Sangita Video: ಭಯಾನಕ ಘಟನೆಗೆ ಬಿಗ್‌ ಟ್ವಿಸ್ಟ್ ಕೊಟ್ಟ ತಾಯಿಯ ಕೊನೆಯ ವಿಡಿಯೋ; ರಿವೀಲ್ ಆಯ್ತು ಶಾಕಿಂಗ್ ವಿಚಾರಗಳು!

Published : Aug 23, 2026, 05:20 PM IST
Sangita Video

ಸಾರಾಂಶ

ಮಹಾರಾಷ್ಟ್ರದಲ್ಲಿ ಐಫೋನ್ ಇಎಂಐಗಾಗಿ ನಡೆದ ವಾಗ್ವಾದದಲ್ಲಿ ಒಂದೇ ಕುಟುಂಬದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯಲ್ಲಿ ಮೃತಪಟ್ಟ ತಾಯಿ ಸಂಗೀತಾ, ಯೂಟ್ಯೂಬರ್ ಆಗಿದ್ದು, ಸಾವಿಗೂ ಮುನ್ನ ಅವರು ಪೋಸ್ಟ್ ಮಾಡಿದ್ದ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಸಂಬಂಧಗಳ ಮೌಲ್ಯದ ಬಗ್ಗೆ ಮಾತನಾಡಿದ್ದು, ಇಡೀ ಘಟನೆಗೆ ಹೊಸ ತಿರುವು ನೀಡಿದೆ.

ಐಫೋನ್ ಮೇಲಿನ ಮೋಹ ಒಂದ ಇಡೀ ಕುಟುಂಬವನ್ನು ಹೇಗೆ ನಾಶ ಮಾಡಿದೆ ಅಂತ ಈಗಾಗಲೇ ನಿಮಗೆ ತಿಳಿದಿರುತ್ತದೆ. ಮಹಾರಾಷ್ಟ್ರದ ಛತ್ರಪತಿ ಶಂಭಾಜಿನಗರ ಜಿಲ್ಲೆಯ ದೇವಲಾಯ್ ಪ್ರದೇಶದಲ್ಲಿ ನಡೆದ ಭಯಾನಕ ಘಟನೆ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ನಡುವೆಯೇ ಘಟನೆಯಲ್ಲಿ ಬಲಿಯಾದ ಯುವಕನ ತಾಯಿ, ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ ಒಂದು ಈಗ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ಇಡೀ ಘಟನೆಗೆ ಬಿಗ್ ಟ್ವಿಸ್ಟ್ ನೀಡಿದ್ದು, ನೆಟ್ಟಿಗರು ಈ ಬಗ್ಗೆ ತಮ್ಮದೇ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಏನಿದು ಘಟನೆ?

ಮಹಾರಾಷ್ಟ್ರದ 18 ವರ್ಷದ ಕುನಾಲ್ ತನ್ನ ಹೊಸ ಐಫೋನ್ ಇಎಂಐಗಳ ಬಗ್ಗೆ ಪೋಷಕರೊಂದಿಗೆ ವಾದ ಮಾಡಿ ಬೆಟ್ಟ ಹತ್ತಿದ್ದ. ಪೊಲೀಸರ ಮಾಹಿತಿಯ ಅನ್ವಯ ಆತ, ಐಫೋನ್ ಇಎಂಐ ಪಾವತಿ ಮಾಡಲು ಆತ ಪೋಷಕರಿಗೆ ಒತ್ತಾಯ ಮಾಡುತ್ತಿದ್ದ. ಇದರ ಬಗ್ಗೆ ತಿಳಿದು ಆತನ ತಂದೆ ಕೂಡ ಬೆಟ್ಟಡ ಬಳಿಗೆ ಆಗಮಿಸಿದ್ದರು. ಆದರೆ ಸತತವಾಗಿ ಮನವೊಲಿಕೆ ಮಾಡಿದರೂ ಆತನ ಕೇಳಿರಲಿಲ್ಲ. ಇದರೊಂದಿಗೆ ತಂದೆಯೇ ಮುನ್ನುಗ್ಗಿ ಆತನನ್ನು ಎಳೆದುಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಕೆಲ ಕ್ಷಣಗಳಲ್ಲಿಯೇ ಅಲ್ಲಿ ನಡೆಬಾರದ ಘಟನೆ ನಡೆದು, ಮೂವರು ಜೀವ ಕಳೆದುಕೊಂಡಿದ್ದರು.

