ಇಂದು ಇಸ್ರೋ ವರ್ಷದ ಮೊದಲ ಉಡಾವಣೆ: 15 ಉಪಗ್ರಹ ನಭಕ್ಕೆ

Published : Jan 12, 2026, 08:10 AM IST
PSLV C62 will carry EOS N1 and 15 co passenger satellites

ಸಾರಾಂಶ

ಇಸ್ರೋ ಈ ವರ್ಷದ ಮೊದಲ ಉಪಗ್ರಹ ಉಡಾವಣೆಗೆ ಸಜ್ಜಾಗಿದ್ದು, ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಡ್ರೋನ್‌ಗಳು ಪತ್ತೆಯಾಗಿ ಆತಂಕ ಸೃಷ್ಟಿಸಿವೆ. ಮತ್ತೊಂದೆಡೆ, ಎಐ ಬಳಸಿ ಅಶ್ಲೀಲತೆ ಪ್ರಸಾರ ಮಾಡಿದ ಆರೋಪದ ಮೇಲೆ ಎಕ್ಸ್ (ಟ್ವಿಟರ್) ತಪ್ಪೊಪ್ಪಿಕೊಂಡಿದೆ.

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಈ ವರ್ಷದ ಮೊದಲ ಉಪಗ್ರಹವನ್ನು ಉಡಾಯಿಸಲು ಸಜ್ಜಾಗಿದೆ. ಭಾನುವಾರ ಇಸ್ರೋದ ಪಿಎಲ್‌ಎಲ್‌ವಿ -ಸಿ62 ರಾಕೆಟ್‌, ಡಿಆರ್‌ಇಒದ ವ್ಯೂಹಾತ್ಮಕ ಉದ್ದೇಶಗಳಿಗಾಗಿ ಅಭಿವೃದ್ಧಿಪಡಿಸಲಾಗಿರುವ ಇಒಎಸ್‌- ಎನ್‌1 ಉಪಗ್ರಹ ಹಾಗೂ 14 ವಿವಿಧ ದೇಶಗಳ ಉಪಗ್ರಹ ಹೊತ್ತು ನಭಕ್ಕೆ ಸಾಗಲಿದೆ.

ಈ ಹಿಂದೆ ನಿಗದಿಯಾಗಿದ್ದ ಜ.12ರ 10:17ರ ಬದಲಿಗೆ 10:18ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ನಭಕ್ಕೆ ಜಿಗಿಯಲಿದೆ. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ (ಎನ್‌ಎಸ್‌ಐಎಲ್‌) ಈ ಯೋಜನೆ ಕೈಗೊಂಡಿದೆ. ಲಾಂಚ್‌ ಆದ 17 ನಿಮಿಷಕ್ಕೆ ಉಪಗ್ರಹಗಳು ಕಕ್ಷೆ ಸೇರಲಿವೆ ಎಂದು ಇಸ್ರೋ ತಿಳಿಸಿದೆ.

ಗ್ರೋಕ್‌ ಅಶ್ಲೀಲತೆ ಅವಾಂತರ: ಎಕ್ಸ್‌ ತಪ್ಪೊಪ್ಪಿಗೆ, 600 ಖಾತೆ ಡಿಲೀಟ್‌

‘ಎಲಾನ್‌ ಮಸ್ಕ್‌ ಒಡೆತನ ಟ್ವೀಟರ್‌ನ (ಎಕ್ಸ್) ಎಐ ಆವೃತ್ತಿಯಾದ ‘ಗ್ರೋಕ್‌’ನಲ್ಲಿ ಎಐ ಬಳಸಿಕೊಂಡು ಅಶ್ಲೀಲತೆ ಪ್ರಸಾರ ಮಾಡಲಾಗುತ್ತಿದೆ’ ಎಂದು ಭಾರತ ಎಚ್ಚರಿಕೆ ನೀಡಿದ ಬೆನ್ನಲ್ಲೇ ಎಕ್ಸ್‌ ತನ್ನ ತಪ್ಪೊಪ್ಪಿಕೊಂಡಿದೆ ಹಾಗೂ 3500 ಪೋಸ್ಟ್‌ಗಳನ್ನು ಬ್ಲಾಕ್ ಮಾಡಿ, 600 ಖಾತೆಗಳನ್ನು ಅಳಿಸಿ ಹಾಕಿದೆ.

