
ಹೈದರಾಬಾದ್ (ನ.20): ಈಗಾಗಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮಾಸಿಕ ಹಣ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದ ತೆಲಂಗಾಣ ಸರ್ಕಾರ ಈಗ ಉಚಿತ ಸೀರೆ ಯೋಜನೆ ಜಾರಿಗೆ ತಂದಿದೆ.
ಭಾರತದ ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ವಾರ್ಷಿಕೋತ್ಸವದಂದು 1 ಕೋಟಿ ಮಹಿಳೆಯರಿಗೆ ಸೇರೆ ಹಂಚುವ ‘ಇಂದಿರಮ್ಮ ಸೀರೆ ವಿತರಣೆ ಯೋಜನೆ’ಯನ್ನು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬುಧವಾರ ಉದ್ಘಾಟಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ರೆಡ್ಡಿ, ‘ಸೀರೆ ವಿತರಣೆ ಯೋಜನೆ 2 ಹಂತದಲ್ಲಿ ಈ ಯೋಜನೆ ಜಾರಿಯಾಗಲಿದೆ. ಮೊದಲು ಡಿ.9ರ ಒಳಗೆ ಗ್ರಾಮೀಣ ಭಾಗದ ಅರ್ಹ ಮಹಿಳೆಯರಿಗೆ ಸೀರೆ ನೀಡಲಾಗುವುದು. ಬಳಿಕ ಮಾ.1-8ರ ಹೊತ್ತಿಗೆ ನಗರಪ್ರದೇಶದಲ್ಲಿ 65 ಲಕ್ಷ ಸೀರೆಗಳ ವಿತರಣೆಯಾಗುವುದು ಎಂದರು.
ಇಂದಿರಾ ಅವರಿಂದ ಪ್ರೇರಿತರಾಗಿ ನಮ್ಮ ಸರ್ಕಾರ ಹಲವು ಮಹಿಳಾ ಸಬಲೀಕರಣ ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ರೆಡ್ಡಿ ಹೇಳಿದರು. ಇದೇ ವೇಳೆ, ಆ ಸೀರೆ ಉಟ್ಟು ಮಹಿಳಾ ಸ್ವಾಭಿಮಾನವನ್ನು ಪ್ರದರ್ಶಿಸುವಂತೆ ಸಚಿವೆಯರು ಮತ್ತು ಶಾಸಕಿಯರಿಗೆ ಕರೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