
ಹೈದರಾಬಾದ್(ಸೆ.28) ಗಣೇಶ ಹಬ್ಬ ವಿಜ್ರಂಭಣೆಯಿಂದ ಆಚರಿಸಲಾಗಿದೆ. ದೇಶದ ಹಲವು ಭಾಗದಲ್ಲಿ ಇದೀಗ ಗಣೇಶ ವಿಸರ್ಜನೆ ನಡೆಯುತ್ತಿದೆ. ಹಲವೆಡೆ 10 ದಿನ, 15 ದಿನದ ಅದ್ಧೂರಿ ಗಣೇಶೋತ್ಸವ ಸಂಭ್ರಮಚಾರಣೆ ನಡೆಯುತ್ತಿದೆ. ಇದೀಗ ಬಹುತೇಕ ಕಡೆ ಅದ್ಧೂರಿಯಾಗಿ ಗಣೇಶ ವಿಸರ್ಜನೆಗಳು, ಶೋಭಯಾತ್ರೆ ನಡೆಯುತ್ತಿದೆ. ಹೀಗೆ ಅದ್ಧೂರಿ ಗಣೇಶೋತ್ಸವ ವಿಸರ್ಜನೆ ಮೆರವಣಿಗೆಯಲ್ಲಿ ಪೊಲೀಸ್ ಹಾಕಿದ ಭರ್ಜರಿ ಸ್ಟೆಪಸ್ ವೈರಲ್ ಆಗಿದೆ. ಹೌದು, ಹೈದರಾಬಾದ್‌ನ ಟ್ಯಾಂಕ್ ಬಂಡ್ ರೋಡ್‌ನಲ್ಲಿ ಅದ್ಧೂರಿ ಗಣೇಶ ವಿಸರ್ಜನೆ ಮೆರವಣಿಗೆ ಆರಂಭಗೊಂಡಿತ್ತು. ಲಕ್ಷಾಂತರ ಮಂದಿ ಸೇರುವ ಕಾರಣ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು. ಆದರೆ ವಿಸರ್ಜನೆ ಮೆರವಣಿಗೆಯಲ್ಲಿ ಹಾಕಿದ್ದ ಡಿಜೆಗೆ ನೆರೆದಿದ್ದವರೂ ಮಾತ್ರವಲ್ಲ ಪೊಲೀಸರು ಸಖತ್ ಸ್ಪೆಪ್ಸ್ ಹಾಕಿದ್ದಾರೆ.
ಖೈರತಾಬಾದ್ ಗಣೇಶ ಪ್ರತಿ ವರ್ಷ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅದ್ಧೂರಿ ಗಣೇಶ ಆಚರಣೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡು ಗಣೇಶನ ದರ್ಶನ ಪಡೆಯುತ್ತಾರೆ. ಪ್ರತಿ ವರ್ಷ ಆಯೋಜಕರು ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸುತ್ತಾರೆ. ಅತೀ ದೊಡ್ಡ ಗಣೇಶನ ಮೂರ್ತಿ ಕೂರಿಸಿ 10 ದಿನಗಳ ಕಾಲ ಪೂಜೆ ನಡೆಯುತ್ತದೆ. ಇನ್ನು ವಿಸರ್ಜನೆ ಮೆರವಣಿಗೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಾರೆ.
ಪಟಾಕಿ ಸಿಡಿಸುವುದಕ್ಕಲ್ಲ, ನಮ್ಮ ಸಂಸ್ಕೃತಿ ಉಳಿಸಲು ಗಣೇಶೋತ್ಸವ ಆಚರಣೆ: ಪ್ರಮೋದ್ ಮುತಾಲಿಕ್
ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಕಾರಣ ಹೆಚ್ಚುವರಿ ಪೊಲೀಸ್ ಪಡ ನಿಯೋಜನೆ ಮಾಡಲಾಗುತ್ತದೆ. ಈ ಬಾರಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಡಿಜೆ ಹಾಕಲಾಗಿತ್ತು. ನೆರೆದಿದ್ದ ಯುವ ಸಮೂಹ ಡಿಜೆ ಮ್ಯೂಸಿಕ್‌ಗೆ ಕುಣಿದು ಕುಪ್ಪಳಿಸಿದ್ದಾರೆ. ಇತ್ತ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ರಸ್ತೆ ಬದಿಯಲ್ಲಿ ಹಾಕಿದ್ದ ಸ್ಟೇಜ್ ಮೇಲೆ ನಿಂತು ಸಖತ್ ಸ್ಟೆಪ್ಸ್ ಹಾಕಿದ್ದಾರೆ.
ಪೊಲೀಸ್ ಅಧಿಕಾರಿ ಡ್ಯಾನ್ಸ್ ಸ್ಕಿಲ್‌ಗೆ ಜನ ಬೆರಗಾಗಿದ್ದಾರೆ. ಹಲವರು ಹುರಿದುಂಬಿಸಿದ್ದಾರೆ. ಪೊಲೀಸ್ ಸ್ಟೆಪ್ಸ್‌ಗೆ ಭರ್ಜರಿ ಚಪ್ಪಾಳೆ, ಶಿಳ್ಳೆ ಬಂದಿದೆ. ಇತ್ತ ನೆರೆದಿದ್ದ ಭಕ್ತರು ಕೂಡ ಸ್ಪೆಪ್ಸ್ ಹಾಕಿದ್ದಾರೆ. ಇನ್ನು ಗಣೇಶ ವಿಸರ್ಜನೆ ವೇಳೆ ಕರ್ತವ್ಯದಲ್ಲಿದ್ದ ಹಲವು ಪೊಲೀಸರು ಸ್ಟೆಪ್ಸ್ ಹಾಕಿದ್ದಾರೆ. ಭಕ್ತರ ಜೊತೆ ಸೇರಿ ಪೊಲೀಸರು ಸ್ಟೆಪ್ಸ್ ಹಾಕಿ ಗಣೇಶನ ಅದ್ಧೂರಿ ವಿಸರ್ಜನೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ.
ಪೊಲೀಸರು ಮೆರವಣಿಗೆಯಲ್ಲಿ ಕುಣಿದರೂ ಬಿಗಿ ಬಂದೋಬಸ್ತ್‌ನಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡಿದ್ದಾರೆ. ಕಿಕ್ಕಿರಿದು ತುಂಬಿದ್ದ ಭಕ್ತರು, ಗಣೇಶನ ವಿಸರ್ಜನೆ ಎಲ್ಲವೂ ಸುಸೂತ್ರವಾಗಿ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