ತಾಯಿಯ ಕೊನೆಯ ವಿಡಿಯೋ: ಐಫೋನ್ ದುರಂತದ ಹಿಂದಿನ ರಹಸ್ಯ?

ಘಟನೆ ಬಳಿಕ ಕುನಾಲ್ ತಾಯಿ ಸಂಗೀತಾ ಮತ್ತು 48 ವರ್ಷದ ತಂದೆ ಮುರಳೀಧರ್ ಚಂದಗುಡೆ ಅವರ ಕುಟುಂಬದ ಕುರಿತು ಹಲವು ಮಾಹಿತಿಗಳು ರಿವೀಲ್ ಆಗುತ್ತಿದೆ. ಮೃತ ಸಂಗೀತಾ ಅವರು ಒಂದು ಸ್ವತಃ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಇದರಲ್ಲಿ ಅವರಿಗೆ ಸಾವಿರಾರು ಮಂದಿ ಫಾಲೋವರ್‌ಗಳು ಇದ್ದರೆ. ಈ ಘಟನೆ ನಡೆಯುವ ಕೆಲವೇ ದಿನಗಳ ಹಿಂದೆ ಸಂಗೀತಾ ಅವರು ಪೋಸ್ಟ್ ಮಾಡಿದ್ದ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಸಂಗೀತಾ ಅವರು ಸಂಬಂಧಗಳ ಮೌಲ್ಯಗಳನ್ನು ತಿಳಿಸುತ್ತಾ, 'ಪ್ರೀತಿಗೆ ಬೆಲೆ ಕೊಡದ ವ್ಯಕ್ತಿಗೆ ಏನೂ ಮಾಡಿದರು ಅರ್ಥವಿಲ್ಲ, ಅಂತಹ ಸಂಬಂಧಳನ್ನು ಕಡಿದುಕೊಳ್ಳುವುದು ಉತ್ತಮ' ಎಂದು ತಿಳಿಸಿದ್ದರು.

ಮರಾಠಿಯಲ್ಲಿ ಮಾತನಾಡಿರುವ ಸಂಗೀತಾ ಅವರು, ನಿಮ್ಮಗೆ ಬೆಲೆ ಕೊಡುವ, ನಿಮ್ಮನ್ನು ಗೌರವಿಸುವ, ನಿಮ್ಮ ಪ್ರೀತಿಯನ್ನು ತಿಳಿದುಕೊಳ್ಳುವ ವ್ಯಕ್ತಿಗೆ ನಿಮ್ಮ ಅದೃಷ್ಟವನ್ನು ನೀಡಿ. ಆದರೆ ನಿಮ್ಮ ಪ್ರೀತಿಗೆ ಗೌರವ ನೀಡಿದಿದ್ದರೆ, ನೀವು ಅವರಿಗಾಗಿ ಏನು ಮಾಡುತ್ತಿದ್ದೀರಿ ಎಂದು ಅರ್ಥ ಮಾಡಿಕೊಳ್ಳಲಿಲ್ಲ ಎಂದರೆ, ಅಂತಹ ವ್ಯಕ್ತಿಗೆ ಏನು ಮಾಡಿದರು ಅದಕ್ಕೆ ಅರ್ಥ ಇರೋದಿಲ್ಲ. ಅಂತಹ ಸಂಬಂಧಗಳನ್ನು ಮುರಿದುಕೊಳ್ಳುವುದೇ ಉತ್ತಮ' ಎಂದು ಸಲಹೆ ನೀಡಿದ್ದರು.