‘ಎಕ್ಸ್ ತನ್ನ ವೇದಿಕೆಯಲ್ಲಿ ಅಶ್ಲೀಲತೆ ಪ್ರಸಾರದ ಬಗ್ಗೆ ತಪ್ಪೊಪ್ಪಿಕೊಂಡಿದೆ. ಮಾತ್ರವಲ್ಲದೇ ಭವಿಷ್ಯದಲ್ಲಿ ತನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲತೆ ಪ್ರಸಾರ ಮಾಡುವುದಿಲ್ಲ. ಭಾರತದ ಕಾನೂನುಗಳನ್ನು ಪಾಲಿಸುವುದಾಗಿ ಹೇಳಿಕೊಂಡಿದೆ ಎಂದು ಹೇಳಿದೆ’ ಎಂದು ಮೂಲಗಳು ಹೇಳಿವೆ.

ಕಳೆದ ವಾರವಷ್ಟೇ ಗ್ರೋಕ್‌ ಬಳಸಿಕೊಂಡು ಹಲವಾರು ವಿಕೃತರು ತಮಗೆ ಬೇಕಾದ ಹುಡುಗಿಯರ ಚಿತ್ರಗಳಿಗೆ ಬಿಕಿನಿ ಹಾಕಿರುವ ಘಟನೆಗಳು ನಡೆದಿದ್ದವು. ಇದರ ಬೆನ್ನಲ್ಲೇ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ಗ್ರೋಕ್‌ ಮತ್ತು ಎಕ್ಸ್‌ನಲ್ಲಿ ಎಐ ಬಳಸಿಕೊಂಡು ಅಶ್ಲೀಲತೆಯನ್ನು ಪ್ರಸಾರ ಮಾಡಲಾಗುತ್ತಿದ್ದು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಸಿತ್ತು.

ಅತ್ಯಾ*ಚಾರ ಆರೋಪಿ ಕೇರಳ ಶಾಸಕ ಬಂಧನ

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಉಚ್ಚಾಟಿತ ಶಾಸಕ ರಾಹುಲ್‌ ಮಮ್‌ಕೂಟತಿಲ್ ಅವರನ್ನು ಶನಿವಾರ ಮಧ್ಯರಾತ್ರಿ ಕೇರಳ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ತಂಡ ಶನಿವಾರ ಮಧ್ಯರಾತ್ರಿ 1 ಗಂಟೆಗೆ ಪಾಲಕ್ಕಾಡ್‌ನ ಹೋಟೆಲ್‌ನಲ್ಲಿದ್ದ ರಾಹುಲ್‌ರನ್ನು ವಶಕ್ಕೆ ಪಡೆಯಿತು. ಮುಂಜಾನೆ 5:30ಕ್ಕೆ ಪತನಂತಿಟ್ಟದ ಪೊಲೀಸ್‌ ಕ್ಯಾಂಪ್‌ಗೆ ಕರೆದೊಯ್ಯಲಾಯಿತು.

ರಾಹುಲ್‌ ಮೇಲೆ ಇತ್ತೀಚೆಗಷ್ಟೆ 3ನೇ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಪ್ರಸ್ತುತ ಕೆನಡಾವಾಸಿಯಾಗಿರುವ, ಪತನಂತಿಟ್ಟದ ಮಹಿಳೆಯೊಬ್ಬರು ರಾಹುಲ್‌ ತನ್ನನ್ನು ಮದುವೆಯಾಗುತ್ತೇನೆಂದು ನಂಬಿಸಿ, ಗರ್ಭವತಿಯಾದ ಬಳಿಕ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹೇರಿದ್ದರು. ಜೊತೆಗೆ ಆಗಾಗ ತನ್ನಿಂದ ಹಣವನ್ನೂ ತೆಗೆದುಕೊಂಡಿದ್ದರು ಎಂದು ದೂರು ನೀಡಿದ್ದರು. ಅದರ ಬೆನ್ನಲ್ಲೇ ಪೊಲೀಸರು ರಾಹುಲ್‌ರನ್ನು ಬಂಧಿಸಿದ್ದಾರೆ.

ಈಗಾಗಲೇ ಅವರ ಮೇಲಿರುವ 2 ಅತ್ಯಾ*ಚಾರ ಪ್ರಕರಣಗಳ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿದೆ.

ನಾಯಿಯ ಹೆಸರನ್ನು ರಾಮ ಎಂದ ಶಿಕ್ಷಕಿ ಸಸ್ಪೆಂಡ್

ಪ್ರಶ್ನೆ ಪತ್ರಿಕೆಯೊಂದರಲ್ಲಿ ನಾಯಿಯ ಹೆಸರಿಗೆ ಸಂಬಂಧಿಸಿದ ಬಹುಆಯ್ಕೆ ಪ್ರಶ್ನೆಯಲ್ಲಿ ರಾಮ ಎಂದು ಉಲ್ಲೇಖಿಸುವ ಮೂಲಕ ಆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದ ಛತ್ತೀಸ್‌ಗಢದ ಶಿಕ್ಷಕಿಯೊಬ್ಬರು ವಿವಾದ ಸೃಷ್ಟಿಸಿದ್ದಾರೆ. ಈ ಸಂಬಂಧ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ.

