
ಮುಂಬೈ (ಅ. 23): ಕ್ರಿಕೆಟ್‌ನಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಅವರ ಫ್ಯಾನ್ ಆಗಿರುವ ನೀವು ನಿಮ್ಮ ಗೂಗಲ್ ಸಚ್‌ರ್‍ನಲ್ಲಿ ಧೋನಿ ಕುರಿತಾಗಿ ಅತಿಹೆಚ್ಚು ಬಾರಿ ಶೋಧ ನಡೆಸುತ್ತಿರುವಿರಾದರೆ, ಇನ್ನು ಮುಂದಿನ ದಿನಗಳಲ್ಲಿ ಜಾಗ್ರತೆಯಿಂದ ಇರುವುದು ಒಳಿತು.
ಹೌದು, ಯಾಕೆಂದರೆ, ಆನ್‌ಲೈನ್‌ನಲ್ಲಿ ಸೆಳೆಯುವ ಧೋನಿ ಕುರಿತಾದ ಕುತೂಹಲಕಾರಿ ಅಂಶಗಳು ನಿಮ್ಮನ್ನು ವೈರಸ್ ವೆಬ್‌ಸೈಟ್‌ಗಳಿಗೆ ಸಂಪರ್ಕ ಕಲ್ಪಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಆ್ಯಂಟಿ ವೈರಸ್ ಸೇವೆ ನೀಡುವ ಮೆಕಾಫಿ ಸಂಸ್ಥೆ ಹೇಳಿದೆ.
ತವರಿನಲ್ಲಿ ಗೆಲುವಿನ ಖಾತೆ ತೆರೆದ ಜೆಮ್ ಶೆಡ್ ಪುರ್ FC!
ಅಲ್ಲದೆ, ಭಾರತೀಯ ಜನರ ಮೊಬೈಲ್ ಮತ್ತು ಕಂಪ್ಯೂಟರ್‌ಗಳಿಗೆ ವೈರಸ್ ನುಸುಳಿಸಲು ಬಾಲಿವುಡ್ ನಟಿಯರಾದ ರಾಧಿಕಾ ಆಪ್ಟೆ, ಶ್ರದ್ಧಾ ಕಪೂರ್, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧೂ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಹೆಸರುಗಳ ಬಳಕೆಯಾಗುತ್ತಿವೆ ಎಂದು ಮೆಕಾಫೀ ಸಿದ್ಧಪಡಿಸಿದ ಪಟ್ಟಿಯಲ್ಲಿ ವಿವರಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕ ಮೂಲದ ಜಾಗತಿಕ ಮಟ್ಟದ ಕಂಪ್ಯೂಟರ್ ಸೆಕ್ಯೂರಿಟಿ ಸಾಫ್ಟ್‌ವೇರ್ ಕಂಪನಿಯಾದ ಮೆಕಾಫೀಯ ಭಾರತದ ವ್ಯವಸ್ಥಾಪಕ ನಿರ್ದೇಶಕ ವೆಂಕಟ್ ಕೃಷ್ಣಪುರ, ‘ಪೈರೇಟೆಡ್ ವೆಬ್‌ಸೈಟ್‌ಗೆ ವಿಸಿಟ್ ಮಾಡಿದರೆ, ತಮ್ಮ ಕಂಪ್ಯೂಟರ್‌ಗೆ ವೈರಸ್ ನುಸುಳುತ್ತವೆ ಎಂಬ ಅರಿವಿದ್ದಾಗ್ಯೂ, ನೆಟ್ಟಿಗರು, ತಮ್ಮ ಫೇವರಿಟ್ ಟೀವಿ ಶೋಗಳು, ಸಿನಿಮಾಗಳು, ಕ್ರೀಡೆ ಮತ್ತು ಮನೋರಂಜನೆ ಕಾರ್ಯಕ್ರಮಗಳು, ತಮ್ಮ ನೆಚ್ಚಿನ ಸ್ಟಾರ್‌ಗಳ ಫೋಟೋಗಳು ಮತ್ತು ವಿಡಿಯೋಗಳನ್ನು ಪೈರೇಟೆಡ್ ವೆಬ್‌ಸೈಟ್‌ನಲ್ಲಿ ನೋಡಲು ಇಚ್ಚಿಸುತ್ತಾರೆ. ಹೀಗಾಗಿಯೇ ವೈರಸ್ ಹೊಂದಿದ ವೆಬ್‌ಸೈಟ್‌ಗಳು ಜನ ಸಾಮಾನ್ಯರನ್ನು ಸೆಳೆಯಲು ಜನಪ್ರಿಯ ಕ್ರೀಡಾಪಟುಗಳು, ಚಿತ್ರ ನಟ-ನಟಿಯರ ಫೋಟೋಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