ಕೇದಾರನಾಥಕ್ಕೆ ತೆರಳಲು ಮೋದಿ ನೆರವು ಕೋರಿದ ಭೀಮಾಶಂಕರ ಸ್ವಾಮೀಜಿ!

By Kannadaprabha NewsFirst Published Apr 15, 2020, 11:45 AM IST
Highlights
ಕೇದಾರನಾಥಕ್ಕೆ ತೆರಳಲು ಮೋದಿ ನೆರವು ಕೋರಿದ ಕನ್ನಡಿಗ ಮುಖ್ಯ ಅರ್ಚಕ| ಕರ್ನಾಟಕ ಮೂಲದ ಶ್ರೀ ಭೀಮಾಶಂಕರ ಶಿವಾಚಾರ್ಯರು, ಮಹಾರಾಷ್ಟ್ರದ ನಾಂದೇಡ್‌ ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದಾರೆ
ಡೆಹ್ರಾಡೂನ್(ಏ.15)‌: ಉತ್ತರಾಖಂಡ್‌ನ ಪ್ರಸಿದ್ಧ ಕೇದಾರನಾಥ ದೇವಸ್ಥಾನದ ಮುಖ್ಯ ಅರ್ಚಕ, ಕರ್ನಾಟಕ ಮೂಲದ ಶ್ರೀ ಭೀಮಾಶಂಕರ ಶಿವಾಚಾರ್ಯರು, ಮಹಾರಾಷ್ಟ್ರದ ನಾಂದೇಡ್‌ ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ, ಏಪ್ರಿಲ್‌ 29ರಂದು ಕೇದಾರನಾಥ ದೇಗುಲದ ಬಾಗಿಲುಗಳು ತೆರೆಯುವ ವೇಳೆಗೆ ದೇವಸ್ಥಾನಕ್ಕೆ ತೆರಳಲು ನೆರವಾಗಲು ಕೋರಿ ಮುಖ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.

ದೇವಸ್ಥಾನದ ಬಾಗಿಲು ತೆರೆಯುವ ವೇಳೆ ಹಾಗೂ ಬಂಗಾರದ ಕಲಶದ ಮೆರವಣಿಗೆ ವೇಳೆ ದೇಗುಲದ ಮುಖ್ಯ ಅರ್ಚಕ ಇರಲೇಬೇಕು ಎಂಬುದು ಶತಮಾನಗಳ ಹಿಂದಿನಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ, ರಸ್ತೆ ಮಾರ್ಗವಾಗಿ ಕೇದಾರನಾಥ ದೇವಸ್ಥಾನಕ್ಕೆ ಹೋಗಲು ತನಗೆ ಮತ್ತು ತನ್ನ ಜತೆಗಿನ ಇತರ ನಾಲ್ವರಿಗೆ ವಿಶೇಷ ಅವಕಾಶ ಕಲ್ಪಿಸಬೇಕು ಎಂದು ಅವರು ಕೋರಿದ್ದಾರೆ.

ಲಾಕ್‌ಡೌನ್, ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ: ಏನಿದೆ ಏನಿಲ್ಲ?

ಈ ನಡುವೆ ಶ್ರೀ ಭೀಮಾಶಂಕರ ಶಿವಾಚಾರ್ಯರು ಮತ್ತು ಅವರ ನಾಲ್ವರು ಜೊತೆಗಾರರನ್ನು ಹೆಲಿಕಾಪ್ಟರ್‌ ಮೂಲಕ ಏರ್‌ಲಿಫ್ಟ್‌ ಮಾಡುವ ಬಗ್ಗೆಯೂ ಉತ್ತರಾಖಂಡ ಸರ್ಕಾರ ಚಿಂತನೆ ನಡೆಸಿದೆ.
click me!