'ದೇವಸ್ಥಾನದ ಎದುರಲ್ಲೇ ಹಿಂದುಗಳನ್ನ ನೇಣಿಗೆ ಹಾಕ್ತೇವೆ' ಕೇರಳ ಮುಸ್ಲಿಂ ಲೀಗ್‌ ಜಾಥಾದಲ್ಲಿ ಘೋಷಣೆ!

By Santosh Naik  |  First Published Jul 26, 2023, 3:59 PM IST

ಕೇರಳದಲ್ಲಿ ಮುಸ್ಲಿಂ ಯೂತ್‌ ಲೀಗ್‌ ಆಯೋಜಿಸಿದ್ದ ಮಣಿಪುರ ಒಗ್ಗಟ್ಟಿನ ಜಾಥಾದಲ್ಲಿ ಹಿಂದು ವಿರೋಧಿ ಘೋಷಣೆಗಳನ್ನು ಕೂಗಲಾಗಿದೆ. ಇದನ್ನು ಬಿಜೆಪಿ ಪಕ್ಷ ಖಂಡಿಸಿದ್ದು, ಮುಸ್ಲಿಂ ಯೂಥ್‌ ಲೀಗ್‌ ಘೋಷಣೆ ಕೂಗಿದ ಸದಸ್ಯನನ್ನು ಅಮಾನತು ಮಾಡಿದೆ.
 


ಕಾಸರಗೋಡು (ಜು.26): ಇತ್ತೀಚೆಗೆ ವಿದೇಶದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಾತನಾಡುತ್ತಿದ್ದ ವೇಳೆ, ದೇಶ ವಿಭಜನಗೆ ಕಾರಣವಾದ ಮುಸ್ಲಿಂ ಯೂಥ್‌ ಲೀಗ್‌ ಜೊತೆ ಕೇರಳದಲ್ಲಿ ಕೈಜೋಡಿಸಿದ್ದು ಏಕೆ ಎನ್ನುವ ಪ್ರಶ್ನೆಗೆ, ಅದೊಂದು ಜಾತ್ಯಾತೀತ ಪಕ್ಷ ಎಂದು ಅವರು ಕರೆದಿದ್ದರು. ಈಗ ರಾಹುಲ್‌ ಗಾಂಧಿ ಹೇಳಿದ್ದ ಇದೇ ಜಾತ್ಯಾತೀತ ಪಕ್ಷದ ಯೂಥ್‌ ವಿಂಗ್‌ನ ಜಾಥಾದಲ್ಲಿ ಹಿಂದು ವಿರೋಧಿ ಘೋಷಣೆಯನ್ನು ಕೂಗಲಾಗಿದೆ. ಕಾಸರಗೋಡು ಜಿಲ್ಲೆಯ ಕಾಞಂಗಾಡ್‌ನಲ್ಲಿ ಮುಸ್ಲಿಂ ಲೀಗ್‌ನ ಯೂಥ್‌ ವಿಂಗ್‌ ಮಣಿಪುರ ಒಗ್ಗಟ್ಟಿನ ಜಾಥಾವನ್ನು ಆಯೋಜನೆ ಮಾಡಿತ್ತು. ಈ ವೇಳೆ ಪ್ರತಿಭಟನೆ ಮಾಡಿದ ಕೆಲವು ಯುವಕರು ಹಿಂದೂ ವಿರೋಧಿ ಹಾಗೂ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿಸಿದ್ದಾರೆ. ಅವರ ಈ ಹೇಳಿಕೆಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬೆನ್ನಲ್ಲಿಯೇ ಮುಸ್ಲಿಂ ಯೂಥ್‌ ಲೀಗ್‌ ಪ್ರಕಟಣೆ ನೀಡಿದ್ದು, ಹಿಂದೂ ವಿರೋಧಿ ಘೋಷಣೆ ಕೂಗಿದ ಕಾಞಂಗಾಡ್‌ ಮೂಲದ ಅಬ್ದಲ್‌ ಸಲಾಂ ಅನ್ನು ಅಮಾನತು ಮಾಡಲಾಗಿದೆ. ಅವರು ಮಾಡಿದ್ದು ಕ್ಷಮಿಸಲಾಗದ ತಪ್ಪು ಎಂದು ಮುಸ್ಲಿಂ ಯೂಥ್‌ ಲೀಗ್‌ ತಿಳಿಸಿದೆ.

