
ಇಂದೋರ್(ಜ.26): ತಂತ್ರಜ್ಞಾನ ಮತ್ತು ವೇದ ಗಣಿತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಮಧ್ಯಪ್ರದೇಶದ ಇಂದೋರ್‌ನ 12 ವರ್ಷದ ಬಾಲಕ ಅವಿ ಶರ್ಮಾಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ 2022 ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಗರಿಕರಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದೆ. ಬಾಲ್‌ಮುಖಿ ರಾಮಾಯಣ ಎಂಬ ರಾಮಾಯಣದ 250 ಶ್ಲೋಕಗಳ ಸಂಕ್ಷೇಪಿತ ಆವೃತ್ತಿಯನ್ನು ಈ ಬಾಲಕ ಬರೆದಿದ್ದು, ಜೊತೆಗೆ ವ್ಯಕ್ತಿತ್ವ ವಿಕಸನ ಭಾಷಣಕಾರ ಹಾಗೂ ಸಂಯೋಜಕನಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಈ ಬಾಲಕ ಇಷ್ಟು ಸಣ್ಣ ವಯಸ್ಸಿನಲ್ಲಿ ಧ್ವನಿ ಕಮಾಂಡ್ ಸಿಸ್ಟಮ್ ಸಾಫ್ಟ್‌ವೇರ್ ಅನ್ನು ಸಹ ನಿರ್ಮಿಸಿದ್ದಾರೆ. ಅದಕ್ಕೆ ಸಣ್ಣದಾಗಿ ಮಾಧವ್ ಎಂದು ಹೆಸರಿಡಲಾಗಿದೆ (MADHAV-ಎಂದರೆ ನನ್ನ ಅಡ್ವಾನ್ಸ್ಡ್ ಡೊಮೆಸ್ಟಿಕ್ ಹ್ಯಾಂಡ್ಲಿಂಗ್ Ai ಆವೃತ್ತಿ) ಎಂಬುದಾಗಿದ್ದು, ಇದು ಧ್ವನಿ ಕಮಾಂಡ್ ಸಾಫ್ಟ್‌ವೇರ್ ಮೂಲಕ ಲ್ಯಾಪ್‌ಟಾಪ್ ಅನ್ನು ನಿರ್ವಹಿಸುತ್ತದೆ.
ಮಂಗಳೂರಿನ ಬಾಲೆಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರಧಾನ
ಈ ಪುಟ್ಟ ಬಾಲಕ ಅವಿಯನ್ನು ಅಭಿನಂದಿಸಿ ಪ್ರಧಾನಿ ಮೋದಿ, ಟ್ವೀಟ್ ಮಾಡಿದ್ದು, '12 ನೇ ವಯಸ್ಸಿನಲ್ಲಿ, ಅವಿ ಶರ್ಮಾ ಪ್ರೇರಕ ಭಾಷಣಕಾರರಾಗಿದ್ದಾರೆ ಮತ್ತು ಬಾಲ್ ಮುಖಿ ರಾಮಾಯಣ ಎಂಬ ರಾಮಾಯಣದ ಸಂಕ್ಷಿಪ್ತ ಆವೃತ್ತಿಯನ್ನು ಸಹ ರಚಿಸಿದ್ದಾರೆ. ರಾಷ್ಟ್ರೀಯ ಬಾಲ ಪುರಸ್ಕಾರ್ ಪ್ರಶಸ್ತಿಗೆ ಪಾತ್ರರಾದ ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವಿ, ಪ್ರಧಾನಿ ಮೋದಿಯವರೊಂದಿಗೆ ಮಾತನಾಡುವಾಗ ತನಗೆ ಹೆಮ್ಮೆ ಎನಿಸಿತು. ಪ್ರಧಾನಿ ತುಂಬಾ ಸಮಯ ನನ್ನ ಜೊತೆ ಮಾತನಾಡಿದರು ಎಂದು ಹೇಳಿದರು. ಇದು ಬಹಳ ಹೆಮ್ಮೆಯ ವಿಷಯ. ಅವಿ 2020 ರಲ್ಲಿ ರಾಮಾಯಣವನ್ನು ಬರೆದ ಮತ್ತು 2021 ರಲ್ಲಿ ಉಚಿತ ವೇದ ಗಣಿತ ಮತ್ತು ಕೋಡಿಂಗ್ ಅನ್ನು ಆನ್‌ಲೈನ್‌ನಲ್ಲಿ ಕಲಿಸಿದ. ಆತ ಪ್ರಮಾಣಪತ್ರ ಮತ್ತು 1 ಲಕ್ಷ ರೂಪಾಯಿಗಳನ್ನು ಸ್ವೀಕರಿಸಿದ್ದಾನೆ ಎಂದು ಅವಿ ಶರ್ಮಾ ತಾಯಿ ವಿನಿತಾ ಶರ್ಮಾ (Vinita Sharma) ಹೇಳಿದ್ದಾರೆ.
ಕರ್ನಾಟಕದ ಇಬ್ಬರಿಗೆ 'ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ'
ಭಾರತ ಸರ್ಕಾರವು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರದ ಅಡಿಯಲ್ಲಿ ಅಸಾಧಾರಣ ಸಾಮರ್ಥ್ಯ ತೋರಿದ ಮತ್ತು ನಾವೀನ್ಯತೆ, ಪಾಂಡಿತ್ಯಪೂರ್ಣ ಸಾಧನೆಗಳು, ಕ್ರೀಡೆ, ಕಲೆ ಮತ್ತು ಸಂಸ್ಕೃತಿ, ಸಮಾಜ ಸೇವೆ ಮತ್ತು ಶೌರ್ಯ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಕ್ಕಳಿಗೆ ಪ್ರತಿವರ್ಷ ಬಾಲ ಪುರಸ್ಕಾರವನ್ನು ನೀಡುತ್ತದೆ.
ಕ್ರೀಡೆ, ಕಲೆ, ಸಾಹಿತ್ಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಕರ್ನಾಟಕದ ಮೂವರು ಸೇರಿದಂತೆ ಒಟ್ಟು 29 ಮಕ್ಕಳಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ 2022ನೇ ಸಾಲಿನ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದ್ದರು. ಇದೇ ವೇಳೆ ಕಳೆದ ವರ್ಷದ ಕೆಲ ವಿಜೇತರಿಗೂ ಪ್ರಶಸ್ತಿ ವಿತರಿಸಲಾಯಿತು. ಕೋವಿಡ್ ಹಿನ್ನೆಲೆಯಲ್ಲಿ ವಚ್ರ್ಯುವಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೋದಿ ಅವರು ಮಕ್ಕಳಿಗೆ ಡಿಜಿಟಲ್ ಪ್ರಮಾಣ ಪತ್ರ ವಿತರಿಸಿದರು, ಜೊತೆಗೆ ಅವರ ಬ್ಯಾಂಕ್ ಖಾತೆಗಳಿಗೆ ತಲಾ 1 ಲಕ್ಷ ರು. ನಗದು ವರ್ಗಾಯಿಸಿದರು. ಪ್ರಶಸ್ತಿ ಪುರಸ್ಕೃತರದಲ್ಲಿ 14 ಬಾಲಕಿಯರು, 15 ಬಾಲಕರು ಸೇರಿದ್ದಾರೆ.
ಬಳಿಕ ಮಕ್ಕಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಸರ್ಕಾರ ಜಾರಿಗೊಳಿಸುತ್ತಿರುವ ಎಲ್ಲಾ ಯೋಜನೆಗಳು ಸಹ ಯುವಜನತೆಯನ್ನೇ ಗಮನದಲ್ಲಿಟ್ಟುಕೊಂಡಿದೆ. ಮಕ್ಕಳು ಪ್ರಾದೇಶಿಕತೆ ದನಿಯಾಗಬೇಕು ಎಂದು ಕರೆಕೊಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