ಮಹಿಳಾ ದಿನಾಚರಣೆಗೆ ವಂದೇ ಭಾರತ್ ರೈಲು ಪ್ರಯಾಣದಲ್ಲಿದೆ ಸರ್ಪ್ರೈಸ್

Published : Mar 08, 2025, 12:43 PM ISTUpdated : Mar 08, 2025, 12:46 PM IST
ಮಹಿಳಾ ದಿನಾಚರಣೆಗೆ ವಂದೇ ಭಾರತ್ ರೈಲು ಪ್ರಯಾಣದಲ್ಲಿದೆ ಸರ್ಪ್ರೈಸ್

ಸಾರಾಂಶ

ಮಹಿಳಾ ದಿನಾಚರಣೆಗೆ ವಂದೇ ಭಾರತ್ ರೈಲು ಪ್ರಯಾಣದಲ್ಲಿ ಕೆಲ ಅಚ್ಚರಿ ಹಾಗೂ ವಿಶೇಷತೆ ಇದೆ. ಈ ಬಾರಿ ಭಾರತೀಯ ರೈಲ್ವೇ ನೀಡಿದ ಉಡುಗೊರೆ ಏನು?

ನವದೆಹಲಿ(ಮಾ.08) ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಭ್ರಮ ಜೋರಾಗಿದೆ. ಮಹಿಳೆಯರಿಗೆ ವಿಶೇಷ ಉಡುಗೊರೆ ಸೇರಿದಂತೆ ಹಲವು ಸರ್ಪ್ರೈಸ್‌ಗಳನ್ನು ಹಲವು ಕಂಪನಿ, ಸಂಘ ಸಂಸ್ಥೆಗಳು ನೀಡುತ್ತಿದೆ. ಇದೀಗ ಭಾರತೀಯ ರೈಲ್ವೇ ಇದೀಗ ಮಹಿಳಾ ದಿನಾಚರಣೆಯಂದು ಕೆಲ ಅಚ್ಚರಿ ನೀಡಿದೆ. ಅದರಲ್ಲೂ ವಿಶೇಷವಾಗಿ ವಂದೇ ಭಾರತ್ ರೈಲು ಪ್ರಯಾಣ ಮಾಡುವವರಿಗೆ ಈ ಅಚ್ಚರಿ ಪ್ರಯೋಜನ ಸಿಗಲಿದೆ. ಹೌದು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನ, ವಂದೇ ಭಾರತ್ ರೈಲಿನ ಸಂಪೂರ್ಣ ಸಿಬ್ಬಂದಿಗಳು ಮಹಿಳೆಯರಾಗಿದ್ದಾರೆ. ಈ ಮೂಲಕ ಭಾರತೀಯ ರೈಲ್ವೇ ವಿಶೇಷ ರೀತಿಯಲ್ಲಿ ಮಹಿಳಾ ದಿನಾಚರಣೆ ಆಚರಿಸಿದೆ.

ಮಹಿಳಿ ದಿನಾಚರಣೆಯ ಈ ವಿಶೇಷ ರೈಲಿನಲ್ಲಿ  ಲೋಕೋ ಪೈಲೆಟ್ ಸುರೇಖ ಯಾದವ್, ಅಸಿಸ್ಟೆಂಟ್ ಲೋಕೋ ಪೈಲೆಟ್ ಸಂಗೀತಾ ಕುಮಾರಿ, ಟ್ರೈನ್ ಆಪರೇಶನ್ ಮ್ಯಾನೇಜರ್ ಶ್ವೇತಾ ಘೋನೆ,  ಟಿಕೆಟ್ ಪರಿಶೀಲನಾ ಮುಖ್ಯಸ್ಥೆ ಅನುಷಾ ಕೆಪಿ ಹಾಗೂ ಎಂಜೆ ರಜಪೂತ್, ಸೀನಿಯರ್ ಟಿಕೆಟ್ ಎಕ್ಸಾಮಿನರ್ ಸಾರಿಗಾ ಒಜಾ, ಸುವರ್ಣ ಪಶ್ತೆ, ಕವಿತಾ ಮರಲ್, ಮನೀಶಾ ರಾಮ್ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಮಹಿಳೆಯರೇ ಆಗಿದ್ದಾರೆ. 

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್, ದೇಶದ ಎಲ್ಲಾ ಭಾಗದಿಂದ ವಂದೇ ಭಾರತ್, ನಮೋ ಭಾರತ್ ಟ್ರೈನ್

ರೈಲು ಸಂಖ್ಯೆ 22223 ಸಿಎಸ್ಎಂಟಿಯಿಂದ ಹೊರಡಲಿರುವ ಈ ವಂದೇ ಭಾರತ್ ಸಾಯಿನಗರ್ ಶಿರಡಿಗೆ ಪ್ರಯಾಣ ಮಾಡಲಿದೆ. ಛಿತ್ರಪತಿ ಶಿವಾಜಿ ಟರ್ಮನಿಲ್ ಮುಂಬೈನಿಂದ ಹೊರಡು ಈ ರೈಲು ಇಂದು ಸಂಪೂರ್ಣ ಮಹಿಳಾ ಸಿಬ್ಬಂದಿಗಳನ್ನು ಹೊಂದಿರಲಿದ್ದಾರೆ. ಲೋಕೋ ಪೈಲೆಟ್, ಟಿಟಿ ಸೇರಿದಂತೆ ರೈಲಿನ ಎಲ್ಲಾ ಸಿಬ್ಬಂದಿಗಳು ಮಹಿಳೆಯರಾಗಿದ್ದಾರೆ. 

 

 

ಈ ಕುರಿತು ಟ್ವೀಟ್ ಮಾಡಿರುವ ರೈಲ್ವೇ ಇಲಾಖೆ, ಮಹಿಳಾ ಸಬಲೀಕರಣದತ್ತ ಭಾರತೀಯ ರೈಲ್ವೇಯ ಬದ್ಧತೆ ಭಾಗವಾಗಿ ಈ ಪ್ರಯತ್ನ ಮಾಡಲಾಗಿದೆ ಎಂದಿದೆ. ಇದರ ಜೊತೆಗೆ ಭಾರತೀಯ ರೈಲ್ವೇಯಲ್ಲಿ ಮಹಿಳಾ ಉದ್ಯೋಗ, ಸಿಬ್ಬಂದಿಗಳ ಉತ್ತೇಜನಕ್ಕಾಗಿ ಈ ಅಭಿಯಾನ ಮಾಡಲಾಗಿದೆ. ಮಹಿಳಾ ದಿನಾಚರಣೆ ಮತ್ತಷ್ಟು ವಿಶೇಷವಾಗಿಸಲು ಮಹಿಳಾ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿ ಎಂದು ರೈಲ್ವೇ ಹೇಳಿದೆ.ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಭಾರತೀಯ ರೈಲ್ವೇಯ ಈ ಪ್ರಯತ್ನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.ಈ ರೀತಿಯ ಪ್ರಯತ್ನಗಳು ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸಲಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  

ಮಾರ್ಚ್ 8 ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಇದೀಗ ಭಾರತೀಯ ರೈಲ್ವೇ ವಿಶೇಷ ರೀತಿಯಲ್ಲಿ ಮಹಿಳಾ ದಿನಾಚರಣೆ ಆಚರಿಸಿದೆ.

ಹುಬ್ಬಳ್ಳಿ ವಂದೇ ಭಾರತ್ ರೈಲು ವೇಳಾಪಟ್ಟಿಯಲ್ಲಿ ಮಹತ್ತರ ಬದಲಾವಣೆ,ಪ್ರಯಾಣಿಕರೆ ಗಮನಿಸಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು