400 ಅಂಗನವಾಡಿಯ 5500 ಮಕ್ಕಳಿಗೆ ಹಾಲು ಕೊಡದೇ ಅನ್ಯಾಯ, ಸರ್ಕಾರದ ವಿರದ್ಧ ಭುಗಿಲೆದ್ದ ಆಕ್ರೋಶ

Published : Sep 25, 2026, 10:02 PM IST
no milk

ಸಾರಾಂಶ

ಅಧಿಕಾರಿಗಳು ಮತ್ತು ಹಾಲು ವಿತರಣೆ ಸಂಸ್ಥೆಯ ನಡುವಿನ ಬಿಲ್ ಪಾವತಿ ವಿವಾದದಿಂದಾಗಿ 400 ಅಂಗನವಾಡಿಗಳ 5,500 ಮಕ್ಕಳಿಗೆ ಹಾಲು ಪೂರೈಕೆ ಸ್ಥಗಿತಗೊಂಡಿದೆ. ಹಾಲಿನ ದರ ಏರಿಕೆ ಮತ್ತು ಬಿಲ್ ಪಾವತಿಯಲ್ಲಿನ ವಿಳಂಬವೇ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಸರ್ಕಾರದ ಪೌಷ್ಟಿಕಾಂಶ ಯೋಜನೆಗಳ ಅಡಿ ಮಕ್ಕಳಿಗೆ ಸಿಗಬೇಕಾದ ಪೌಷ್ಟಿಕತೆಗೆ ಪೆಟ್ಟು ಬಿದ್ದಿದೆ.

ನವದೆಹಲಿ: ಅಧಿಕಾರಿಗಳು ಮತ್ತು ಹಾಲು ಪೂರೈಕೆ ಸಂಸ್ಥೆಯ ನಡುವಿನ ವಿವಾದವು ಬಡ ಮಕ್ಕಳ ಮೇಲೆ ಪರಿಣಾಮ ಬೀರಿದೆ. ಬಿಲ್ ವಿಚಾರದಲ್ಲಿ ನಡೆದ ತಿಕ್ಕಾಟದಿಂದ 400 ಅಂಗನವಾಡಿಗಳ 5,500 ಮಕ್ಕಳು ನಿತ್ಯ ಹಾಲು ಇಲ್ಲದೇ ವಂಚಿತರಾಗಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮಕ್ಕಳಿಗೆ ಹೀಗೆಲ್ಲ ಅನ್ಯಾಯ ಮಾಡಬಾರದು. ನಿಮ್ಮ ಗಲಾಟೆ ಬದಿಗಿಟ್ಟು ಪುಟಾಣಿ ಮಕ್ಕಳಿಗೆ ಹಾಲು ನೀಡಿ ಎಂಬ ಆಗ್ರಹ ಕೇಳಿಬಂದಿದೆ.

ಅಸಲಿಗೆ ಆಗಿದ್ದೇನು?

ಅಂದ್ಹಾಗೆ ಮುಗ್ಧ ಮಕ್ಕಳಿಗೆ ಈ ಅನ್ಯಾಯ ಆಗ್ತಿರೋದು ಗುಜರಾತ್‌ನ ವಡೋದರಾದಲ್ಲಿ. ವಡೋದರಾ ಮಹಾನಗರ ಪಾಲಿಕೆ (VMC) ವ್ಯಾಪ್ತಿಯ ಅಂಗನವಾಡಿ ಮಕ್ಕಳು ಹಾಲಿನಿಂದ ವಂಚಿತರಾಗಿದ್ದಾರೆ. ಬಿಲ್ ಬಾಕಿ ಉಳಿಸಿಕೊಂಡಿರುವ ಕಾರಣಕ್ಕಾಗಿ ಅಮುಲ್ ಬ್ರ್ಯಾಂಡ್‌ನ ಮಾಲೀಕತ್ವದ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಸೆಪ್ಟೆಂಬರ್ 17ರಿಂದಲೇ ಹಾಲು ಪೂರೈಕೆ ಸ್ಥಗಿತಗೊಳಿಸಿದೆ.

ಅಲ್ಲಿನ ಅಧಿಕಾರಿ ಹೀರಲ್ ಠಾಕೋರ್ ನೀಡಿರುವ ಮಾಹಿತಿ ಪ್ರಕಾರ.. ಹಾಲಿನ ಬೆಲೆ ಏರಿಕೆಯೇ ಸಮಸ್ಯೆಗೆ ಮೂಲ ಕಾರಣ. ಅಂಗನವಾಡಿ ಮಕ್ಕಳಿಗೆ ಹಾಲು ಪೂರೈಸಲು 2012ರಲ್ಲಿ ಅಮೂಲ್ ಜೊತೆ ಪಾಲಿಕೆ ಒಂದು ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದ ಪ್ರಕಾರ ಮುಂಗಡವಾಗಿ ಮೂರು ತಿಂಗಳ ಹಣವನ್ನು ಕ್ರೆಡಿಟ್‌ ಇಡಲಾಗಿತ್ತು. ಆದರೆ ಹಾಲಿನ ಪಾಕೆಟ್ ದರ ದಿಢೀರ್ 9 ರಿಂದ 11.25ಕ್ಕೆ ಏರಿಕೆ ಆಗಿದೆ. ಇದರಿಂದ ಜುಲೈ ತಿಂಗಳು ಅಂತ್ಯದ ವೇಳೆಗೆ ಮುಂಗಡ ಹಣ ಖಾಲಿ ಆಗಿದೆ.

