ತಾರೀಖ್‌ ಪ್ರಮಾಣಕ್ಕೆ ಮೋದಿಗೆ ಆಹ್ವಾನ, ಸ್ಪೀಕರ್‌ ಬಿರ್ಲಾ ಭಾಗಿ

Kannadaprabha News   | Kannada Prabha
Published : Feb 16, 2026, 06:48 AM IST
 bangladesh pm tarique rahman

ಸಾರಾಂಶ

: ಬಾಂಗ್ಲಾ ಪ್ರಧಾನಿಯಾಗಿ ಬಿಎನ್‌ಪಿ ಮುಖ್ಯಸ್ಥ ತಾರೀಖ್‌ ರೆಹಮಾನ್‌ ಫೆ.17ರಂದು ಪ್ರಮಾಣ ಸ್ವೀಕರಿಸಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ. ಆದರೆ ಅವರ ಬದಲು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಭಾಗಿ

ನವದೆಹಲಿ: ಬಾಂಗ್ಲಾ ಪ್ರಧಾನಿಯಾಗಿ ಬಿಎನ್‌ಪಿ ಮುಖ್ಯಸ್ಥ ತಾರೀಖ್‌ ರೆಹಮಾನ್‌ ಫೆ.17ರಂದು ಪ್ರಮಾಣ ಸ್ವೀಕರಿಸಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ. ಆದರೆ ಅವರ ಬದಲು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

ಭಾರತ ಸೇರಿ 13 ರಾಷ್ಟ್ರಗಳ ನಾಯಕರಿಗೆ ಬಾಂಗ್ಲಾದಿಂದ ಆಮಂತ್ರಣ

ಭಾರತ ಸೇರಿ 13 ರಾಷ್ಟ್ರಗಳ ನಾಯಕರಿಗೆ ಬಾಂಗ್ಲಾದಿಂದ ಆಮಂತ್ರಣ ರವಾನೆಯಾಗಿದೆ. ಆದರೆ ಶಪಥದ ದಿನದಂದೇ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವಲ್‌ ಮ್ಯಾಕ್ರಾನ್‌ ಅವರು ದ್ವಿಪಕ್ಷೀಯ ಮಾತುಕತೆಗಾಗಿ ಭಾರತಕ್ಕೆ ಆಗಮಿಸುತ್ತಿರುವ ಕಾರಣ ಮೋದಿಯವರು ಬಾಂಗ್ಲಾ ಪ್ರವಾಸ ಕೈಗೊಳ್ಳುತ್ತಿಲ್ಲ. ಅತ್ತ ಸಂಬಂಧ ಸುಧಾರಣೆಯ ದೃಷ್ಟಿಯಿಂದ ಭಾರತದ ಉಪಸ್ಥಿತಿ ಅನಿವಾರ್ಯವಾಗಿರುವುದರಿಂದ ಬಿರ್ಲಾ ಮತ್ತು ಮಿಸ್ರಿ ಭಾಗವಹಿಸಲಿದ್ದಾರೆ.

ಇಂಡೋನೇಷ್ಯಾ ದೂತ ಬಾಂಗ್ಲಾಗೆ:

ಬಾಂಗ್ಲಾದೇಶದಲ್ಲಿ ಬಿಎನ್‌ಪಿ ನೇತೃತ್ವದ ಹೊಸ ಸರ್ಕಾರ ರಚನೆಯಾಗುತ್ತಿರುವ ಹೊತ್ತಿನಲ್ಲಿ, ಇಂಡೋನೇಷ್ಯಾಗೆ ಭಾರತದ ರಾಯಭಾರಿಯಾಗಿರುವ ಸಂದೀಪ್‌ ಚಕ್ರವರ್ತಿ ಅವರನ್ನು ಬಾಂಗ್ಲಾದ ದೂತರಾಗಿ ನೇಮಿಸಬಹುದು ಎನ್ನಲಾಗಿದೆ. ಚಕ್ರವರ್ತಿ ಅವರು 2012ರಿಂದ 2015ರ ವರೆಗೆ ಬಾಂಗ್ಲಾದ ಉಪರಾಯಭಾರಿಯಾಗಿದ್ದರು. ಸದ್ಯ ಪ್ರಣಯ್‌ ವರ್ಮಾ ಅವರು ಬಾಂಗ್ಲಾದ ದೂತರಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಾಗತಿಕ ಎಐ ಶೃಂಗಕ್ಕೆ ಇಂದು ಮೋದಿ ಚಾಲನೆ
ಕಾಂಚೀಪುರಂ: ಮಾನವರಿಲ್ಲ, ರೋಬೋಗಳೆ ಕೆಲ್ಸ ಮಾಡುವ 24/7 ಫ್ಯಾಕ್ಟ್ರಿ!