
ನವದೆಹಲಿ: ಕೆಂಪುಕೋಟೆ ಸಮೀಪದ ಕಾರ್ ಬಾಂಬ್ ಸ್ಫೋಟಕ್ಕೆ ಆತ್ಮಾಹುತಿ ದಾಳಿಕೋರ ಡಾ। ಉಮರ್ ನಬಿ ಬಳಸಿದ್ದ ‘ಹ್ಯುಂಡೈ ಐ20’ ಕಾರು ಖರೀದಿಗೆ ಸಹಕರಿಸಿದ್ದ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ. ಇದು ಈ ಪ್ರಕರಣದ ಮೊದಲ ಬಂಧನವಾಗಿದೆ.
ಬಂಧಿತನ ಹೆಸರು ಅಮೀರ್ ರಷೀದ್ ಅಲಿ. ಈತ ಜಮ್ಮು ಕಾಶ್ಮೀರದ ಪಾಂಪೋರ್ ಬಳಿಯ ಸಂಬೂರ ಗ್ರಾಮದ ನಿವಾಸಿ.
‘ದಾಳಿಗೆ ಬಳಸಲಾದ ಕಾರು ಬಂಧಿತ ಅಲಿ ಹೆಸರಲ್ಲಿ ನೋಂದಣಿಯಾಗಿತ್ತು. ಆತ ಉಗ್ರರೊಂದಿಗೆ ದೆಹಲಿಗೆ ತೆರಳಿ ಕಾರು ಖರೀದಿಯಲ್ಲಿ ಸಹಕರಿಸಿದ್ದ. ದೆಹಲಿ ದಾಳಿಗಾಗಿ ಕಾರಿನಲ್ಲಿ ಸಾಗಿಸಬಹುದಾದ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಇದೇ ಕಾರಿನಲ್ಲಿ ಇರಿಸಲಾಗಿತ್ತು’ ಎಂದೂ ಹೇಳಿದ್ದಾರೆ.
ದಾಳಿಯಾದ ದಿನವೇ ಈತ, ಹೊಸ ಕಾರು ಖರೀದಿದಾರರಿಗೆ ಶೋರೂಂಗಳು ನೀಡುವ ‘ಬೃಹತ್ ಸಾಂಕೇತಿಕ ಕೀ’ ಹಿಡಿದು ಅದರ ಮುಂದೆ ನಿಂತ ಫೋಟೋ ವೈರಲ್ ಆಗಿತ್ತು.
ಇದರೊಂದಿಗೆ ಅಧಿಕಾರಿಗಳು, ಆತ್ಮಾಹುತಿ ದಾಳಿಕೋರ ಡಾ। ಉಮರ್ ನಬಿಗೆ ಸೇರಿದ ಮತ್ತೊಂದು ಕಾರ್ ಅನ್ನು ಜಪ್ತಿ ಮಾಡಿದ್ದಾರೆ. ಅದರ ಪಡೆದು ಪರಿಶೀಲಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