* ವಾಯುಪಡೆ ಪೈಲಟ್‌ಗಳ ತರಬೇತಿ ವಿಮಾನ
* ಗಿರಿಗಿಟ್ಲೆ ಪರೀಕ್ಷೆಯಲ್ಲಿ ಎಚ್‌ಎಎಲ್ ನಿರ್ಮಿತ ಐಜೆಟಿ ವಿಮಾನ ಪಾಸ್
ಬೆಂಗಳೂರು(ಜ.07): ವಾಯುಪಡೆಯ ಪೈಲಟ್‌ಗಳ ಎರಡನೇ ಹಂತದ ತರಬೇತಿಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ವಿನ್ಯಾಸ ಮಾಡಿ ಅಭಿವೃದ್ಧಿಪಡಿಸಿರುವ ಇಂಟರ್‌ಮೀಡಿಯೇಟ್ ಜೆಟ್ ಟ್ರೈನರ್ (ಐಜೆಟಿ) ಗುರುವಾರ ತನ್ನ ಗಿರಿಗಿಟ್ಲೆ (ಸ್ಪಿನ್) ಹಾಕುವ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.
ಈ ವಿಮಾನವು ಈ ಹಿಂದೆ ಎತ್ತರ ಹಾರುವ ಪರೀಕ್ಷೆ, ವೇಗ, ಭಾರ ಹೊರುವಿಕೆ, ಶಸ್ತ್ರಾಸ್ತ್ರ ಬಳಕೆ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿತ್ತು. ಆದರೆ 2016ರಲ್ಲಿ ನಡೆದ ಸ್ಪಿನ್ ಪರೀಕ್ಷೆಯಲ್ಲಿ ವಿಫಲವಾಗಿತ್ತು. ಆದ್ದರಿಂದ ಯೋಜನೆಗೆ ದೊಡ್ಡ ಹಿನ್ನಡೆಯಾಗಿತ್ತು.
undefined
ಪರೀಕ್ಷೆಯಲ್ಲಿ ವಿಫಲಗೊಂಡ ಬಳಿಕ ಎಚ್‌ಎಎಲ್ ಈ ವಿಮಾನದಲ್ಲಿ ಅನೇಕ ತಾಂತ್ರಿಕ ಬದಲಾವಣೆಗಳನ್ನು ಮಾಡಿತ್ತು. 2020ರ ಹೊತ್ತಿಗೆ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಎಚ್‌ಎಎಲ್ ಯಶಸ್ವಿಯಾಗಿತ್ತು. ಆದರೆ ಕೋವಿಡ್ ಕಾರಣದಿಂದ ಹಾರಾಟ ಪರೀಕ್ಷೆ ನಡೆಸಲು ಸಾಧ್ಯವಾಗಿರಲಿಲ್ಲ.
ಇದೀಗ ಎಚ್‌ಎಎಲ್‌ನ ನಿವೃತ್ತ ಗ್ರೂಪ್ ಕ್ಯಾಪ್ಟನ್‌ಗಳಾದ ಎಚ್.ವಿ.ಠಾಕೂರ್, ಎ. ಮೆನನ್ ಅವರು ಸ್ಪಿನ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಐಜೆಟಿ ಉಳಿದೆಲ್ಲ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಭಾರತೀಯ ವಾಯುಪಡೆಯಲ್ಲಿರುವ ‘ಕಿರಣ’ ತರಬೇತಿ ವಿಮಾನಗಳಿಗೆ ಪರ್ಯಾಯವಾಗಿ ಐಜೆಟಿಯನ್ನು ಬಳಸಿಕೊಳ್ಳಲು ವಾಯುಪಡೆ ಉದ್ದೇಶಿಸಿದೆ.