ಅರ್ಜಿಯಲ್ಲಿ ಉಲ್ಲೇಖಿಸಿದ ಆಡಿಯೋ ಸುಳ್ಳು, ಸಮೀರ್ ವಾಂಖೆಡೆ ವಿರುದ್ದ NCB ಕಾನೂನು ಸಲಹೆಗಾರ ದೂರು!

By Suvarna News  |  First Published Oct 17, 2023, 12:34 PM IST

NCB ನಿವೃತ್ತ ಅಧಿಕಾರಿ ಸಮೀರ್ ವಾಂಖೆಡೆ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಡ್ರಗ್ಸ್ ಪ್ರಕರಣ ಸಂಬಂಧ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧಿಸಿದ ಸಮೀರ್ ವಾಂಖೆಡೆ ಇದೀಗ ಅಮಾನತ್ತು ಶಿಕ್ಷೆ ಮಾತ್ರಲ್ಲ, ಕೋರ್ಟ್ ಮಧ್ಯಂತರ ರಕ್ಷಣೆಯಲ್ಲಿದ್ದಾರೆ. ಇದೀಗ ಸಮೀರ್ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ದಾಖಲಾಗಿದೆ.


ಮುಂಬೈ(ಅ.17) ದೇಶದಲ್ಲಿ ಭಾರಿ ಕೋಲಾಹಲ ಎಬ್ಬಿಸಿದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ಹಲವು ತಿರವುಗಳನ್ನು ಪಡೆದುಕೊಂಡಿದೆ. ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲೆ ದಾಳಿ ನಡೆಸಿದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕಾರಿ ಸಮೀರ್ ವಾಂಖೆಡೆ, ಆರ್ಯನ್ ಖಾನ್ ಸೇರಿದಂತೆ ಕೆಲ ಸ್ಟಾರ್ ನಟ ನಟಿಯರ ಮಕ್ಕಳನ್ನು ಆರೆಸ್ಟ್ ಮಾಡಿದ್ದರು. ಬಳಿಕ ಈ ಪ್ರಕರಣ ಸಮೀರ್ ವಾಂಖೆಡೆ ಕೊರಳಿಗೆ ಸುತ್ತಿಕೊಂಡಿದೆ. ಆರ್ಯನ್ ಖಾನ್ ವಿರುದ್ಧ ಸುಳ್ಳು ಕೇಸ್, ಪ್ರಕರಣದಿಂದ ಖುಲಾಸೆ ಮಾಡಲು 25 ಕೋಟಿ ರೂ ಲಂಚ ಸೇರಿದಂತೆ ಹಲವು ದೂರುಗಳು ಸಮೀರ್ ವಾಂಖೆಡೆ ವಿರುದ್ಧ ದಾಖಲಾಗಿದೆ. ಇದೀಗ ಸಮೀರ್ ವಾಂಖೆಡೆ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. NCB ಕಾನೂನು ಸಲಹೆಗಾರ ಜಪಾನ್ ಬಾಬು ವಾಂಖೆಡೆ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

NCB ಮುಂಬೈ ವಲಯ ನಿರ್ದೇಶಕರಾಗಿದ್ದ ಸಮೀರ್ ವಾಂಖೆಡೆ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಜಪಾನ್ ಬಾಬು ಜೊತೆಗೆ ಮಾತನಾಡಿರುವ ಆಡಿಯೋ ಕುರಿತು ಉಲ್ಲೇಖಿಸಿದ್ದರು. ಈ ಅರ್ಜಿಯಲ್ಲಿ, ಜೂನ್ 2, 2022ರಂದು ಆರ್ಯನ್ ಕೇಸ್ ಸಂಬಂಧ ಕಾನೂನು ಸಲಹೆಗಾರ ಜಪಾನ್ ಬಾಬು ಜೊತೆ ಮಾತನಾಡಿದ್ದು, ಚಾರ್ಜ್‌ಶೀಟ್‌ನಲ್ಲಿ ಆರ್ಯನ್ ಖಾನ್ ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದರು.  ಈ ಕುರಿತು ನನ್ನ(ಕಾನೂನು ಸಲಹೆಗಾರ) ಜೊತೆ ಮಾತುಕತೆ ನಡೆಸಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಅರ್ಜಿಯಲ್ಲಿ ವಾಂಖೆಡೆ ತಿಳಿಸಿದ್ದಾರೆ. ವಾಂಖೆಡೆ ಅರ್ಜಿಯಲ್ಲಿ ದಾಖಲಿಸಿರುವುದು  ಸಂಪೂರ್ಣ ಸುಳ್ಳು ಹಾಗೂ ವಾಂಖೆಡೆ ಕಪೋಕಲ್ಪಿತ ಆರೋಪಗಳಾಗಿವೆ ಎಂದು ಜಪಾನ್ ಬಾಬು ದೂರಿನಲ್ಲಿ ಹೇಳಿದ್ದಾರೆ.

