'ರೊಟ್ಟಿ ಕೊಟ್ಟ ಆಂಟಿಯನ್ನೇ ಬುಟ್ಟಿಗೆ ಹಾಕೊಂಡ ಸಿದ್ದಗೊಂಡ', 6 ತಿಂಗಳು ಮಜಾ ಮಾಡಿ ಕೈಕೊಟ್ಟೋದ್ಲು!

By Sathish Kumar KH  |  First Published Jan 24, 2024, 6:12 PM IST

ಮಹಾರಾಷ್ಟ್ರದ ರೊಟ್ಟಿ ಮಾರೋ ಆಂಟಿಯನ್ನು ಬುಟ್ಟಿಗೆ ಹಾಕೊಂಡು ಬಳ್ಳಾರಿಗೆ ಓಡಿಸಿಕೊಂಡು ಬಂದ ಲಾರಿ ಡ್ರೈವರ್ ಸಿದ್ದಗೊಂಡ. ಆದ್ರೆ, 6 ತಿಂಗಳು ಜೊತೆಗಿದ್ದ ಆಂಟಿ ಆಟ ನಿವೇ ನೋಡಿ..


ಬಳ್ಳಾರಿ (ಜ.24): ಇಬ್ಬರೂ ಮಹಾರಾಷ್ಟ್ರ ಮೂಲದವರು. ಮದುವೆಯಾಗಿ ಎರಡು ಮಕ್ಕಳಿದ್ದ ಡ್ರೈವರ್ ಅಂಕಲ್, ಹೋಟೆಲ್‌ನಲ್ಲಿ ರೊಟ್ಟಿ ಊಟ ಕೊಟ್ಟ ಒಂದು ಮಗುವಿನ ತಾಯಿ ಆಂಟಿಯನ್ನೇ ಬುಟ್ಟಿಗೆ ಹಾಕೊಂಡಿದ್ದನು. ಆದರೆ, ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದ್ದು, ಮಹರಾಷ್ಟ್ರ ಬಿಟ್ಟು ಬಳ್ಳಾರಿಗೆ ಬಂದು ನೆಲೆಸಿದ್ದರು. ಆದ್ರೆ, ಆರು ತಿಂಗಳು ಡ್ರೈವರ್ ಅಂಕಲ್‌ ಜೊತೆಗೆ ದೇಶದ ವಿವಿಧ ಪ್ರದೇಶಗಳಿಗೆ ವಿಮಾನ, ರೈಲು, ಸ್ಲೀಪರ್ ಕೋಚ್‌ ಬಸ್‌ ಹಾಗೂ ಬಾಡಿಗೆ ಕಾರುಗಳಲ್ಲಿ ಸುತ್ತಾಡಿದ ಆಂಟಿ ಈಗ ಹಳೆಯ ಗಂಡನೇ ಬೇಕೆಂದು ಈತನಿಗೆ ಕೈಕೊಟ್ಟು ಹೋಗಿದ್ದಾಳೆ.

ಹೌದು, ಇದೊಂದು ವಿಚಿತ್ರ ಪ್ರೇಮ ಕಥೆಯಾಗಿದೆ. ಮಹಾರಾಷ್ಟ್ರದಲ್ಲಿ ಹುಟ್ಟಿದ ಲವ್ ಸ್ಟೋರಿ ಬಳ್ಳಾರಿಯಲ್ಲಿ ಅಂತ್ಯಗೊಂಡಿದೆ. ರೊಟ್ಟಿ ತರಲು ಹೋದ ಎರಡು ಮಕ್ಕಳ ಅಂಕಲ್‌ಗೆ ಒಂದು ಮಗುವಿರುವ ಆಂಟಿ ಮೇಲೆ ಲವ್ ಆಗಿದೆ. ಈಕೆಯ ಹೆಸರು ಸುಜಾತಾ ಆಗಿದ್ದು, ಮಹಾರಾಷ್ಟ್ರದಲ್ಲಿ ರೊಟ್ಟಿ ಮಾರುತ್ತಿದ್ದಳು. ಈತ ಮಹಾರಾಷ್ಟ್ರದ ಸಾಂಗ್ಲಿಯ ಜತ್ತ ತಾಲೂಕಿನ ಮುಚ್ಚಂಡಿ ಗ್ರಾಮದ ಸಿದ್ದಗೊಂಡ ಸೌದತ್ತಿ ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಇಬ್ಬರಿಗೂ ಪ್ರತ್ಯೇಕ ಸಂಸಾರವಿದ್ದು, ತಮ್ಮ ಜೀವನವನ್ನು ಸುಖವಾಗಿಯೇ ನಿರ್ವಹಣೆ ಮಾಡುತ್ತಿದ್ದರು. ಆದರೆ, ಹಾಳಾದ ಈ ಅನೈತಿಕ ಪ್ರೇಮದಿಂದ ಈಗ ಇಬ್ಬರೂ ಸಂಸಾರವನ್ನು ಹಾಳು ಮಾಡಿಕೊಂಡಿದ್ದರು.

