿದ ಬೆನ್ನಲ್ಲೇ, ನಾಲ್ವರೂ ಜನವರಿ 22ರಂದೇ ಗಲ್ಲಿಗೇರುವುದು ಖಚಿತವಾಗಿತ್ತು. ಆದರೀಗ ಸರ್ಕಾರದ ಪರ ವಕೀಲರು ದೋಷಿಗಳನ್ನು ಅಂದು ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಗೆ ತಿಳಿಸಿದ್ದಾರೆ.
"
ಹೌದು ಡೆತ್ ವಾರಂಟ್ ವಿರುದ್ಧ ದೋಷಿ ಮುಕೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ನಲ್ಲಿ ವಾದ ಮಂಡಿಸಿದ ದೋಷಿ ಪರ ವಕೀಲ 'ತನ್ನ ಕಕ್ಷಿದಾರ ಮುಕೇಶ್ ಕ್ಯುರೇಟಿವ್ ಅರ್ಜಿ ವಜಾಗೊಂಡ ಬೆನ್ನಲ್ಲೇ, ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ. ಒಂದು ವೇಳೆ ಈ ಕ್ಷಮಾದಾನ ಅರ್ಜಿ ತಿರಸ್ಕರಿಸಿದರೂ ದೋಷಿಗಳಿಗೆ 14 ದಿನಗಳ ಸಮಯಾವಕಾಶ ಇರುತ್ತದೆ' ಎಂದು ವಾದಿಸಿದ್ದಾರೆ. ಈ ವೇಳೆ ಸರ್ಕಾರಿ ವಕೀಲರು ಕೂಡಾ ಇದು ಸರಿ, ನಿಯಮಗಳನ್ವಯ ದೋಷಿಗಳಿಗೆ ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡರೂ 14 ದಿನಗಳ ಸಮಯಾವಕಾಶ ಇರುತ್ತದೆ. ಹೀಗಾಗಿ ಏನೇ ಆದರೂ ಜನವರಿ 22 ರಂದು ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ನಿರ್ಭಯಾ ರೇಪಿಸ್ಟ್ ನೇಣಿಗೇರಿಸುವ ಮೇರಠ್‌ನ ಪವನ್ ಸಂಭಾವನೆ?
ನಿರ್ಭಯಾ ಅತ್ಯಾಚಾರಿಗಳು ’ದೋಷಿಗಳಿಗೂ ತಮ್ಮ ಪರ ವಾದಿಸುವ ಹಕ್ಕು ಇದೆ’ ಎಂಬುವುದನ್ನೇ ಬಳಸಿಕೊಂಡು ಕಾನೂನನ್ನು ದುರುಪಯೋಗಪಡಿಸಕೊಳ್ಳುತ್ತಿದ್ದಾರೆ. ಈ ಮೂಲಕ ತಮಗೆ ನೀಡಲಾದ ಗಲ್ಲು ಶಿಕ್ಷೆಯನ್ನು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಮುಂದೂಡುವ ಎಲ್ಲಾ ಯತ್ನಗಳನ್ನು ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