ಅಮೆರಿಕ ಡೀಲ್‌ ವಿರುದ್ಧ ಫೆ.12ಕ್ಕೆ ದೇಶವ್ಯಾಪಿ ರೈತ ಪ್ರತಿಭಟನೆ

Kannadaprabha News   | Kannada Prabha
Published : Feb 09, 2026, 05:46 AM IST
Farmers and Workers Unite for Nationwide Strike on February 12

ಸಾರಾಂಶ

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದಕ್ಕೆ ಸಂಯುಕ್ತ ಕಿಸಾನ್‌ ಮೋರ್ಚಾ ಸೇರಿ ಹಲವು ಸಂಘಟನೆಗಳು ಕಿಡಿಕಾರಿದ್ದು, ಫೆ.12ರಂದು ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿವೆ. ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಕೃತಿ ದಹಿಸಲು ನಿರ್ಧರಿಸಿವೆ.

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದಕ್ಕೆ ಸಂಯುಕ್ತ ಕಿಸಾನ್‌ ಮೋರ್ಚಾ ಸೇರಿ ಹಲವು ಸಂಘಟನೆಗಳು ಕಿಡಿಕಾರಿದ್ದು, ಫೆ.12ರಂದು ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿವೆ. ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಕೃತಿ ದಹಿಸಲು ನಿರ್ಧರಿಸಿವೆ.

ರೈತರ ಹಿತರಕ್ಷಣೆ ಮಾಡಲಿದ್ದೇವೆ ಎಂದು ಭರವಸೆ

‘ಭಾರತ ಸರ್ಕಾರವು ರೈತರ ಹಿತರಕ್ಷಣೆ ಮಾಡಲಿದ್ದೇವೆ ಎಂದು ಭರವಸೆ ಕೊಟ್ಟಿದೆ. ಆದರೆ, ಒಪ್ಪಂದವು ಅಮೆರಿಕದ ಕೃಷಿ ಕ್ಷೇತ್ರಕ್ಕೆ ನಮ್ಮ ಮಾರುಕಟ್ಟೆಯನ್ನು ಮುಕ್ತ ಮಾಡಿದೆ. ಅಮೆರಿಕದ ಒತ್ತಡಕ್ಕೆ ಸರ್ಕಾರ ಶರಣಾಗಿದೆ. ಹೀಗಾಗಿ ಫೆ.12ರಂದು ನಡೆವ ಪ್ರತಿಭಟನೆಗೆ ಬೆಂಬಲ ನೀಡಲಿದ್ದೇವೆ. ಜೊತೆಗೆ ಪ್ರತ್ಯೇಕ ಪ್ರತಿಭಟನೆಗೂ ದಿನಾಂಕ ನಿಗದಿಪಡಿಸಲಿದ್ದೇವೆ’ ಎಂದು ಮೋರ್ಚಾ ಹೇಳಿದೆ.

ಭಾರತ ಮತ್ತು ಅಮೆರಿಕ ನಡುವಿನ ಬಹುನಿರೀಕ್ಷಿತ ಮಧ್ಯಂತರ ವ್ಯಾಪಾರ ಒಪ್ಪಂದ

ಭಾರತ ಮತ್ತು ಅಮೆರಿಕ ನಡುವಿನ ಬಹುನಿರೀಕ್ಷಿತ ಮಧ್ಯಂತರ ವ್ಯಾಪಾರ ಒಪ್ಪಂದದ ಅಂತಿಮ ಸ್ವರೂಪ (ಫ್ರೇಮ್‌ ವರ್ಕ್‌) ವನ್ನು ಶನಿವಾರ ಬಿಡುಗಡೆ ಮಾಡಲಾಗಿದೆ. ಅದರಂತೆ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಸದ್ಯ ವಿಧಿಸಲಾಗುತ್ತಿರುವ ಶೇ.50ರಷ್ಟು ತೆರಿಗೆಯನ್ನು ಅಮೆರಿಕವು ಶೇ.18ಕ್ಕಿಳಿಸಿದರೆ, ಅಮೆರಿಕದ ಆಹಾರ, ಯಂತ್ರೋಪಕರಣಗಳು, ಕೃಷಿ ಉತ್ಪನ್ನಗಳು ಸೇರಿ ಹಲವು ಉತ್ಪನ್ನಗಳ ಆಮದಿನ ಮೇಲಿನ ತೆರಿಗೆಯನ್ನು ಭಾರತವು ಸಂಪೂರ್ಣ ಕಡಿತ ಅಥವಾ ಕಡಿಮೆ ಮಾಡಲಿದೆ. ಜೊತೆಗೆ ಕೆಲವೊಂದು ಡೈರಿ ಮತ್ತು ಕೃಷಿ ವಲಯದ ಉತ್ಪನ್ನ ಹೊರತುಪಡಿಸಿದರೆ, ದೇಶದ ಕೃಷಿ ಮತ್ತು ಡೈರಿ ವಲಯವನ್ನು ಅಮೆರಿಕ ವಸ್ತುಗಳ ಪ್ರವೇಶದಿಂದ ದೂರವೇ ಇಡಲಾಗಿದೆ. ಈ ಮೂಲಕ ದೇಶದ ರೈತರ ಹಿತ ಕಾಯಲಾಗಿದೆ,

ಈ ಒಪ್ಪಂದದ ಪರಿಣಾಮ ಭಾರತಕ್ಕೆ 30 ಲಕ್ಷ ಕೋಟಿ ಡಾಲರ್‌ ಮೌಲ್ಯದ (2700 ಲಕ್ಷ ಕೋಟಿ ರು.) ಅಮೆರಿಕ ಮಾರುಕಟ್ಟೆ ತೆರೆದುಕೊಂಡರೆ, ಅಮೆರಿಕದಿಂದ ಭಾರತವು 45 ಲಕ್ಷ ಕೋಟಿ ರು.ಮೌಲ್ಯದ ವಸ್ತುಗಳನ್ನು ಖರೀದಿಸುವ ಭರವಸೆ ನೀಡಿದೆ. ಭಾರತದ ಕೃಷಿ ಕ್ಷೇತ್ರವನ್ನು ಈ ಒಪ್ಪಂದದಿಂದ ಹೊರಗಿಟ್ಟು ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಭಾರತದ ವಸ್ತುಗಳ ಮೇಲಿನ ತೆರಿಗೆ ಕಡಿತ ಫೆ.7ರಿಂದಲೇ ಅನುಷ್ಠಾನಕ್ಕೆ ಬರುವಂತೆ ಅಮೆರಿಕದ ಅಧ್ಯಕ್ಷರ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಂಘ ಹೇಳಿದರೆ ಸ್ಥಾನ ಬಿಟ್ಟ ಬಿಡುವೆ : ಮೋಹನ್‌ ಭಾಗ್ವತ್‌
ಭಯೋತ್ಪಾದನೆ ವಿಷಯದಲ್ಲಿ ರಾಜಿ ಇಲ್ಲ : ಮೋದಿ