Tap to resize

Latest Videos

undefined

ಮೇಲುಕೋಟೆ ಶಿಕ್ಷಕಿ ಹಂತಕ ಹೊಸಪೇಟೆಯಲ್ಲಿ ಅರೆಸ್ಟ್: 'ಅಪ್ಪಾಜಿ ದೀಪಿಕಾ ಅಕ್ಕಾ ಸಿಕ್ಕಿದ್ರಾ' ಅಂತ ಕೇಳಿದ್ದ ಕೊಲೆಗಾರ!

ರೊಟ್ಟಿ ಊಟಕ್ಕೆ ಹೋದ ಸಿದ್ದಗೊಂಡ ಸೌದತ್ತಿ ರೊಟ್ಟಿ ಮಾರೋ ಆಂಟಿ ಸುಜಾತಾಳನ್ನು ಅಲ್ಲಿಂದ ಓಡಿಸಿಕೊಂಡು ಬಳ್ಳಾರಿಗೆ ಬಂದಿದ್ದಾನೆ. ಇಬ್ಬರೂ ಊರು ಬಿಟ್ಟು ಬಂದು ಬಳ್ಳಾರಿಯಲ್ಲಿ ತಾವು ಗಂಡ-ಹೆಂಡತಿ ಎಂದು ಹೇಳಿಕೊಂಡು 6 ತಿಂಗಳ ಕಾಲ ಸಂಸಾರವನ್ನೂ ಮಾಡಿದ್ದಾರೆ. ಆದರೆ, ಮಹಾರಾಷ್ಟ್ರದಲ್ಲಿ ಸುಜಾತಾಳ ಗಂಡ ಮಹೇಶ್‌ ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಮಹಾರಾಷ್ಟ್ರ ಸಾಂಗ್ಲಿ ಪೊಲೀಸ್ ಠಾಣೆಯಲ್ಲಿ ಕೇಸ್ ಕೊಟ್ಟಿದ್ದನು. ಆಗ, ಸುಜಾತಾ ಬಳ್ಳಾರಿಯಲ್ಲಿ ಡ್ರೈವರ್‌ ಜೊತೆಗೆ ಇರುವುದನ್ನು ಪತ್ತೆಹಚ್ಚಿ ಇಬ್ಬರನ್ನೂ ಮಹಾರಾಷ್ಟ್ರದ ಪೊಲೀಸ್‌ ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿದ್ದರು. ಆಗ ಪೊಲೀಸರು ರಾಜಿ ಪಂಚಾಯ್ತಿ ಮಾಡಲೂ ಮುಂದಾಗಿದ್ದಾರೆ.

ಸಾಂಗ್ಲಿ ಪೊಲೀಸರ ಮುಂದೆ ರೊಟ್ಟಿ ಮಾರೋ ಸುಜಾತಾ ಅಂಟಿ ನನಗೆ ಗಂಡ-ಮಗು ಬೇಡ, ಡ್ರೈವರ್ ಸಿದ್ದಗೊಂಡನ ಜೊತೆಗೆ ಹೋಗುತ್ತೇನೆ ಎಂದು ಹೇಳಿದ್ದಾಳೆ. ಆಗ, ಸಾಂಗ್ಲಿ ಪೋಲಿಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟು ಸುಜಾತಾ-ಸಿದ್ದಗೊಂಡ ಇಬ್ಬರೂ ಪುನಃ ಬಳ್ಳಾರಿಗೆ ಬಂದು ನೆಲೆಸುತ್ತಾರೆ. ಆದರೆ, ಇಲ್ಲಿಗೆ ಬಂದವಳೇ ವರಸೆ ಬದಲಿಸಿದ್ದ ಸುಜಾತಾ ತನಗೆ ದೇಶ ಸುತ್ತಾಡಬೇಕು ಎನಿಸುತ್ತಿದೆ. ಕಾರು, ಸ್ಲೀಪರ್ ಬಸ್ಸು, ರೈಲು, ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂಬೆಲ್ಲಾ ಬಯಕೆಯನ್ನು ಆತನ ಮುಂದಿಟ್ಟಿದ್ದಾಳೆ.

