ಬೆಳಗಾವಿ ಕಬ್ಬಿನ ಗದ್ದೆಯಲ್ಲಿ 17ನೇ ಮಗುವಿಗೆ ಜನ್ಮ ನೀಡಿದ ‘ಮಹಾ’ತಾಯಿ!

By Suvarna News  |  First Published Dec 18, 2019, 10:07 AM IST

ಬೆಳಗಾವಿ ಕಬ್ಬಿನ ಗದ್ದೆಯಲ್ಲಿ 17ನೇ ಮಗುವಿಗೆ ಜನ್ಮ ನೀಡಿದ ‘ಮಹಾ’ತಾಯಿ!| ಮಹರಾಷ್ಟ್ರದ ಬೀಡ್‌ ಜಿಲ್ಲೆಯ ಕಾರ್ಮಿಕ ಮಹಿಳೆ


ಔರಂಗಾಬಾದ್‌[ಡಿ.18]: ಕೆಲಸ ಅರಸಿ ಬೆಳಗಾವಿಗೆ ಬಂದಿದ್ದ ಮಹರಾಷ್ಟ್ರದ ಬೀಡ್‌ ಜಿಲ್ಲೆಯ ಕಾರ್ಮಿಕ ಮಹಿಳೆಯೊಬ್ಬಳು ಕಬ್ಬಿನ ಗದ್ದೆಯಲ್ಲೇ ತನ್ನ 17ನೇ ಮಗುವಿಗೆ ಜನ್ಮ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆದರೆ 17ನೇ ಹೆಣ್ಣು ಮಗು ಮೃತ ಪಟ್ಟಿದೆ ಎಂದು ಔರಂಗಾಬಾದ್‌ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಬುಡಕಟ್ಟು ಗೋಪಾಲ ಜನಾಂಗಕ್ಕೆ ಸೇರಿದ ಲಂಕಾಬಾಯಿ ಎಂಬ ಮಹಿಳೆ 20ನೇ ಬಾರಿಗೆ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದು ಆರೋಗ್ಯಾಧಿಕಾರಿಗಳು ಸೆ.8ರಂದು ಆರೋಗ್ಯ ತಪಾಸಣೆ ನಡೆಸಿದ್ದರು. ಬಳಿಕ ನ.21ರಂದು ಆರೋಗ್ಯ ತಪಾಸಣೆಗೆಂದು ಬಂದಾಗ ಬೆಳಗಾವಿಗೆ ವಲಸೆ ಹೋಗಿರುವುದು ತಿಳಿದು ಬಂದಿದೆ.

Tap to resize

Latest Videos

ಮಹಿಳೆಗೆ ಒಟ್ಟು 11 ಮಕ್ಕಳಿದ್ದು, 5 ಮಕ್ಕಳು ಮೃತ ಪಟ್ಟಿದ್ದಾರೆ. 3 ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬೀಡ್‌ ಜಿಲ್ಲೆಯಲ್ಲಿ ಭಾರೀ ಅನಾವೃಷ್ಠಿಯಿಂದಾಗಿ ಸಾವಿರಾರು ಮಂದಿ ಕಬ್ಬಿನ ಗದ್ದೆಯಲ್ಲಿ ಕೆಲಸ ಅರಸಿ ಬೆಳಗಾವಿ ಸೇರಿ ಕರ್ನಾಟಕದ ನಾನಾ ಭಾಗಗಳಿಗೆ ವಲಸೆ ಬರುತ್ತಾರೆ.

click me!