ಲೋಕಸಭಾ ಸ್ಪೀಕರ್ ಓಮ್ ಬಿರ್ಲಾಗೆ ಕೊರೋನಾ; ಏಮ್ಸ್ ಆಸ್ಪತ್ರೆ ದಾಖಲು!

By Suvarna NewsFirst Published Mar 21, 2021, 3:16 PM IST
Highlights

ದೇಶದಲ್ಲೀಗ ಕೊರೋನಾ ವೈರಸ್ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ 2ನೇ ಅಲೆ ಶುರುವಾಗಿದೆ. ಕೆಲ ರಾಜ್ಯಗಳಲ್ಲಿ ವಿಪರೀತವಾಗಿದ್ದ ಕೊರೋನಾ ಇದೀಗ ಬಹುತೇಕ ರಾಜ್ಯಗಳಿಗೆ ಹರಡಿದೆ. ಇದರ ನಡುವೆ ಲೋಕಸಭಾ ಸ್ವೀಕರ್ ಓಮ್ ಬಿರ್ಲಾಗೆ ಕೊರೋನಾ ವೈರಸ್ ತಗುಲಿದೆ. 

ನವದೆಹಲಿ(ಮಾ.21): ಕೊರೋನಾದಿಂದ ನಿಂತುಹೋಗಿದ್ದ ಜನಜೀವನ ಸಹಜ ಸ್ಛಿತಿಗೆ ಮರಳುತ್ತಿದ್ದಂತೆ ಇದೀಗ ಎರಡನೆ ಅಲೆ ಶುರುವಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಅದೆಷ್ಟೆ ಜಾಗರೂಕತೆ ವಹಿಸಿದರೂ ಕೊರೋನಾ ಮಾತ್ರ ಹರಡುತ್ತಲೇ ಇದೆ. ಇದೀಗ ಲೋಕಸಭಾ ಸ್ಪೀಕರ್ ಓಮ್ ಬಿರ್ಲಾಗೆ ಕೊರೋನಾ ತಗುಲಿದೆ.

ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಆಗುತ್ತಾ? ಸಚಿವ ಬೊಮ್ಮಾಯಿ ಹೀಗಂದ್ರು

ಕೊರೋನಾ ಲಕ್ಷಣಗಳು ಕಾಣಿಸಿಕೊಂಡ ಕಾರಣ ಮಾರ್ಚ್ 19 ರಂದು ಓಮ್ ಬಿರ್ಲಾ ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ಕೊರೋನಾ ಪಾಸಿಟೀವ್ ದೃಢಪಟ್ಟಿದೆ. ಹೀಗಾಗಿ ಓಮ್ ಬಿರ್ಲಾ ಅವರನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ(ಮಾ.20) ಓಮಾ ಬಿರ್ಲಾ ಹೆಲ್ತ್ ಬುಲೆಟ್ ಬಿಡುಗಡೆ ಮಾಡಿದ್ದಾರೆ. ಈ ವೇಳೆ ವೈದ್ಯರು, ಬಿರ್ಲಾ ಆರೋಗ್ಯವಾಗಿದ್ದಾರೆ. ಇತರ ಯಾವುದೇ ಸಮಸ್ಯೆಗಳಿಲ್ಲ ಎಂದಿದ್ದಾರೆ.

ಮಾರ್ಚ್ 8 ರಿಂದ ಆರಂಭಗೊಂಡ ಎರಡನೇ ಹಂತದ ಬಜೆಟ್‌ನ ಎಲ್ಲಾ ಅಧಿವೇಶನದಲ್ಲಿ ಓಮ್ ಬಿರ್ಲಾ ಪಾಲ್ಗೊಂಡಿದ್ದರು.  ಇಂಧನ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆ ನಡುವಿನ ಬಜೆಟ್ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿತ್ತು. ಇಷ್ಟೇ ಅಲ್ಲ ಅಧಿವೇಶನ ಬಹಿಷ್ಕರಿಸಿತ್ತು. ಆದರೆ ಓಮ್ ಬಿರ್ಲಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿರೋಧ ಪಕ್ಷಗಳು ಅಧಿವೇಶನದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿತ್ತು. 

ಇದೀಗ ಬಿರ್ಲಾಗೆ ಕೊರೋನಾ ಕಾಣಿಸಿಕೊಂಡಿರುವುದು ಸದನದಲ್ಲಿನ ಇತರ ಸದಸ್ಯರು, ಸಿಬ್ಬಂಧಿಗಳಿಗೂ ಆತಂಕ ಎದುರಾಗಿದೆ. 

click me!