Latest Videos

undefined

ಶಾರುಖ್​ಗೆ ಚಾಟಿ ಬೀಸಿದ್ದ ಎನ್​ಸಿಬಿ ಅಧಿಕಾರಿ ವಾಂಖೆಡೆಗೆ ಜಯ! ಜವಾನ್​ ರಿಲೀಸ್​ ಬೆನ್ನಲ್ಲೇ ಕ್ಲೀನ್​ ಚಿಟ್​

ಆರೋಪಿ ವಾಂಖೆಡೆ ನೀಡಿದ ಹೇಳಿಕೆಗೆ ಯಾವುದೇ ದಾಖಲೆ ಇಲ್ಲ. ವಾಂಖೆಡ ಆರೋಪ ನಿರಾಧಾರವಾಗಿದೆ. ವಾಂಖೆಡೆ ಉಲ್ಲೇಖಿಸಿರುವಂತೆ ಡ್ರಗ್ಸ್ ಪ್ರಕರಣ ಸಂಬಂಧ ಚಾರ್ಜ್‌ಶೀಟನ್ನು NCB ಕಾನೂನು ಉಪ ಸಲಹೆಗಾರ ಸಿದ್ಧಪಡಿಸಿಲ್ಲ. ವಾಂಖೆಡೆ ಉಲ್ಲೇಖಿಸಿರುವ ಯಾವುದೇ ಸಂಭಾಷಣೆ ನಡೆದಿಲ್ಲ. ತಾನೊಬ್ಬ ಪ್ರಮಾಣಿಕ ಅಧಿಕಾರಿ ಅನ್ನೋ ಕಾರಣಕ್ಕೆ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಉದ್ದೇಶವನ್ನು ವಾಂಖೆಡೆ ಹೊಂದಿದ್ದರು ಎಂದು ಜಪಾನ್ ಬಾಬು ದೂರಿನಲ್ಲಿ ಹೇಳಿದ್ದಾರೆ.
 
ಡ್ರಗ್ರ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್‌ನನ್ನು ಖುಲಾಸೆ ಮಾಡಲು 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಆರೋಪದಲ್ಲಿ ಮುಂಬೈನ ಎನ್‌ಸಿಬಿ ದಳದ ಮಾಜಿ ಮುಖ್ಯಸ್ಥ ಸಮೀರ್‌ ವಾಂಖೇಡೆಯನ್ನು ಈಗಾಗಲೇ ಸಿಸಿಬಿ ವಿಚಾರಣೆ ನಡೆಸಿದೆ.  

ಬೆಂಕಿಯನ್ನೇ ನೆಕ್ಕಿದವ ನಾನು, ಇನ್ನು... ಶಾರುಖ್​ಗೆ ಮಾತಿನಿಂದ ತಿವಿದ ಎನ್​ಸಿಬಿ ಅಧಿಕಾರಿ ವಾಂಖೆಡೆ

ಕರಣದಲ್ಲಿ 2021ರಲ್ಲಿ ಆರ್ಯನ್‌ರನ್ನು ಸಿಬಿಐ ಬಂಧಿಸಿತ್ತು. ಆದರೆ ಆರ್ಯನ್‌ ವಿರುದ್ಧ ಆರೋಪ ಸಾಬೀತು ಪಡಿಸಲು ಅಧಿಕಾರಿಗಳು ವಿಫಲವಾದ ಕಾರಣ 3 ವಾರಗಳ ಬಳಿಕ ಆರ್ಯನ್‌ಗೆ ಕೋರ್ಚ್‌ ಜಾಮೀನು ನೀಡಿತ್ತು. ಆದರೆ ಆರ್ಯನ್‌ ಬಂಧನದ ವೇಳೆ ಆತನನನ್ನು ಖುಲಾಸೆ ಮಾಡಲು 25 ಕೋಟಿ ರು. ಲಂಚ ಕೇಳಿದ್ದರು ಎಂಬ ಆರೋಪದ ಮೇಲೆ ವಾಂಖೆಡೆ ಸೇರಿ ನಾಲ್ವರ ಮೇಲೆ ಸಿಬಿಐ ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಸುತ್ತಿದೆ. ಮಗನ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಂತೆ ನಟ ಶಾರುಖ್‌ ವಾಂಖೇಡೆ ಬಳಿ ಕೇಳಿಕೊಂಡಿದ್ದ ವಾಟ್ಸಾಪ್‌ ಸಂವಹನ ನಡೆಸಿದ್ದು ಇತ್ತೀಚೆಗೆ ಬೆಳಕಿಗೆ ಬಂದಿತ್ತು.

click me!