ಚೀನಾಗೆ ಅದರದ್ದೇ ಭಾಷೆಯಲ್ಲಿ ಸಿಗಲಿದೆ ಉತ್ತರ, ITBPಯಿಂದ ವಿಶೇಷ ತಯಾರಿ!

By Suvarna NewsFirst Published Jul 19, 2020, 2:37 PM IST
Highlights

ಚೀನಾದ ದುರಹಂಕಾರಿ ನಡೆ| ಗಡಿಯಲ್ಲಿ ನರಿ ಬುದ್ಧಿ ತೋರಿಸುತ್ತಿರುವ ಡ್ರ್ಯಾಗನ್| ಚೀನಾಗೆ ಬುದ್ಧಿ ಕಲಿಸಲು ಭಾರತೀಯ ಯೋಧರ ದಿಟ್ಟ ನಡೆ| 

ನವದೆಹಲಿ(ಜು.19): ಚೀನಾದ ದುರಹಂಕಾರಿ ನಡೆಗೆ ಭಾರತ ತಕ್ಕ ಉತ್ತರ ನೀಡಿದೆ. ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆ ಬಳಿಕ ಭಾರತ ಡ್ರ್ಯಾಗನ್‌ಗೆ ಪಾಠ ಕಲಿಸಲು ಯಾವುದೇ ಅವಕಾಶ ಬಿಟ್ಟಿಲ್ಲ. ಸದ್ಯ ITBP ಯೋಧರೂ ಚೀನಾಗೆ ಅದರದ್ದೇ ಶೈಲಿಯಲ್ಲಿ ಉತ್ತರಿಸಲು ಸಜ್ಜಾಗಿದ್ದಾರೆ. ITBPಯ 90 ಸಾವಿರ ಯೋಧರಿಗೆ ಮ್ಯಾಂಡರಿನ್ ಭಾಷೆಯಲ್ಲಿ ಕಲಿಸುವ ತಯಾರಿಯಲ್ಲಿದೆ. ಸದ್ಯ ಅವರಿಗೆ ಆಧುನಿಕ ಮ್ಯಾಂಡರಿನ್ ಭಾಷೆಯ ರತಬಢತಿ ನೀಡಲಾಗುತ್ತಿದೆ. ಈವರೆಗೂ ಗಡಿಯಲ್ಲಿ ಚೀನಾದ ಸೈನಿಕರಿಗೆ ತಮ್ಮ ಮಾತುಗಳನ್ನು ಅರ್ಥೈಸಲು ಅನೇಕ ಸಮಸ್ಯೆಗಳನ್ನು ನಮ್ಮ ಸೈನಿಕರು ಎದುರಿಸುತ್ತಿದ್ದರು. ಅಲ್ಲದೇ ಇದಕ್ಕಾಗಿ ಸೈನಿಕರು ಪೋಸ್ಟರ್‌ಗಳನ್ನೂ ಬಳಸುತ್ತಿದ್ದರು.

ಆರಂಭದಲ್ಲಿ ITBP ಮಸೂರಿಯ ಅಕಾಡೆಮಿಯಲ್ಲಿ ಈ ಕೋರ್ಸ್‌ ಆರಂಭಿಸಲು ಸಂಪೂರ್ಣ ತಯಾರಿ ನಡೆಸಿದೆ. ಆದರೆ ಕೊರೋನಾದಿಂದಾಗಿ ಇದು ಈವರೆಗೂ ಆರಂಭವಾಗಿಲ್ಲ. ಈ ಕೋರ್ಡ್‌ ಮೂಲಕ ಗಡಿಯಲ್ಲಿ ಉತ್ತಮ ಸಂವಾದ ಮೂಡಿಸುವುದಾಗಿದೆ. ಐಟಿಬಿಪಿಯ ಪ್ರತಿಯೊಬ್ಬ ಸಿಬ್ಬಂದಿಯೂ ಈ ಕೋರ್ಟ್‌ ಪೂರೈಸಲೇ ಬೇಕು. ಈ ಹಿಂದೆಯೂ ಕೆಲ ಯೋಧರಿಗೆ ಈ ಕೋರ್ಸ್‌ ನೀಡಲಾಗುತ್ತಿತ್ತು, ಆದರೆ ಬಹಳ ಕಡಿಮೆ ಮಂದಿಗೆ ಕಲಿಸಿ ಕೊಡಲಾಗುತ್ತಿತ್ತು. ಆದರೀಗ ಇದು ಹೊಸ ಸ್ವರೂಪ ಪಡೆದುಕೊಂಡಿದ್ದು ಆಧುನಿಕ ಮ್ಯಾಂಡರಿನ್ ಭಾಷೆ ಕಲಿಸಲು ಸಂಪೂರ್ಣ ತಯಾರಿ ಆರಂಭವಾಗಿದೆ.

ಈಗ ಸಂವಾದ ಹೇಗೆ ನಡೆಯುತ್ತೆ?

ಒಂದು ವೇಳೆ ಚೀನಾ ಸೇನೆ ಬಡಿದಾಟ ಆರಂಭಿಸಿದರೆ ಐಟಿಬಿಪಿ ಕೆಂಪು ಬಣ್ಣದ ಪೋಸ್ಟರ್ ತೋರಿಸುಉತ್ತದೆ. ಇದರಲ್ಲಿ ಗೋ ಬ್ಯಾಕ್ ಎಂದು ಬರೆದಿರುತ್ತಾರೆ. ಆದರೆ ಚೀನಾ ಭಾಷೆಯಲ್ಲಿ ತರಬೇತಿ ಪಡೆದ ಬಳಿಕ ಮಾತುಕತೆ ನಡೆಸಲು ಸೈನಿಕರಿಗೆ ಸುಲಭವಾಗಲಿದೆ ಹಾಗೂ ನೇರವಾಗಿ ಹಿಂದೆ ಸರಿಯಲು ಹೇಳಬುದು. ಮ್ಯಾಂಡರಿನ್ ಭಾಷೆಯಲ್ಲಿ ನೀ ಹಾವೋ ಎಂದರೆ ನಮಸ್ಕಾರ ಹಾಗೂ ಹುವೂ ಕೂ ಎಂದರೆ ಹಿಂದೆ ಸರಿಯಿರಿ ಎಂದು ಅರ್ಥ.

ಚೀನೀ ಸೈನಿಕರು ತಮ್ಮ ಭಾಷೆಯಲ್ಲೇ ಪರಸ್ಪರ ಮಾತನಾಡಿಕೊಳ್ಳುತ್ತಾರೆ. ಹೀಗಿರುವಾಗ ಈ ಭಾಷೆ ಭಾರತೀಯ ಯೋಧರಿಗೂ ಅರ್ಥವಾಗುವುದಿಲ್ಲ. ಹೀಗಾಗಿ ಕಮ್ಯುನಿಕೇಷನ್ ಗ್ಯಾಪ್ ಏರ್ಪಡುತ್ತದೆ ಹಾಗೂ ವಾಸ್ತವ ವಿಚಾರ ಅಧಿಕಾರಿಗಳಿಗೂ ಅರ್ಥವಾಗುವುದಿಲ್ಲ.

click me!