ಇನ್ನು ಪ್ರೇಯಸಿ ಹೇಳಿದಂತೆ ಕೇಳಿದ ಸಿದ್ದಗೊಂಡ ಸುಜಾತಾಳನ್ನು ವಿಮಾನ, ರೈಲಿನಲ್ಲಿ ವಿವಿಧ ಪ್ರವಾಸಿ ಮತ್ತು ಧಾರ್ಮಿಕ ಸ್ಥಳಿಗೆ ಕರೆದುಕೊಂಡು ಸುತ್ತಾಡಿಸಿದ್ದಾನೆ. ಇಷ್ಟಾದರೂ ತನ್ನ ಪ್ರವಾಸದ ಹುಚ್ಚು ತೀರದಿದ್ದಾಗ ಹಣವಿಲ್ಲದೇ ಸಿದ್ದಗೊಂಡ ಬೈದಿದ್ದಾನೆ. ಆಗ, ವರಸೆ ಬದಲಿಸಿದ ಸುಜಾತಾ ತನ್ನ ಹಳೆಯ ಗಂಡನಿಗೆ ಕರೆ ಮಾಡಿ, ತನ್ನಿಂದ ತಪ್ಪಾಗಿದೆ ನಿನ್ನೊಂದಿಗೆ ಬಂದು ಜೀವನ ಮಾಡುತ್ತೇನೆ ಎಂದು ಕೇಳಿಕೊಂಡಿದ್ದಾಳೆ. ಹೆಂಡತಿ ತಪ್ಪನ್ನು ಕ್ಷಮಿಸಿದ ಗಂಡ ಬರಲು ಹೇಳಿದಾಗ, ಸಿದ್ದಗೊಂಡನನ್ನು ಬಳ್ಳಾರಿಯಲ್ಲಿಯೇ ಬಿಟ್ಟು ಮಹಾರಾಷ್ಟ್ರಕ್ಕೆ ಹೋಗಿದ್ದಾಳೆ.

ಮೇಲುಕೋಟೆ ಶಿಕ್ಷಕಿಯನ್ನು ಕೊಲೆಗೈದು ಮಣ್ಣಲ್ಲಿ ಮುಚ್ಚಿ ಹೋದನಾ ಮಂಡ್ಯ ಹೈದ?

ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಜೀವನಕ್ಕೆ ಆಸರೆಯಾಗುತ್ತಾಳೆಂದು ರೊಟ್ಟಿ ಮಾರೋ ಆಂಟಿಯನ್ನು ನಂಬಿಕೊಂಡು ಬಂದ ಸಿದ್ದಗೊಂಡನಿಗೆ ಈಗ ಹೆಂಡತಿಯೂ ಇಲ್ಲ, ಪ್ರೇಯಸಿಯೂ ಇಲ್ಲದಂತಾಗಿದೆ. ಜೊತೆಗೆ, ತಾನು ದುಡಿದು ಸಂಪಾದನೆ ಮಾಡಿ ಕೂಡಿಟ್ಟಿದ್ದ ಹಣವನ್ನೆಲ್ಲಾ ಪ್ರೇಯಸಿಯ ಸುತ್ತಾಟಕ್ಕೆ ಖರ್ಚು ಮಾಡಿಕೊಂಡು ಬೀದಿಗೆ ಬಂದಿದ್ದಾನೆ. ಪ್ರೇಯಸಿಗಾಗಿ ಇಷ್ಟೆಲ್ಲಾ ಕಳೆದುಕೊಂಡಿದ್ದರೂ ನನ್ನನ್ನು ಹೇಗೆ ಬಿಟ್ಟು ಹೋದಳು? ನನಗೆ ತನ್ನ ಪ್ರೇಯಸಿ ಬೇಕು ಅಂತಾ ಡ್ರೈವರ್ ಸಿದ್ದಗೊಂಡ ಬಳ್ಳಾರಿ  ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾನೆ.

click me!