ಇಡಿ ಖಾತೆಗೆ 17 ಕೋಟಿ ಹಾಕಿದ ನೀಮೋ ಸೋದರಿ ಪೂರ್ವಿ ಮೋದಿ!

Published : Jul 02, 2021, 10:01 AM IST
ಇಡಿ ಖಾತೆಗೆ 17 ಕೋಟಿ ಹಾಕಿದ ನೀಮೋ ಸೋದರಿ ಪೂರ್ವಿ ಮೋದಿ!

ಸಾರಾಂಶ

* ಪಂಜಾಬ್‌ ನ್ಯಾಷ​ನಲ್‌ ಬ್ಯಾಂಕ್‌ಗೆ 13,500 ಕೋಟಿ ರು. ವಂಚನೆ * ವಂಚನೆ ಎಸ​ಗಿದ ಪ್ರಕ​ರ​ಣ​ದಲ್ಲಿ ಮಾಫಿ ಸಾಕ್ಷಿ​ಯಾ​ಗಲು ಒಪ್ಪಿದ ವಜ್ರೋ​ದ್ಯಮಿ ನೀರವ್‌ ಮೋದಿ * ಇಡಿ ಖಾತೆಗೆ 17 ಕೋಟಿ ಹಾಕಿದ ನೀಮೋ ಸೋದರಿ ಪೂರ್ವಿ ಮೋದಿ!

ನವ​ದೆ​ಹ​ಲಿ(ಜು.02): ಪಂಜಾಬ್‌ ನ್ಯಾಷ​ನಲ್‌ ಬ್ಯಾಂಕ್‌ಗೆ 13,500 ಕೋಟಿ ರು. ವಂಚನೆ ಎಸ​ಗಿದ ಪ್ರಕ​ರ​ಣ​ದಲ್ಲಿ ಮಾಫಿ ಸಾಕ್ಷಿ​ಯಾ​ಗಲು ಒಪ್ಪಿದ ವಜ್ರೋ​ದ್ಯಮಿ ನೀರವ್‌ ಮೋದಿ ಸೋದರಿ ಪೂರ್ವಿ ಮೋದಿ ಅವರು ತನಿಖಾ ಸಂಸ್ಥೆ​ಯಾದ ಜಾರಿ ನಿರ್ದೇ​ಶ​ನಾ​ಲ​ಯ(ಇ.ಡಿ)ಕ್ಕೆ ಒಟ್ಟಾರೆ 17.25 ಕೋಟಿ ರು. ಸಂದಾಯ ಮಾಡಿ​ದ್ದಾರೆ ಎಂದು ತಿಳಿ​ದು​ಬಂದಿದೆ.

ಪಿಎ​ನ್‌​ಬಿ​ಗೆ ಬಹು​ಕೋಟಿ ವಂಚನೆ ಎಸ​ಗಿದ ನೀರವ್‌ ಮೋದಿ ವಿರು​ದ್ಧದ ತನಿ​ಖೆಗೆ ಸಹ​ಕ​ರಿ​ಸು​ವು​ದಾಗಿ ಇ.ಡಿ​ಗೆ ಭರ​ವಸೆ ನೀಡಿದ ಹಿನ್ನೆ​ಲೆ​ಯಲ್ಲಿ ತನಿಖಾ ಸಂಸ್ಥೆಯು ಪೂರ್ವಿ ಮತ್ತು ಅವರ ಪತಿ ಮಯಾಂಕ್‌ ಮೆಹ್ತಾ ಅವ​ರಿಗೆ ಕ್ಷಮಾ​ಪಣೆ ನೀಡಿತ್ತು.

ಈ ಬಗ್ಗೆ ಗುರು​ವಾರ ಮಾಹಿತಿ ನೀಡಿದ ಇ.ಡಿ, ‘ತಮ್ಮ ಸೋದರ ನೀರವ್‌ ಮೋದಿ ಪರ​ವಾಗಿ ಲಂಡ​ನ್‌​ನ​ಲ್ಲಿ​ರುವ ಬ್ಯಾಂಕ್‌​ವೊಂದ​ರಲ್ಲಿ ತನ್ನ ಹೆಸ​ರಿ​ನಲ್ಲಿ ಖಾತೆ ತೆರೆ​ಯ​ಲಾ​ಗಿತ್ತು. ಆದರೆ ಖಾತೆ​ಯ​ಲ್ಲಿದ್ದ ಹಣವು ತನಗೆ ಸೇರಿ​ದ್ದಲ್ಲ. ಜೊತೆಗೆ ತನಿ​ಖೆಗೆ ಪೂರ್ತಿ ಸಹ​ಕಾರ ನೀಡು​ವು​ದಾಗಿ ಹೇಳಿದ ಹಿನ್ನೆ​ಲೆ​ಯಲ್ಲಿ ತನ್ನ ಹೆಸ​ರಿ​ನ​ಲ್ಲಿದ್ದ ಹಣ​ವನ್ನು ಪೂರ್ವಿ ಮೋದಿ ಭಾರತ ಸರ್ಕಾ​ರದ ಇ.ಡಿ ಖಾತೆಗೆ ರವಾ​ನಿ​ಸಿ​ದ್ದಾಳೆ’ ಎಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮಮತಾ ನಿರ್ಮಿಸಿದ್ದ ಫುಟ್ಬಾಲ್‌ ಪ್ರತಿಮೆ ಸುವೇಂದು ಸರ್ಕಾರದಿಂದ ಧ್ವಂಸ, ಕಾರಣವೇನು ಗೊತ್ತಾ?
ಸಣ್ಣ ಜಾಗ ಸಿಕ್ರೂ ಬಟ್ಟೆ ಒಣಗಿಸೋ ಭಾರತ; ಮನೆ ಮುಂದೆ ಅಪ್ಪಿ ತಪ್ಪಿ ಬಟ್ಟೆ ಹಾಕದ ಅಮೆರಿಕ! ಯಾಕೆ?