ಕೊರೋನಾ ಅಬ್ಬರ: ನಾಗ್ಪುರ ಒಂದು ವಾರ ಲಾಕ್‌!

Published : Mar 15, 2021, 12:43 PM IST
ಕೊರೋನಾ ಅಬ್ಬರ: ನಾಗ್ಪುರ ಒಂದು ವಾರ ಲಾಕ್‌!

ಸಾರಾಂಶ

ಇಂದಿನಿಂದ ಮಹಾರಾಷ್ಟ್ರದ ನಾಗಪುರದಲ್ಲಿ ಲಾಕ್ ಡೌನ್| ಇಂದಿನಿಂದ ಒಂದು ವಾರದವರೆಗೆ 21 ನೇ ತಾರೀಖಿನವರೆಗೆ ಲಾಕ್ ಡೌನ್| ಒಂದು ವಾರದಲ್ಲಿ ನಾಗಪುರದಲ್ಲಿ 12,773 ಪಾಸಿಟಿವ್ ಕೇಸ್ ಗಳು ಪತ್ತೆ

ನಾಗ್ಪುರ(ಮಾ.15): ಮಹಾರಾಷ್ಟ್ರದಲ್ಲಿ ಮತ್ತೆ ಕೊರೋನಾ ಅಬ್ಬರ ಆರಂಭವಾಗಿದೆ. ಹೀಗಿರುವಾಗ ಪರಿಸ್ಥಿತಿ ನಿಯಂತ್ರಿಸಲು ಸರ್ಕಾರ ಒಂದಾದ ಬಳಿಕ ಮತ್ತೊಂದರಂತೆ ಅನೇಕ ನಗರ ಹಾಗೂ ಜಿಲ್ಲೆಗಗಳಲ್ಲಿ ಲಾಕ್‌ಡೌನ್ ಘೋಷಿಸಲಾರಂಭಿಸಿದೆ. ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಲಾಕ್‌ಡೌನ್ ಘೋಷಿಇಸಲಾಗಿದ್ದು, ಸದ್ಯ ಮಹಾರಾ‍ಷ್ಟ್ರದ ನಾಗ್ಪುರವೂ ಈ ಪಟ್ಟಿಗೆ ಸೇರ್ಪಡೆಗೊಂಡಿದೆ. 

ಇಂದಿನಿಂದ ಒಂದು ವಾರ ಮಹಾರಾಷ್ಟ್ರದ ನಾಗಪುರದ ಲಾಕ್‌ಡೌನ್ ಆಗಲಿದೆ. ಇಲ್ಲಿ ಪ್ರತಿದಿನ 1700 ರಿಂದ 1800 ಕೇಸ್ ಗಳು ಪತ್ತೆಯಾಗುತ್ತಿದ್ದು, ಮಾರ್ಚ್ ತಿಂಗಳಲ್ಲಿ ಕೇವಲ 14 ದಿನಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 20 ಸಾವಿರ ಗಡಿ ದಾಟಿದೆ. 

ಇನ್ನು ನಿನ್ನೆ ಇಲ್ಲಿ 2 ಸಾವಿರ ಕೊರೊನಾ ಕೇಸ್ ಪತ್ತೆಯಾಗಿದ್ದು, ಬರೋಬ್ಬರಿ ಆರನೇ ಬಾರಿ ಇಷ್ಟೊಂದು ಪ್ರಮಾಣದ ಕೇಸ್‌ಗಳು ಪತ್ತೆಯಾಗಿವೆ.  ಈ ಎಲ್ಲಾ ಕಾರಣದಿಂದ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಮುಂದಿನ ಏಳು ದಿನಗಳವರೆಗೆ ಜಿಲ್ಲೆಯಾದ್ಯಂತ ಅಗತ್ಯ ಸೇವೆಗಳು ಹೊರತುಪಡಿಸಿ ಬೇರೆಯಾವ ಸೇವೆಗಳು ಲಭ್ಯ ಇರುವುದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Holi 2026: ಅರ್ಧ ಜಗತ್ತೇ ಯುದ್ಧದಲ್ಲಿ ರಕ್ತದೋಕುಳಿ ಆಡುತ್ತಿರುವಾಗ, ಅನಾಥಾಶ್ರಮದ ಮಕ್ಕಳೊಂದಿಗೆ ಭಾರತೀಯ ಸೈನಿಕರ ಸಂಭ್ರಮದ ಬಣ್ಣದಾಟ
Holi Special Trains: ಹೋಳಿ ಹಬ್ಬಕ್ಕೆ ಊರಿಗೆ ಹೋಗ್ತೀರಾ? ರೈಲ್ವೆ ಇಲಾಖೆಯಿಂದ ಭರ್ಜರಿ ವ್ಯವಸ್ಥೆ, ಇಲ್ಲಿದೆ ಡೀಟೇಲ್ಸ್