
ನವದೆಹಲಿ(ಮೇ.19) ಭಾರತದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರ ಹಾಗೂ ಇತರರ ಬಂಧನದಿಂದ ಪಾಕಿಸ್ತಾನದ ಅತಿದೊಡ್ಡ ಷಡ್ಯಂತ್ರ ಒಂದು ಬಯಲಾಗಿದೆ. ಪಾಕಿಸ್ತಾನದ ಐಎಸ್ಐಗೆ ಭಾರತದಲ್ಲಿ ಗೂಢಚರ್ಯೆ ಮಾಡುತ್ತಿದ್ದ ಜ್ಯೋತಿ ಮಲ್ಹೋತ್ರ ಒಂದೊಂದೆ ಕುತಂತ್ರಗಳು, ದೇಶಕ್ಕೆ ಮಾಡಿದ ದ್ರೋಹಗಳು ವಿಚಾರಣೆಯಿಂದ ಬಯಲಾಗುತ್ತಿದೆ. ಪಾಕಿಸ್ತಾನ ಹೈಕಮಿಷನ್, ಐಎಸ್ಐ ಅಧಿಕಾರಿಗಳು, ಎಜೆಂಟ್, ಪಾಕ್ ಉಗ್ರರ ಜೊತೆ ನಿಕಟ ಸಂಪರ್ಕ ಹೊಂದಿದ್ದರು ಅನ್ನೋದು ವಿಚಾರಣೆ ವೇಳೆ ಬಯಲಾಗಿದೆ. ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಬಯಲಾಗಿದೆ. ಪೆಹೆಲ್ಗಾಂ ಉಗ್ರ ದಾಳಿ ಬಳಿಕ ಭಾರತ ಶೋಕಾಚರಣೆಯಲ್ಲಿ ಮುಳುಗಿದ್ದರೆ, ದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಸಂಭ್ರಮಾಚರಣೆ ಮಾಡಿತ್ತು. ಈ ವೇಳೆ ಹೈಕಮಿಷನ್ ಕಚೇರಿಗೆ ಕೇಕ್ ಹಂಚಿದ ವ್ಯಕ್ತಿ ಭಾರತೀಯ ಮಾಧ್ಯಮದಲ್ಲಿ ಸೆರೆಯಾಗಿದ್ದ. ಇದೀಗ ಇದೇ ವ್ಯಕ್ತಿ ಜೊತೆ ಈ ಜ್ಯೋತಿ ಮಲ್ಹೋತ್ರ ಅತ್ಮೀಯವಾಗಿ ಕಾಣಿಸಿಕೊಂಡಿರುವ ವಿಡಿಯೋಗಳು ಹೊರಬಂದಿದೆ.
ಪೆಹಲ್ಗಾಂ ಉಗ್ರ ದಾಳಿ ಸಂಭ್ರಮಿಸಿದವರ ಜೊತೆ ಜ್ಯೋತಿ ಮಲ್ಹೋತ್ರ
ಪೆಹಲ್ಗಾಂ ಉಗ್ರ ದಾಳಿಯಲ್ಲಿ ಅಮಾಯಕ ಪ್ರವಾಸಿಗರು ಬಲಿಯಾಗಿದ್ದರು. ಹಿಂದೂಗಳನ್ನು ಟಾರ್ಗೆಟ್ ಮಾಡಿ ನಡೆದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಈ ದಾಳಿ ಭಾರತೀಯ ಆಕ್ರೋಶ ಹೆಚ್ಚಿಸಿತ್ತು. ಜೊತೆಗೆ ಇಡೀ ದೇಶವೇ ಶೋಕಾಚರಣೆಯಲ್ಲಿ ಮುಳುಗಿತ್ತು. ಆಘಾತದಿಂದ ಇನ್ನೂ ಚೇತರಿಸಿಕೊಂಡಿರಲಿಲ್ಲ. ಇತ್ತ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಸಂಭ್ರಮಾಚರಣೆ ಆರಂಭಗೊಂಡಿತ್ತು. ಪಾಕಿಸ್ತಾನ ಹೈಕಮಿಷನ್ ಅಧಿಕಾರಿಗಳನ್ನು ಕರೆಸಿ ಛೀಮಾರಿ ಹಾಕಿದ ಭಾರತ, ತಕ್ಷಣವೇ ದೇಶ ತೊರೆಯುವಂತೆ ವಾರ್ನಿಂಗ್ ಮಾಡಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಹೈಕಮಿಷನ್ ಕಚೇರಿಗೆ ಪಾಕಿಸ್ತಾನ ಅಧಿಕಾರಿಯೊಬ್ಬ ಕೇಕ್ ಹಂಚಿದ್ದು. ಇದು ಭಾರತೀಯ ಮಾಧ್ಯಮಗಳಲ್ಲಿ ಸೆರೆಯಾಗಿತ್ತು. ಪೆಹಲ್ಗಾಂ ಉಗ್ರ ದಾಳಿ ಹಾಗೂ ಭಾರತೀಯ ಅಮಾಯಕರ ಸಾವನ್ನು ಸಂಭ್ರಮಿಸಿದ್ದ ಪಾಕಿಸ್ತಾನದ ಇದೇ ವ್ಯಕ್ತಿ ಜೊತೆಗೆ ಜ್ಯೋತಿ ಮಲ್ಹೋತ್ರ ಕಾಣಿಸಿಕೊಂಡಿದ್ದಾರೆ. ಈ ಕುರಿತ ವಿಡಿಯೋ, ಫೋಟೋಗಳು ಬಹಿರಂಗವಾಗಿದೆ.