ಬಿಲ್ ವಿಚಾರಕ್ಕೆ ಗಲಾಟೆ

ಅಮುಲ್ ಆರೋಪದ ಪ್ರಕಾರ.. ಸರ್ಕಾರದಿಂದ ಸರಿಯಾದ ಸಮಯಕ್ಕೆ ಬಿಲ್ ಹಣ ಪಾವತಿ ಆಗುತ್ತಿಲ್ಲ. ಆಗಸ್ಟ್ 21ರಂದು ಜೂನ್ ತಿಂಗಳ ಬಿಲ್ ಕ್ಲಿಯರ್ ಮಾಡಿದ್ದರು. ಜುಲೈ ತಿಂಗಳ ಬಿಲ್ ಅನ್ನು ಹಲವು ಬಾರಿ ನೆನಪಿಸಿದ ನಂತರ ಸೆಪ್ಟೆಂಬರ್ ಮೂರರಂದು ಕ್ಲಿಯರ್ ಮಾಡಿದ್ದಾರೆ. ಆಗಸ್ಟ್ ತಿಂಗಳದ ಬಿಲ್ ಇನ್ನೂ ಸಿಕ್ಕಿಲ್ಲ ಎಂದು ಅಮೂಲ್ ಆರೋಪಿಸಿದೆ. ಅಮುಲ್ ಆರೋಪಕ್ಕೆ ಪಾಲಿಕೆ ಅಧಿಕಾರಿಗಳು ತಿರುಗೇಟು ನೀಡಿದ್ದಾರೆ. ಬಿಲ್ ತಡವಾಗಿ ಬರುತ್ತಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಾವು ಬಿಲ್ ಬಂದಾಗಲೆಲ್ಲ ಹಣವನ್ನು ನಿಯಮಿತವಾಗಿ ಪಾವತಿ ಮಾಡುತ್ತಿದ್ದೇವೆ. ಜೂನ್ ಮತ್ತು ಜುಲೈ ತಿಂಗಳಲ್ಲೂ ಹಣ ನೀಡಲಾಗಿದೆ. ಆಡಿಟ್ ಪ್ರಕ್ರಿಯೆಗೆ ಕನಿಷ್ಠ 5 ರಿಂದ 6 ದಿನ ಬೇಕಾಗುತ್ತದೆ. ಈ ಬಗ್ಗೆ ಯಾವುದೇ ತುರ್ತು ಸಂದೇಶ ನಮಗೆ ಬಂದಿರಲಿಲ್ಲ ಎಂದು ಹೇಳಿದ್ದಾರೆ.

ಮಕ್ಕಳ ಪೋಷ್ಠಿಕತೆಗೆ ಪೆಟ್ಟು

ಗುಜರಾತ್ ಸರ್ಕಾರದ ದೂಧ್ ಸಂಜೀವನಿ ಯೋಜನೆ ಮತ್ತು ಕೇಂದ್ರ ಸರ್ಕಾರದ ಪೋಷಣ್ 2.0 ಅಡಿಯಲ್ಲಿ 6 ತಿಂಗಳಿಂದ 6 ವರ್ಷದೊಳಗಿನ ಮಕ್ಕಳಿಗೆ ವಾರದಲ್ಲಿ ಐದು ದಿನ ಪ್ರತಿದಿನ ತಲಾ 100 ಮಿಲಿ ಹಾಲು ನೀಡಲಾಗುತ್ತದೆ. ಇದಕ್ಕಾಗಿ ವಡೋದರಾದ 400 ಅಂಗನವಾಡಿಗಳಿಗೆ ದಿನಕ್ಕೆ ಒಟ್ಟು 5,500 ಹಾಲಿನ ಪಾಕೆಟ್‌ಗಳು ಬೇಕಾಗುತ್ತವೆ. ಆದರೆ ಹಣದ ವಿಚಾರದಲ್ಲಿ ಶುರುವಾಗಿರುವ ಗಲಾಟೆಯಿಂದ ಮಕ್ಕಳಿಗೆ ಅನ್ಯಾಯ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ನನ್ನಪ್ಪನ ಕೊಲೆ ಮಾಡು, ಸಿಕ್ಕಿಬಿದ್ರೆ ನನ್​ ಹೆಂಡ್ತಿ ಹೆಸ್ರು ಹೇಳು' ಎಂದಿದ್ದ ಸುಪುತ್ರ! 6 ಲಕ್ಷಕ್ಕೆ ಸುಪಾರಿ
ಶಬರಿಮಲೆ ದೇಗುಲದಲ್ಲಿ ಚಿನ್ನದ ಕಿರೀಟ, ಹಾರ ನಾಪತ್ತೆ: ಅಸಲಿ ಬದಲಿಗೆ ನಕಲಿ ಹಾಕಿ ಖದೀಮರು ಎಸ್ಕೇಪ್​