ರಾಷ್ಟ್ರೀಯವಾದಿ ಕೆಲ ನಾಯಕರು ಹಾಗೂ ಬಲಪಂಥೀಯವಾದಿಗಳು ಈ ಪ್ರಚೋದನಕಾರಿ ಹೇಳಿಕೆಯನ್ನು ಟೀಕಿಸಿವೆ. ಬಿಜೆಪಿ ಐಟಿ ಸೆಲ್‌ನ ಮಾಜಿ ಮುಖ್ಯಸ್ಥ ಅಮಿತ್‌ ಮಾಳವಿಯಾ ಕೂಡ ಇದರ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಕಾಂಗ್ರೆಸ್‌ನ ಮಿತ್ರಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ಯುವ ಘಟಕವು ಕೇರಳದ ಕಾಸರಗೋಡಿನಲ್ಲಿ ಜಾಥಾ ನಡೆಸಿ, ಹಿಂದೂ ವಿರೋಧಿ ಘೋಷಣೆಗಳನ್ನು ಕೂಗಿದೆ. ಅವರನ್ನು (ಹಿಂದೂಗಳನ್ನು) ದೇವಾಲಯಗಳ ಮುಂದೆ ನೇತುಹಾಕಿ ಜೀವಂತವಾಗಿ ಸುಟ್ಟುಹಾಕುವುದಾಗಿ ಬೆದರಿಕೆ ಹಾಕಿದೆ. ಪಿಣರಾಯಿ ಸರ್ಕಾರ ಅವರನ್ನು ಬೆಂಬಲಿಸದಿದ್ದರೆ ಅವರು ಇಂಥ ಮಾತುಗಳನ್ನು ಘೋಷಣೆ ಮಾಡುವ ಧೈರ್ಯ ಮಾಡುತ್ತಿರಲಿಲ್ಲ. ಕೇರಳದಲ್ಲಿ ಈಗ ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಸುರಕ್ಷಿತವಾಗಿದ್ದಾರೆಯೇ?' ಎಂದು ಪ್ರಶ್ನೆ ಮಾಡಿದ್ದಾರೆ.

ಕೆಲ ತಿಂಗಳ ಹಿಂದೆಯಷ್ಟೇ ಇಂಥದ್ದೇ ಇನ್ನೊಂದು ಘಟನೆ ನಡೆದಿತ್ತು. ತಂದೆಯ ಹೆಗಲ ಮೇಲೆ ಕುಳಿತಿದ್ದ 7 ವರ್ಷದ ಹುಡುಗನೊಬ್ಬ, 'ಹಿಂದುಗಳು ಹಾಗೂ ಕ್ರಿಶ್ಚಿಯನ್ನರು ಅಕ್ಕಿ, ಹೂವು ಮತ್ತು ಕರ್ಪೂರ ಸಿದ್ಧವಾಗಿಟ್ಟುಕೊಳ್ಳಿ, ನಿಮ್ಮ ಅಂತಿಮ ಸಂಸ್ಕಾರಕ್ಕೆ ಬೇಕಾಗುತ್ತದೆ' ಎನ್ನುವ ಘೋಷಣೆಯನ್ನು ಕೂಗಿದ್ದ. ಕೇರಳ ಈಗ ಉಗ್ರ ಆಮೂಲಾಗ್ರೀಕರಣದ ಹೊಸ ಕೂಪವಾಗಿದೆ ಎಂದು ಮಾಳವಿಯಾ ಟ್ವೀಟ್ ಮಾಡಿದ್ದಾರೆ.

ಘಟನೆಯನ್ನು ಖಂಡಿಸಿರುವ ಕೇರಳ ಬಿಜೆಪಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 'ಜಾತ್ಯತೀತ' ಎಂದು ಕರೆಯುವ ಪಕ್ಷದ ಕ್ರಮಗಳಿಗೆ ಹೊಣೆಗಾರರಾಗಬೇಕು ಎಂದು ಹೇಳಿದೆ. ಮುಸ್ಲಿಂ ಯೂತ್ ಲೀಗ್ ಪ್ರಧಾನ ಕಾರ್ಯದರ್ಶಿ ಪಿ.ಕೆ.ಫಿರೋಜ್ ಕೂಡ ಹೇಳಿಕೆ ನೀಡಿದ್ದಯ, ಸಂಘಟನೆಯ ಸಿದ್ಧಾಂತಕ್ಕೆ ವಿರುದ್ಧವಾದ ಮತ್ತು ಸಮಾಜದಲ್ಲಿ ಒಡಕು ಮೂಡಿಸುವಂತಹ ಘೋಷಣೆಗಳನ್ನು ಕೂಗುವುದು ಕ್ಷಮಿಸಲಾಗದ ತಪ್ಪಾಗಿದೆ. ಈ ಹಿನ್ನೆಲೆಯಲ್ಲಿ ಅಬ್ದುಲ್ ಸಲಾಂ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು. ಆದರೆ, ಹೆಚ್ಚಿನ ಜನರು ಘೋಷಣೆ ಕೂಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

"We will hang Hindus inside the temple & burn them alive".