ಪೆಹಲ್ಗಾಂ ದಾಳಿಗೂ ಮೊದಲು ಭೇಟಿ ನೀಡಿದ್ದ ಜ್ಯೋತಿ
ಪೆಹಲ್ಗಾಂ ಉಗ್ರ ದಾಳಿಗೂ ಮೊದಲು ಜ್ಯೋತಿ ಮಲ್ಹೋತ್ರ ಇಲ್ಲಿಗೆ ಭೇಟಿ ನೀಡಿದ್ದರು. ಇಲ್ಲಿನ ಸ್ಥಳ, ಪ್ರವಾಸಿ ತಾಣ, ಭದ್ರತೆ ಕುರಿತು ವಿಡಿಯೋ ಮಾಡಿದ್ದರು. ಹೆಸರಿಗೆ ವಿಡಿಯೋ ಮಾಡಿದ್ದರು. ಪೆಹಲ್ಗಾಂ ಕುರಿತ ಸಂಪೂರ್ಣ ಮಾಹಿತಿಯನ್ನು ಪಾಕಿಸ್ತಾನ ಐಎಸ್ಐಗೆ ಹಂಚಿರುವುದು ತಿಳಿಯಲು ತನಿಖಾ ಸಂಸ್ಥೆ ಬೇಕಿಲ್ಲ. ಪಾಕಿಸ್ತಾನದ ಐಎಸ್ಐ, ಹೈಕಮಿಷನ್ ಸೇರಿದಂತೆ ಹಲವರ ಜೊತೆ ಆತ್ಮೀಯ ಸಂಬಂಧ ಇಟ್ಟುಕೊಂಡಿರುವ ಜ್ಯೋತಿ ಮಲ್ಹೋತ್ರ ಮುಖಾವಡ ಕಳಚುತ್ತಿದೆ.
ಜ್ಯೋತಿ ಮಲ್ಹೋತ್ರ ಇತ್ತೀಚೆಗೆ ಪಾಕಿಸ್ತಾನದ ಹಲವು ಕಡೆ ಭೇಟಿ ನೀಡಿದ್ದರು. ಈ ಪೈಕಿ ಭಾರತದ ಆಪೇಶನ್ ಸಿಂಧೂರ್ ನಡೆಸಿದ 9 ಉಗ್ರ ನೆಲೆಗಳ ಬಹತೇಕ ಕಡೆ ಜ್ಯೋತಿ ಮಲ್ಹೋತ್ರ ಭೇಟಿ ನೀಡಿದ್ದಾರೆ. ಇಲ್ಲಿನ ಬೇಟಿಯ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಪೆಹಲ್ಗಾಂ ದಾಳಿ, ಈ ದಾಳಿಗೂ ಮೊದಲು ಈ ಸ್ಥಳಕ್ಕೆ ಭೇಟಿ, ಇನ್ನು ಈ ದಾಳಿಗೆ ನೆರವು ನೀಡಿದ ಉಗ್ರರ ನೆಲೆಗಳಿಗೂ ಜ್ಯೋತಿ ಮಲ್ಹೋತ್ರ ಭೇಟಿ ನೀಡಿರುವುದು ಅನುಮಾನ ಹೆಚ್ಚಿಸಿದ್ದು ಮಾತ್ರವಲ್ಲ, ಈಕೆಯ ಕೈವಾಡದ ಪ್ರಮಾಣ ಅದೆಷ್ಟಿದೆ ಅನ್ನೋ ಅಧಿಕೃತ ಮಾಹಿತಿ ಬಯಲಾಗಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