ಅಲ್ಲದೇ, ಆರು ವರ್ಷಗಳ ಹಿಂದೆ ಅವರ ಹಿರಿಯ ಮಗ ಅನಾರೋಗ್ಯದ ಕಾರಣ ಸಾವನ್ನಪ್ಪಿದ್ದರು. ಆ ಬಳಿಕ ಸಂಗೀತಾ ಅವರು ಗಂಡನ ಕುಟುಂಬದೊಂದಿಗೆ ದೂರ ಆಗಿ ವಾಸಿಸುತ್ತಿದ್ದರಂತೆ. ಒಂದು ನಿಮಿಷದ ವಿಡಿಯೋದಲ್ಲಿ ಮಾತನಾಡಿರುವ ಸಂಗೀತಾ, ಎರಡು ಬದಿ ಚಪಾತಿ ಬೇಯಿಸಿದಾಗ ಮಾತ್ರ ರುಚಿಯಾಗಿರುತ್ತದೆ. ಸಂಬಂಧಗಳು ಅದೇ ರೀತಿ ಎರಡು ಕಡೆಯಿಂದ ಒಬ್ಬರಿಗೆ ಒಬ್ಬರು ಬೆಲೆ ಕೊಟ್ಟಾಗ ಮಾತ್ರ ಉಳಿಯುತ್ತವೆ. ಒಬ್ಬರಿಗೆ ಬೆಳೆ ಕೊಡಲಿಲ್ಲ ಎಂದರೆ, ಅಂತಹ ಸಂಬಂಧಕ್ಕೆ ಯಾವುದೇ ಅರ್ಥ ಇರೋದಿಲ್ಲ. ಅಂತಹ ಸಂಬಂಧದಿಂದ ಹೊರಬರುವುದು ಯಾವಾಗಲೂ ಉತ್ತಮ ಎಂದು ಹೇಳಿದ್ದರು.

ಅಂದಹಾಗೇ, ಸಂಗೀತಾ ಅವರಿಗೆ ಯೂಟ್ಯೂಬ್‌ನಲ್ಲಿ ಸುಮಾರು 29 ಸಾವಿರಕ್ಕಿಂತ ಹೆಚ್ಚು ಮಂದಿ ಫಾಲೋವರ್ಸ್ ಹೊಂದಿದ್ದರು. ಸಣ್ಣ ಸಣ್ಣ ವ್ಲಾಗ್ ಮಾಡುತ್ತಾ ಹಲವು ವಿಚಾರಗಳ ಬಗ್ಗೆ ಮಾತನಾಡುತ್ತಿದ್ದರು. ಹಲವರಿಗೆ ತಮ್ಮ ಪೋಸ್ಟ್‌ಗಳ ಮೂಲಕ ಪ್ರೇರಣೆ ನೀಡುವ ಕೆಲಸವನ್ನು ಸಂಗೀತಾ ಮಾಡುತ್ತಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪತಿಯ ಕಣ್ಣು ತಪ್ಪಿಸಿ ಕೂಡಿಟ್ಟ 12 ಲಕ್ಷ ಇಲಿಯ ಪಾಲು! ಭವಿಷ್ಯದ ಬಗ್ಗೆ ಆಲೋಚಿಸಿದ್ದ ಪತ್ನಿಯ ಸ್ಥಿತಿ ಚಿಂತಾಜನಕ
ಮುಚ್ಚಿದ ಕೋಣೆಯಲ್ಲಿ ಜಾತಿ ನಿಂದನೆ- SC, ST ಕಾಯ್ದೆಯಡಿ ಅಪರಾಧವಲ್ಲ ಎಂದ ಸುಪ್ರೀಂಕೋರ್ಟ್​