ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌ನಲ್ಲಿ ಕೊರೋನಾ ಸೋಂಕು ಹೆಚ್ಚಳಗೊಂಡ ಬೆನ್ನಲ್ಲೇ ಕರ್ಫ್ಯೂ ಗೋಷಿಸಿದ ಮತ್ತೊಂದು ರಾಜ್ಯ| ಎರಡನೇ ಕೊರೋನಾ ಅಲೆ ಭೀತಿ ಹಿನ್ನೆಲೆ, ಇಂತಹ ನಿರ್ಧಾರ ಪ್ರಕಟ
ಚಂಡೀಗಢ(ನ.26): ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌ನಲ್ಲಿ ಕೊರೋನಾ ಸೋಂಕು ಹೆಚ್ಚಳಗೊಂಡು 2ನೇ ಅಲೆಯ ಭೀತಿ ಮೂಡಿಸಿರುವ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರ ರಾಜ್ಯಾದ್ಯಂತ ಡಿ. 1ರಿಂದ ರಾತ್ರಿ ಕರ್ಫ್ಯೂ ಹೇರಲು ನಿರ್ಧರಿಸಿದೆ. ಅಲ್ಲದೇ ಮಾಸ್ಕ್ ಧರಿಸದವರಿಗೆ ವಿಧಿಸುತ್ತಿದ್ದ ದಂಡವನ್ನು 500 ರಿಂದ 1000ರೂಪಾಯಿಗೇರಿಸಲು ನಿರ್ಧರಿಸಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದವರಿಗೆ ಪಂದು ಸಾವಿರ ರೂಪಾಯಿ ದಂಡ ವಿಧಿಸಲು ನಿರ್ಧರಿಸಿದೆ.
ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶದ ಕೆಲವು ನಗರಗಳಲ್ಲಿ ಕಳೆದ ವಾರದಿಂದ ರಾತ್ರಿ ಕರ್ಫ್ಯೂ ಸೇರಿದಂತೆ ಹಲವು ನಿಯಂತ್ರಣ ಕ್ರಮಗಳನ್ನು ಘೋಷಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಕ್ಯಾ. ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಂತಹುದ್ದೇ ಕ್ರಮಗಳನ್ನು ಪ್ರಕಟಿಸಿದೆ.
ಏನೇನು ಕ್ರಮಗಳು?: ಎಲ್ಲಾ ನಗರ ಮತ್ತು ಪಟ್ಟಣಗಳಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ ಐದು ಗಂಟೆಯವರೆಗೆ ಕರ್ಫ್ಯೂ ಜಾರಿ. ಹೋಟೆಲ್, ೆಸ್ಟೋರೆಂಟ್, ವಿವಾಹ ಕಾರ್ಯಕ್ರಮಗಳು ರಾತ್ರಿ 09.30 ಕ್ಕೆ ಬಂದ್. ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಹೆಚ್ಚಿನ ಹಾಸಿಗೆ ಮೀಸಲಿಡಬೇಕು. ಸೂಪರ್ ಸ್ಪ್‌ರೆಡರ್‌ಗಳಿಗೆ ಆಗಾಗ್ಗೆ ಪರೀಕ್ಷೆ.