Indian Union Muslim League - Rahul Gandhi's 'Secular Allies' have raised genocidal slogans against Hindus.

IUML, responsible for the partition of India, is also part of Rahul Gandhi's I.N.D.I.A!

Perhaps, this is what… pic.twitter.com/nLQpsz0ia1

— BJP Karnataka (@BJP4Karnataka)

ದೇಶ ವಿಭಜನೆಗೆ ಕಾರಣವಾದ ಮುಸ್ಲಿಂ ಲೀಗ್‌ ರಾಹುಲ್‌ ಗಾಂಧಿ ಪಾಲಿಗೆ ಜಾತ್ಯಾತೀತ ಪಕ್ಷ!

ಕಳೆದ ವರ್ಷ ಆಲಪ್ಪುಳದಲ್ಲಿ ಸಿಎಎ ವಿರೋಧಿ ಸಮಾವೇಶದಲ್ಲಿ ಪಿಎಫ್‌ಐ ಸದಸ್ಯರ ಗುಂಪು ಪ್ರಚೋದನಕಾರಿ ಘೋಷಣೆಗಳನ್ನು ಎತ್ತಿದಾಗ ಮುಸ್ಲಿಂ ಲೀಗ್ ಮತ್ತು ಯೂತ್ ಲೀಗ್ ಬಲವಾದ ನಿಲುವನ್ನು ತೆಗೆದುಕೊಂಡಿತ್ತು. ಆರೆಸ್ಸೆಸ್ ವಿರುದ್ಧ ಗುರಿಯಾಗಿದ್ದರೂ ಅಂತಹ ಘೋಷಣೆಗಳನ್ನು ಎತ್ತಬಾರದು ಎಂದು ಫಿರೋಜ್ ಹೇಳಿದ್ದರು. 'ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ತಮ್ಮ ಅಂತ್ಯಕ್ರಿಯೆಗೆ ಸಿದ್ಧರಾಗಿರಿ' ಎಂದು ಪುಟ್ಟ ಮಗು ಹೇಳಿದ್ದ ಘೋಷಣೆಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿತ್ತು.

Tap to resize

Latest Videos

Lord Ganesha ಪುರಾಣ ಕತೆಯಷ್ಟೇ, ದೇವರಲ್ಲ: ಹಿಂದೂಗಳ ನಂಬಿಕೆ ಅಪಹಾಸ್ಯ ಮಾಡಿದ ಕೇರಳ ಸ್ಪೀಕರ್ ವಿರುದ್ಧ ಕೇಸ್‌

ರಾಹುಲ್‌ ಗಾಂಧಿ ಅವರ ಜಾತ್ಯಾತೀಯ ಮಿತ್ರ ಪಕ್ಷ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ ಕೇರಳದಲ್ಲಿ ನರಮೇಧಕ್ಕೆ ಕಾರಣವಾಗುವಂಥ ಘೋಷಣೆಗಳನ್ನು ಕೂಗಿದೆ. ಐಯುಎಂಎಲ್‌ ದೇಶದ ವಿಭಜನೆಗೆ ಕಾರಣವಾಗಿರುವ ಪಕ್ಷ. ಈಗ ರಾಹುಲ್‌ ಗಾಂಧಿಯವರ ಐಎನ್‌ಡಿಐಎ ಅವರ ಮಿತ್ರಪಕ್ಷವೂ ಆಗಿದೆ. ಬಹುಶಃ ರಾಹುಲ್‌ ಗಾಂಧಿ ಅವರ ಮೊಹಬ್ಬತ್‌ ಕೀ ದುಖಾನ್‌ ಇದೇ ಇರಬಹುದು ಎಂದು ಬಿಜೆಪಿ ಕರ್ನಾಟಕ ಟ್ವೀಟ್‌ ಮಾಡಿದೆ.

click me!