ರಾಯ್‌ಪುರದ ಸರ್ಕಾರಿ ಶಾಲೆಗಳಲ್ಲಿ ನಡೆದ ಮಧ್ಯವಾರ್ಷಿಕ ಪರೀಕ್ಷೆ 4ನೇ ತರಗತಿಯ ಇಂಗ್ಲೀಷ್‌ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ‘ಮೋನಾಳ ನಾಯಿಯ ಹೆಸರೇನು?’ ಎಂದು ಕೇಳಲಾಗಿತ್ತು. ಇದಕ್ಕೆ ರಾಮ ಸೇರಿ 4 ಆಯ್ಕೆ ನೀಡಲಾಗಿತ್ತು. ಸದ್ಯ ಇದೇ ವಿಚಾರ ವಿವಾದಕ್ಕೆ ಕಾರಣವಾಗಿದೆ. ಭಗವಾನ್‌ ರಾಮ ಹಿಂದೂಗಳ ಪವಿತ್ರ ದೇವನಾಗಿರುವುದರಿಂದ ಆ ಹೆಸರನ್ನು ಉಲ್ಲೇಖಿಸಿದ್ದಕ್ಕೆ ಹಿಂದೂ ಸಂಘಟನೆಗಳು ಕಿಡಿಕಾರಿವೆ.

ಹೀಗಾಗಿ ಶಿಕ್ಷಕಿ ಶಿಖಾ ಸೋನಿ ಅವರನ್ನು ಅಮಾನತುಗೊಳಿಸಿದೆ. ಶಿಕ್ಷಕಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ‘ ರಾಮು ಎಂಬ ಪದವಾಗಬೇಕಿತ್ತು. ಆದರೆ ಯು ಅಕ್ಷರ ಬಿಟ್ಟು ಹೋಗಿ ರಾಮ ಎಂದು ಆಗಿದೆ. ಪರಿಶೀಲನೆ ವೇಳೆ ಗಮನಕ್ಕೆ ಬರಲಿಲ್ಲ ಎಂದಿದ್ದಾರೆ. ಧಾರ್ಮಿಕ ಭಾವನೆಗಳಿ ಧಕ್ಕೆ ತರುವ ಉದ್ದೇಶ ನನಗಿರಲಿಲ್ಲ’ ಎಂದಿದ್ದಾರೆ.

ಸೋನಿಯಾ ಆರೋಗ್ಯ ಚೇತರಿಕೆ: ಗಂಗಾರಾಮ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌

ಉಸಿರಾಟ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜ.5ರಂದು ಇಲ್ಲಿನ ಶ್ರೀ ಗಂಗಾರಾಮ್‌ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರು ಭಾನುವಾರ ಬಿಡುಗಡೆಯಾಗಿದ್ದಾರೆ.

ಈ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದು, ‘ಸೋನಿಯಾ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದರು ಹಾಗೂ ಚೇತರಿಕೆಯನ್ನು ಕಾಣುತ್ತಿದ್ದಾರೆ. ಗುರುವಾರ ಸಂಜೆ 5 ಗಂಟೆಗೆ ಡಿಸ್ಚಾರ್ಜ್‌ ಮಾಡಲಾಗಿದ್ದು, ಮುಂದಿನ ಚಿಕಿತ್ಸೆ ಅವರ ನಿವಾಸದಲ್ಲೇ ನಡೆಯಲಿದೆ’ ಎಂದರು.

ಎದೆಯಲ್ಲಿ ಸೋಂಕಿನಿಂದಾಗಿ ಶ್ವಾಸನಾಳದ ಆಸ್ತಮಾ ಉಲ್ಬಣಗೊಂಡ ಕಾರಣ ಸೋನಿಯಾರನ್ನು ಸೋಮವಾರ ಆಸ್ಪತ್ರೆಗೆ ಸೇರಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೈದರಾಬಾದ್ ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ ಬೀದರ್ ಜಿಲ್ಲೆಯ ಅಲ್ತಾಫ್‌ ಬಂಧನ
ಭಾರತದ ರಕ್ಷಣಾ ಸಲಹೆಗಾರ ಅಜಿತ್‌ ದೋವಲ್ ಸ್ಮಾರ್ಟ್‌ಫೋನ್‌ ಬಳಸದಿರುವ ಹಿಂದಿನ ರಹಸ್ಯ