ಅಂತರ್ಜಾತಿ ವಿವಾಹದಿಂದ ಜಾತಿ ನಡುವಿನ ಉದ್ವಿಗ್ನತೆ ಶಮನ: ಸುಪ್ರೀಂ ತೀರ್ಪು!

By Suvarna NewsFirst Published Feb 13, 2021, 3:00 PM IST
Highlights

ಅಂತರ್ಜಾತಿ ವಿವಾಹ ತಪ್ಪಲ್ಲ| ಅಂತರ್ಜಾತಿ ವಿವಾಹದಿಂದ ಜಾತಿ ನಡುವಿನ ಉದ್ವಿಗ್ನತೆ ಶಮನ| ಬೆಳಗಾವಿ ಜೋಡಿಯ ಅಂತರ್‌ಜಾತಿ ವಿವಾಹಕ್ಕೆ ಅಸ್ತು

ನವದೆಹಲಿ(ಫೆ.13): ಅಂತರ್ಜಾತಿ ವಿವಾಹ ತಪ್ಪಲ್ಲ. ಇದರಿಂದಾಗಿ ಜಾತಿ-ಜಾತಿಗಳ ನಡುವಿನ ಉದ್ವಿಗ್ನತೆ ಶಮನವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ. ಇದೇ ವೇಳೆ ಬೆಳಗಾವಿ ಜೋಡಿಯ ಅಂತರ್‌ಜಾತಿ ವಿವಾಹಕ್ಕೆ ಅಸ್ತು ಎಂದಿದೆ.

ಬೆಳಗಾವಿ ಜೈನ್‌ ಎಂಜಿನಿಯರಿಂಗ್‌ ಕಾಲೇಜಲ್ಲಿ ವಿವಾಹವಾಗಿದ್ದ ಸಹಾಯಕ ಪ್ರಾಧ್ಯಾಪಕೊಬ್ಬರು, ಕಾಲೇಜೊಂದರಲ್ಲಿ ಉಪನ್ಯಾಸಕಿ ಆಗಿರುವ ಅನ್ಯ ಜಾತಿಯ ಯುವತಿಯನ್ನು ವಿವಾಹವಾಗಿದ್ದರು. ಆದರೆ ತಮ್ಮ ಇಚ್ಛೆಯ ವಿರುದ್ಧ ಮದುವೆ ನಡೆದಿದೆ ಎಂದು ಯುವತಿಯ ಪಾಲಕರು ನೀಡಿದ್ದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಾಗಿತ್ತು.

ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಸಂಜಯ್‌ ಕೌಲ್‌ ಹಾಗೂ ನ್ಯಾ| ಹೃಷಿಕೇಶ ರಾಯ್‌ ಅವರ ಪೀಠ, ‘ಹಳೆಯ ಕಟ್ಟಳೆಗಳನ್ನು ತೊಡೆದು ಇಂದು ಯುವಕ-ಯುವತಿಯರು ತಮಗೆ ಇಷ್ಟವಾದ ಸಂಗಾತಿಯನ್ನು ವರಿಸುವುದರಲ್ಲಿ ತಪ್ಪಿಲ್ಲ. ಅಂತರ್‌ಜಾತಿ ವಿವಾಹದಿಂದ ಜಾತಿ ದ್ವೇಷ ತಗ್ಗುತ್ತದೆ’ ಎಂದು ಹೇಳಿತು.

click me!